ರೇಷನ್ ಕಾರ್ಡ್ ಯಾರಿಗೆ ಸಿಗತ್ತೆ? ಅರ್ಹತೆ ಏನು? ಅರ್ಜಿ ಸಲ್ಲಿಕೆ ಕುರಿತು ಫುಲ್ ಡೀಟೇಲ್ಸ್
27,000ಗಳಿಗಿಂತ ಕಡಿಮೆ ವಾರ್ಷಿಕ ಆದಾಯ ಇರುವವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು. ಇನ್ನು ಇನ್ನು ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಹೆಚ್ಚಿದ್ದರೆ ಎಪಿಎಲ್ ಕಾರ್ಡ್ ವಿತರಿಸಲಾಗುತ್ತದೆ.
- ಸರ್ಕಾರಿ ನೌಕರಿಯಲ್ಲಿದ್ರೆ ಸಿಗಲ್ಲ ರೇಷನ್ ಕಾರ್ಡ್
- ಪಡಿತರ ಚೀಟಿ ಪಡೆದುಕೊಳ್ಳಲು ಆನ್ಲೈನ್ ನಲ್ಲಿಯೂ ಅಪ್ಲಿಕೇಶನ್ ಹಾಕಬಹುದು
- ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ರೀತಿಯ ಪಡಿತರ ಚೀಟಿ ಲಭ್ಯವಿದೆ
Ration Card : ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಮೂಲಕ ದೇಶದಲ್ಲಿ ಅರ್ಹ ನಾಗರಿಕರಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ರೇಷನ್ ಕಾರ್ಡ್ ನಲ್ಲಿ ಬೇರೆ ಬೇರೆ ರೀತಿಯ ಕಾರ್ಡ್ ಅನ್ನು ಕಾಣಬಹುದು. ನಾಗರಿಕರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ನೀಡಲಾಗುತ್ತದೆ.
ಉದಾಹರಣೆಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ (BPL Card) ನೀಡಲಾಗುತ್ತದೆ ಹಾಗೂ ಉಳ್ಳವರು ಎಪಿಎಲ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.
ಯಾರಿಗೆ ಸಿಗುತ್ತೆ ರೇಶನ್ ಕಾರ್ಡ್?
ಪ್ರಸ್ತುತ ಆಹಾರ ಇಲಾಖೆಯಿಂದ ಪಡಿತರ ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಹೊಂದಿರಬೇಕು ಎಂದು ತಿಳಿಸಲಾಗಿದೆ. ಅದೇ ರೀತಿ ಎಪಿಎಲ್ ಕಾರ್ಡ್ ಇರುವವರಿಗೆ ಉಚಿತಪಡಿತರ ವಸ್ತುಗಳು ಸಿಗದೇ ಇದ್ದರೂ ಸರ್ಕಾರದ ಇತರ ಹಲವು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಇನ್ನು ಎಪಿಎಲ್ ಕಾರ್ಡ್ (APL Card) ಹೊಂದಿರುವವರಿಗೆ ಬಿಳಿಯ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಅಂದರೆ ಈ ಮೂಲಕ ಕಡಿಮೆ ದರದಲ್ಲಿ ಪಡಿತರ ವಸ್ತುಗಳನ್ನ ಖರೀದಿ ಮಾಡಬಹುದಾಗಿದೆ. ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಪಡಿತರ ಚೀಟಿಗಳನ್ನು ವಿಸ್ತರಿಸಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಹಳದಿ ಕಾರ್ಡ್ ಕೂಡ ಚಾಲ್ತಿಯಲ್ಲಿದೆ.
27,000ಗಳಿಗಿಂತ ಕಡಿಮೆ ವಾರ್ಷಿಕ ಆದಾಯ ಇರುವವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು. ಇನ್ನು ಇನ್ನು ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಹೆಚ್ಚಿದ್ದರೆ ಎಪಿಎಲ್ ಕಾರ್ಡ್ ವಿತರಿಸಲಾಗುತ್ತದೆ.
ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಸರ್ಕಾರಿ ನೌಕರಿಯಲ್ಲಿ ಇರುವವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಗಮನಕ್ಕೆ ಬಂದಿದ್ದು ಇಂತಹ ನಾಲ್ಕು ಸಾವಿರ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ!
ನೀವು ಆನ್ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಸ್ಥಳೀಯ ರೇಷನ್ ಅಂಗಡಿ ಅಥವಾ ಸರ್ಕಾರಿ ಕಚೇರಿಗೆ ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ ರೇಷನ್ ಕಾರ್ಡ್ ಪಡೆಯಬಹುದು, ಸದ್ಯ ಕರ್ನಾಟಕ ದಲ್ಲಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಸರ್ಕಾರ ಅವಕಾಶ ನೀಡುತ್ತಿಲ್ಲ.
ಈಗಾಗಲೇ ಇರುವ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಈ ಪ್ರಕ್ರಿಯೆ ಮುಂದಿನ ತಿಂಗಳಿನ ವರೆಗೂ ಮುಂದುವರೆಯಲಿದೆ.
ಇನ್ನು ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ನಿಮ್ಮ ವೈಯಕ್ತಿಕ ವಿವರ ಮತ್ತಿತರ ಮಾಹಿತಿಗಳನ್ನು ನೀಡಿ ಲಾಗಿನ್ ಆಗಬೇಕು. ಅರ್ಜಿ ಫಾರಂ ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ನಂತರ ಭರ್ತಿಯಾಗಿರುವ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿ ಹತ್ತಿರದ ಆಹಾರ ಇಲಾಖೆಯ ಕಚೇರಿಗೆ ಸಲ್ಲಿಕೆ ಮಾಡಬೇಕು.
ಈ ರೀತಿ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಸದ್ಯ ತುರ್ತು ಅಗತ್ಯಗಳಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ.
Who is eligible for a ration card, Eligibility and application details