ಈ ಒಂದು ಕೆಲಸ ಮಾಡದೆ ಹೋದರೆ ನಿಮ್ಮ ಪಾಲಿಗಿಲ್ಲ ಫ್ರೀ ವಿದ್ಯುತ್! ಹೊಸ ನಿಯಮ ತಂದ ಸರ್ಕಾರ!

Story Highlights

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು, ಜುಲೈ 27ರ ಒಳಗೆ ಅರ್ಹತೆ ಇರುವ ಎಲ್ಲಾ ಜನರು ಅರ್ಜಿ ಸಲ್ಲಿಸಬೇಕು.

ಕಾಂಗ್ರೆಸ್ (Congress Government) ಸರ್ಕಾರ ಎಲೆಕ್ಷನ್ (Vidhanasabha Election) ಸಮಯದಲ್ಲಿ ಗೃಹಜ್ಯೋತಿ ಯೋಜನೆಯ ಮೂಲಕ ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ (Free Electricity) ಕೊಡುವ ಭರವಸೆ ನೀಡಿತ್ತು. ಈಗ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು, ಜುಲೈ 27ರ ಒಳಗೆ ಅರ್ಹತೆ ಇರುವ ಎಲ್ಲಾ ಜನರು ಅರ್ಜಿ ಸಲ್ಲಿಸಬೇಕು.

ಇಲ್ಲದೆ ಹೋದರೆ ನೀವು ಆಗಸ್ಟ್ ತಿಂಗಳಿನಿಂದ ಉಚಿತ ವಿದ್ಯುತ್ ಪಡೆಯಲು ಸಾಧ್ಯ ಆಗುವುದಿಲ್ಲ, ನೀವೇ ಮನೆಯ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ..ಈಗ ಕಾಂಗ್ರೆಸ್ ಸರ್ಕಾರ ತಂದಿರುವ ಹೊಸ ನಿಯಮ ಇದು. ಇದೀಗ ಯೋಜನೆಯ ಬಗ್ಗೆ ಸಿಕ್ಕಿರುವ ಹೊಸ ಮಾಹಿತಿ ಇದಾಗಿದ್ದು, ನೀವು ಇನ್ನು ಅರ್ಜಿ (Gruha Jyothi Application) ಸಲ್ಲಿಸದೆ ಇದ್ದರೆ, 27ರ ಒಳಗೆ ಸಲ್ಲಿಸಿಬಿಟ್ಟರೆ ಒಳ್ಳೆಯದು.

ಈ ನಿಯಮದ ಬಗ್ಗೆ ರಾಜ್ಯದ ಇಂಧನ ಸಚಿವರಾದ ಕೆ.ಜೆ.ಜಾರ್ಜ್ (KJ George) ಅವರು ಮಾತನಾಡಿದ್ದು.. ರಾಜ್ಯದ ಜನರು 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ ಪಡೆಯಬೇಕು, ಮನೆಯ ವಿದ್ಯುತ್ ಬಿಲ್ 0 ಬರಬೇಕು ಎಂದರೆ ಜುಲೈ 27ರ ಒಳಗೆ ಅರ್ಜಿ ಸಲ್ಲಿಸಿ ಎಂದಿದ್ದಾರೆ. ಈ ಹೊಸ ಸೂಚನೆಯು ಇತ್ತೀಚೆಗೆ ಸರ್ಕಾರದಿಂದ ಹೊರಬಂದಿದೆ.

