ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗಗನಕ್ಕೇರಿದ ತರಕಾರಿ ಬೆಲೆಗಳು
ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ತರಕಾರಿ ಬೆಲೆಗಳು ಏರಿಕೆಯಾಗಿದೆ
ಬೆಂಗಳೂರು (Bengaluru): ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿದ್ದು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ (Bengaluru Rural) ಭಾಗಗಳಲ್ಲಿ ಬೆಳೆ ನಷ್ಟವಾಗಿದೆ. ಅಗತ್ಯ ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ತರಕಾರಿ ಬೆಲೆ ತೀವ್ರವಾಗಿ ಹೆಚ್ಚಾಗಿದೆ.
ಬೆಳ್ಳುಳ್ಳಿ ಪ್ರತಿ ಕೆಜಿಗೆ 600 ರೂಪಾಯಿಗೆ ತಲುಪಿದ್ದು, ನುಗ್ಗೆಕಾಯಿ 500 ರೂಪಾಯಿಯ ಗಡಿಗೆ ಏರಿದೆ. ಒಂದು ನುಗ್ಗೆಕಾಯಿ 50-60 ರೂಪಾಯಿಗೆ ಮಾರಾಟವಾಗುತ್ತಿದೆ.
ಬೆಂಗಳೂರು ತರಕಾರಿ ಬೆಲೆಗಳ ಅವಲೋಕನ:
-
- ಟೊಮೇಟೊ: ಪ್ರತಿ ಕೆಜಿ 60-70 ರೂ.
- ಬೆಳ್ಳುಳ್ಳಿ: 550-600 ರೂ.
- ಈರುಳ್ಳಿ: 70-80 ರೂ.
- ನುಗ್ಗೆಕಾಯಿ: 500 ರೂ.
- ಬಟಾಣಿ: 180-200 ರೂ.
- ಮೆಣಸಿನಕಾಯಿ: 40-80 ರೂ.
- ಆಲೂಗಡ್ಡೆ: 50-55 ರೂ.
- ಬೀನ್ಸ್: 60 ರೂ.
- ಗಜ್ಜರಿ: 60-80 ರೂ.
- ದೊಡ್ಡ ಮೆಣಸಿನಕಾಯಿ (ಹಸಿರು): 50 ರೂ.
- ದೊಡ್ಡ ಮೆಣಸಿನಕಾಯಿ (ಹಳದಿ/ಕೆಂಪು): 150-180 ರೂ.
- ಬೀಟ್ರೂಟ್: 60 ರೂ.
ರಿಟೇಲ್ ಮಾರುಕಟ್ಟೆ ಬೆಲೆ:
ಬೆಳ್ಳುಳ್ಳಿ ಪ್ರತಿ ಕೆಜಿಗೆ 500-550 ರೂ.
ಎಪಿಎಂಸಿ ಮಾರುಕಟ್ಟೆ ಬೆಲೆ:
ಬೆಳ್ಳುಳ್ಳಿ 400-450 ರೂ. ಮಟ್ಟದಲ್ಲಿ ಮಾರಾಟವಾಗುತ್ತಿದೆ.
Unseasonal Rains in Karnataka, Vegetable Prices Spike in Bengaluru