ಬೆಂಗಳೂರು ನಗರದಲ್ಲಿ ಸಾವಿರಾರು ಬಿಪಿಎಲ್ ಪಡಿತರ ಚೀಟಿ ರದ್ದು
ಆತಂಕಗೊಂಡಿರುವ ನೂರಾರು ನಾಗರಿಕರು, ಬೆಂಗಳೂರು ನಗರ ಜಿಲ್ಲಾಧಿಕಾರಿಯ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು
- ಬೆಂಗಳೂರಿನಲ್ಲಿ ಸಾವಿರಾರು ಬಿಪಿಎಲ್ ಪಡಿತರ ಚೀಟಿ ರದ್ದು.
- ಅರ್ಹ ಫಲಾನುಭವಿಗಳ ಕಾರ್ಡುಗಳು ಕೂಡ ಕ್ಯಾನ್ಸಲ್.
- ಬೆಂಗಳೂರು ನಗರ ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ.
ಬೆಂಗಳೂರು (Bengaluru): ಬೆಂಗಳೂರಿನಲ್ಲಿ ಸಾವಿರಾರು ಕುಟುಂಬಗಳ ಬಿಪಿಎಲ್ (Below Poverty Line) ಪಡಿತರ ಚೀಟಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ರದ್ದುಗೊಳಿಸಲಾಗಿದೆ. ಅರ್ಹ ಫಲಾನುಭೋಗಿಗಳ ಪಡಿತರ ಚೀಟಿಗಳನ್ನು (Ration Card) ಕೂಡಾ ತೆಗೆದುಹಾಕಲಾಗಿದೆ, ಇದರಿಂದ ಅವರು ದಿನಸಿ (food supplies) ಇಲ್ಲದೆ ಪರಿತಪಿಸುತ್ತಿದ್ದಾರೆ.
ನಾಗರಿಕರು ration ಅಂಗಡಿಗಳಿಗೆ ತೆರಳಿದಾಗ, ಅವರಿಗೆ “ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ” ಅಥವಾ “ನಿಮ್ಮ ಬಿಪಿಎಲ್ ಕಾರ್ಡ್ ಈಗ ಎಪಿಎಲ್ (Above Poverty Line) ಕಾರ್ಡ್ ಆಗಿದೆ” ಎಂಬ ಉತ್ತರಗಳು ಕೇಳಿಬರುತ್ತಿದ್ದು, ದಿನಸಿ ನೀಡಲು ಸಾಧ್ಯವಿಲ್ಲ” ಎಂದು ತಿಳಿಸುತ್ತಿದ್ದಾರೆ.
ಈ ಬಗ್ಗೆ ಆತಂಕಗೊಂಡಿರುವ ನೂರಾರು ನಾಗರಿಕರು, ಬೆಂಗಳೂರು ನಗರ ಜಿಲ್ಲಾಧಿಕಾರಿಯ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಸಮಸ್ಯೆಯ ತಕ್ಷಣ ಪರಿಹಾರಕ್ಕೆ ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದರು.
Thousands of BPL ration cards canceled in Bengaluru