ಕೆ.ಜೆ. ಜಾರ್ಜ್ ಅವರು ನೀಡಿರುವ ಮಾಹಿತಿ ಮತ್ತು ಸರ್ಕಾರದಿಂದ ಸಿಕ್ಕಿರುವ ಅಧಿಸೂಚನೆಯ ಪ್ರಕಾರ, ಗೃಹಜ್ಯೋತಿ (Gruha Jyothi) ಯೋಜನೆಗೆ ಅರ್ಜಿ ಸಲ್ಲಿಸಲು ಇದು ಅಂತಿಮ ದಿನಾಂಕ ಅಲ್ಲ. ಆದರೆ ನೀವು ಜುಲೈ 27ರ ಒಳಗೆ ಅರ್ಜಿ ಸಲ್ಲಿಸಿದರೆ ಆಗಸ್ಟ್ (August) ತಿಂಗಳು ನಿಮ್ಮ ಮನೆಗೆ ಬರುವ ವಿದ್ಯುತ್ ಬಿಲ್ ಸೊನ್ನೆ ಆಗಿರುತ್ತದೆ, ನೀವು ವಿದ್ಯುತ್ ಬಿಲ್ (Electricity Bill) ಕಟ್ಟುವ ಅವಶ್ಯಕತೆಯೇ ಇರುವುದಿಲ್ಲ..

ಜುಲೈ 27ರ ನಂತರ ಕೂಡ ನೀವು ಅರ್ಜಿ ಸಲ್ಲಿಸಬಹುದು. ಆದರೆ ಜುಲೈ 27ರ ಬಳಿಕ ಅರ್ಜಿ ಸಲ್ಲಿಸುವವರು ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ. ಸರ್ಕಾರ ನೀಡಿರುವ ಅಧಿಸೂಚನೆಯ (New Rules) ಅರ್ಥ ಇದು. ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ರಾಜ್ಯದ ಪ್ರತಿಯೊಂದು ಮನೆಯು ಪಡೆದುಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ.

Gruha Jyothi free electricity Scheme

ಜನರಿಗೆ ಸಹಾಯ ಆಗಲೆಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇನ್ನು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕ ಜೂನ್ 18ರಿಂದಲೇ ಶುರುವಾಗಿದೆ. ಜೂನ್ 18ರಿಂದ ಈಗಿನವರೆಗೂ ಬಹಳಷ್ಟು ಜನರು ಅರ್ಜಿ ಸಲ್ಲಿಸಿದ್ದು, ಅವರೆಲ್ಲರೂ ಆಗಸ್ಟ್ ಇಂದ ಉಚಿತ ವಿದ್ಯುತ್ ಸೌಲಭ್ಯ ಪಡೆಯಬಹುದು.

ಈಗಾಗಲೇ 1 ಕೋಟಿಗಿಂತ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.. ಒಂದು ವೇಳೆ ನೀವು ಇನ್ನು ಅರ್ಜಿ ಸಲ್ಲಿಸಿಲ್ಲ ಎಂದರೆ, ಸೇವಾಸಿಂಧು ಪೋರ್ಟಲ್ (Seva Sindhu) ಮೂಲಕ ಅರ್ಜಿ ಸಲ್ಲಿಸಬಹುದು. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ.
https://sevasindhugs.karnataka.gov.in/

ಈ ವೆಬ್ಸೈಟ್ ಓಪನ್ ಮಾಡಿ ಗೃಹಜ್ಯೋತಿ ಯೋಜನೆಗೆ ಅರ್ಜಿ ರಾಜ್ಯದ ಎಲ್ಲಾ ಜನರು ಅರ್ಜಿ ಸಲ್ಲಿಸಿ. ಜುಲೈ 27ರ ಒಳಗೆ ನೀವು ಅರ್ಜಿ ಹಾಕಿಬಿಟ್ಟರೆ, ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ಮಾತ್ರ ನೀವು ಕಟ್ಟಬೇಕಾಗುತ್ತದೆ. ಆಗಸ್ಟ್ ತಿಂಗಳಿನಿಂದ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಬರುವುದಿಲ್ಲ. ಆದರೆ ನೀವು ಜುಲೈ 27ರವರೆಗು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಹೋದರೆ..

ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ಕಟ್ಟುವ ತಲೆ ನೋವು ಕೂಡ ನಿಮ್ಮ ಮೇಲೆಯೇ ಬೀಳುತ್ತದೆ.  ಜುಲೈ 27ಕ್ಕೆ ಇನ್ನು ಉಳಿದಿರುವುದು 10 ದಿನಗಳು ಮಾತ್ರ, ತಡಮಾಡದೆ ಈಗಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ.

These people will not get free electricity in August

Related Stories