ಗೃಹಲಕ್ಷ್ಮಿ ಯೋಜನೆಯಲ್ಲಿ 3ನೇ ಕಂತಿನ ಹಣ ಜಮೆ ಆಗಬೇಕಾದರೆ ಈ ಕೆಲಸ ಕಡ್ಡಾಯ, ಹೊಸ ಬದಲಾವಣೆ
ಗೃಹಲಕ್ಷ್ಮಿ ಯೋಜನೆ(Gruha Lakshmi yojana ) ಹಣವನ್ನು ಸರ್ಕಾರ ರಾಜ್ಯದ(Karnataka Government) ಲಕ್ಷಾಂತರ ಮಹಿಳೆಯರಿಗೆ ನೀಡುವಂತಹ ಕೆಲಸವನ್ನು ಮಾಡುತ್ತಿದೆ. ಇದೀಗ ಮೂರನೇ ಕಂತಿನ ಹಣಕ್ಕೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ
ಈಗಾಗಲೇ ಆಗಸ್ಟ್ 30 ರಿಂದ ಪ್ರಾರಂಭವಾಗಿರುವಂತಹ ಗೃಹಲಕ್ಷ್ಮಿ ಯೋಜನೆ(Gruha Lakshmi yojana ) ಹಣವನ್ನು ಸರ್ಕಾರ ರಾಜ್ಯದ(Karnataka Government) ಲಕ್ಷಾಂತರ ಮಹಿಳೆಯರಿಗೆ ನೀಡುವಂತಹ ಕೆಲಸವನ್ನು ಮಾಡುತ್ತಿದೆ. ಆದರೆ ಇದರ ನಡುವೆ ಕೆಲವರಿಗೆ ಮೊದಲ ಕಂತಿನ ಹಣ ಹಾಗೂ ಎರಡನೇ ಕಂತಿನ ಹಣ ಕೂಡ ಸಿಕ್ಕಿಲ್ಲ ಅದಾಗಲೇ ಮೂರನೇ ಕಂತಿನ ಹಣ ಬಿಡುಗಡೆಯಾಗುವ ಸಂದರ್ಭ ಕೂಡ ಹತ್ತಿರವಾಗಿದೆ. ಹಾಗಿದ್ರೆ ಬನ್ನಿ ಮೂರನೇ ಕಂತಿನ ಹಣವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇವತ್ತಿನ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ.
ಮೂರನೇ ಕಂತಿನ ಹಣವನ್ನು ಪಡೆದುಕೊಳ್ಳುವುದು ಹೇಗೆ ಗೊತ್ತಾ?
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಹಣವನ್ನು ನೇರವಾಗಿ ಟ್ರಾನ್ಸ್ಫರ್(Direct Transfer) ಮಾಡುವಂತಹ ಆದೇಶವನ್ನು ಕೂಡ ನೀಡಲಾಗಿದೆ.
ಈಗಾಗಲೇ ಈ ಯೋಜನೆ ಅಡಿಯಲ್ಲಿ ಮೊದಲ ಎರಡು ಕಂತುಗಳನ್ನು ಸರ್ಕಾರದಿಂದ ಟ್ರಾನ್ಸ್ಫರ್ ಮಾಡಲಾಗಿದ್ದು ಮೂರನೇ ಕಂತಿನ ಹಣವನ್ನು ಮುಂದಿನ್ ತಿಂಗಳು ಪಡೆಯುವುದಕ್ಕಿಂತ ಮುಂಚೆ ಈ ಕೆಲಸವನ್ನು ಮಾಡಲೇಬೇಕು ಎನ್ನುವುದಾಗಿ ಗ್ರಹಿಣಿಯರಿಗೆ ಹೇಳಿಕೊಂಡಿದೆ.
ಪ್ರತಿ ತಿಂಗಳು ಈ ಯೋಜನೆ ಅಡಿಯಲ್ಲಿ 2000 ರೂಪಾಯಿ ಹಣವನ್ನು ಖಾತೆಗೆ ಹಾಕುವಂತಹ ಕೆಲಸವನ್ನು ಸರ್ಕಾರ ನಿಯಮಿತವಾಗಿ ಮಾಡಿಕೊಂಡು ಬರುತ್ತಿದ್ದು ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್(direct bank transfer) ಮೂಲಕ ಹಣವನ್ನು ಟ್ರಾನ್ಸ್ಫರ್ ಮಾಡಲಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಈ ನಾಲ್ಕು ಪ್ರಮುಖ ದಾಖಲೆಗಳನ್ನು ನೀಡುವ ಮೂಲಕ ಮೂರನೇ ಕಂತಿನ ಹಣವನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ಪಡೆದುಕೊಳ್ಳಲು ನೀಡಬೇಕಾದ ದಾಖಲೆ ಪತ್ರಗಳು
ಹೌದು ಮೂರನೇ ಕಂತಿನ ಹಣವನ್ನು ಪಡೆದುಕೊಳ್ಳಲು ಮಹಿಳೆಯರು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕಚೇರಿಗೆ ಹೋಗಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ(Bank passbook) ಹಾಗೂ ಅರ್ಜಿ ಸ್ವೀಕೃತಿ ಪತ್ರದ ಜೆರಾಕ್ಸ್ ಅನ್ನು ನೀಡಬೇಕಾಗಿರುತ್ತದೆ.
ಇವುಗಳನ್ನು ನೀಡಿದರೆ ಸಾಕು, ನೀವು ಮೂರನೇ ಕಂತಿನ ಹಣವನ್ನು ಕೂಡ ಪಡೆದುಕೊಳ್ಳಬಹುದು ಹಾಗೂ ಈ ಹಿಂದಿನ ಎರಡು ಕಂತುಗಳು ಬಂದಿಲ್ಲ ಎಂದಾದರೆ ಅದು ಯಾಕೆ ಬಂದಿಲ್ಲ ಎನ್ನುವಂತಹ ಮಾಹಿತಿಗಳು ಕೂಡ ಅಧಿಕಾರಿಗಳು ನೀಡುತ್ತಾರೆ. ರಾಜ್ಯದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಹಣವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತದೆ.
This work is mandatory for the third installment of Grilahakshmi Yojana to be deposited, a new change
Follow us On
Google News |