ಬೆಂಗಳೂರು: ಕರ್ನಾಟಕ ಉಚಿತ ಬಸ್ ಯೋಜನೆ ರದ್ದಾಗುವ ಸಾಧ್ಯತೆ! ಇಲ್ಲಿದೆ ಬಿಗ್ ಅಪ್ಡೇಟ್

Story Highlights

ಕರ್ನಾಟಕ ಮಹಿಳೆಯರಿಗೆ ನೀಡಿರುವ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಮರು ಪರಿಶೀಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಹಿರಂಗಪಡಿಸಿದ್ದಾರೆ.

ಬೆಂಗಳೂರು (Bengaluru): ಕರ್ನಾಟಕದ ಮಹಿಳೆಯರಿಗೆ ನೀಡಿರುವ ಉಚಿತ ಬಸ್ (Free Bus) ಪ್ರಯಾಣ ಸೌಲಭ್ಯವನ್ನು ಮರು ಪರಿಶೀಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಬಹಿರಂಗಪಡಿಸಿದ್ದಾರೆ.

ಅನೇಕ ಮಹಿಳೆಯರು ಟಿಕೆಟ್ ಖರೀದಿಸಲು ಮತ್ತು ಪ್ರಯಾಣಿಸಲು ಮುಂದೆ ಬರುತ್ತಿರುವುದರಿಂದ ಈ ಯೋಜನೆಯನ್ನು ಮರು ಪರಿಶೀಲಿಸಲಾಗುವುದು ಎಂದು ಹೇಳಿದರು. ಶಿವಕುಮಾರ್ ಅವರು ಬುಧವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (KSRTC) ಐರಾವತ ಕ್ಲಬ್ ಕ್ಲಾಸ್ 2.0 ಬಸ್‌ಗಳನ್ನು ಪರಿಚಯಿಸಿದ ನಂತರ ಮಾತನಾಡಿದರು.

‘ಸಾಮಾಜಿಕ ಮಾಧ್ಯಮಗಳು ಮತ್ತು ಇ-ಮೇಲ್‌ಗಳ ಮೂಲಕ, ಅನೇಕ ಮಹಿಳೆಯರು ಟಿಕೆಟ್‌ ಪಾವತಿಸಿ ಪ್ರಯಾಣಿಸುವ ಆಶಯ ವ್ಯಕ್ತಪಡಿಸಿ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದು ಶಿವಕುಮಾರ್ ಹೇಳಿದರು.

ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯು ಕರ್ನಾಟಕದಲ್ಲಿ (Karnataka Shakti Scheme) ಕಾಂಗ್ರೆಸ್ ನೀಡಿದ ಐದು ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ . ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಕಳೆದ ವರ್ಷ ಜೂನ್ 11 ರಂದು ಶಕ್ತಿ ಯೋಜನೆಯನ್ನು ಪ್ರಾರಂಭಿಸಿತು.

ಈ ತಿಂಗಳ 18 ರವರೆಗೆ 311 ಕೋಟಿ ಉಚಿತ ಪ್ರಯಾಣ ನಡೆದಿದೆ.. ಇದಕ್ಕಾಗಿ ರಾಜ್ಯ ಸರ್ಕಾರ ರೂ. 7,507 ಕೋಟಿ ವೆಚ್ಚ ಮಾಡಲಾಗಿದೆ. ”ಶೇ. 5ರಿಂದ 10ರಷ್ಟು ಮಹಿಳೆಯರು ಟಿಕೆಟ್‌ಗಾಗಿ ಸ್ವಯಂ ಹಣ ಪಾವತಿಸುತ್ತಿದ್ದಾರೆ. ಕಂಡಕ್ಟರ್‌ಗಳು ಸ್ವೀಕರಿಸುತ್ತಿಲ್ಲ ಎಂದು ದೂರುತ್ತಾರೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga reddy) ಅವರೊಂದಿಗೆ ಚರ್ಚಿಸುತ್ತೇನೆ,’’ ಎಂದು ಶಿವಕುಮಾರ್ ವಿವರಿಸಿದರು.

The possibility of canceling the free bus scheme Shakti Yojane in Karnataka

Related Stories