ಉಡುಪಿಗೆ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿನ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಸಾವು
ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ಬೆಂಗಳೂರಿನ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು (Bengaluru): ಬೆಂಗಳೂರು ಯುವಕರು ಪ್ರವಾಸಕ್ಕೆ ಉಡುಪಿಗೆ (Udupi) ಹೋಗಿದ್ದರು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ ಪ್ರವಾಸ ಮುಗಿಸಿ ಮನೆ ಸೇರಿಕೊಳ್ಳುತ್ತಿದ್ದರು. ಆದರೆ ಅವರ ಪಾಲಿನ ಜವರಾಯ ಸಮುದ್ರದಲ್ಲಿ ಕಾದು ಕುಳಿತಿದ್ದ.
ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ಬೆಂಗಳೂರಿನ ಇಬ್ಬರು ಯುವಕರು (Bengaluru Youth) ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹೌದು, ಶನಿವಾರ ಉಡುಪಿ ಜಿಲ್ಲೆಯ ಕುಂದಾಪುರ (Kundapura) ತಾಲೂಕಿನ ಬಿಜಾಡಿಯಲ್ಲಿರುವ ರೆಸಾರ್ಟ್‌ಗೆ ನಾಲ್ವರು ಬೆಂಗಳೂರಿನ ಯುವಕರು ಬಂದಿದ್ದರು.
ಬೆಂಗಳೂರು ನಗರದಲ್ಲಿ ರಾಜಕಾಲುವೆ ಅಕ್ಕ-ಪಕ್ಕ 50 ಅಡಿಯಲ್ಲಿ ಇರುವ ಕಟ್ಟಡಗಳ ತೆರವು!
ಕೆಲವೊತ್ತಿನ ಬಳಿಕ ಅವರು ಹತ್ತಿರದ ಸಮುದ್ರ ತೀರದಲ್ಲಿ ಈಜಲು ಹೋಗಿದ್ದರು. ಆ ವೇಳೆ ದೊಡ್ಡ ಅಲೆಯ ರಭಸಕ್ಕೆ ಇಬ್ಬರು ಯುವಕರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ಸ್ಥಳೀಯರು ಮತ್ತು ಪೊಲೀಸರು ಹುಡುಕಾಡಿದಾಗ ಯುವಕರ ಶವ ಪತ್ತೆಯಾಗಿದೆ.
ಈ ಹಿಂದೆ ಕೂಡ ಮಳೆ ಹಾಗೂ ರಭಸದ ಅಲೆಗಳ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು, ಆದರೆ ಅದರ ಬಗ್ಗೆ ಅರಿವಿಲ್ಲದೆ, ಮೋಜಿಗಾಗಲಿ ಈಜಲು ಹೋಗಿದ್ದ ಸ್ನೇಹಿತರು ನಿರುಪಾಲಾಗಿದ್ದಾರೆ. ಪೊಲೀಸರು ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಮಳೆಯಿಂದ ಹಾನಿ, ಪರಿಹಾರ ವಿತರಣೆಯಲ್ಲಿ ವಿಳಂಬವಿಲ್ಲ; ಸಿಎಂ ಸಿದ್ದರಾಮಯ್ಯ
Two youths from Bengaluru who had gone on a trip to Udupi drowned in the sea