Bengaluru: ಅಶ್ಲೀಲ ವಿಡಿಯೋ ನೋಡಿ ವಿಚಿತ್ರ ವರ್ತನೆ, ಗಂಡನ ವಿರುದ್ಧ ಬೆಂಗಳೂರು ಮಹಿಳೆ ದೂರು

ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಮದುವೆಯಾದ ಕೆಲವೇ ತಿಂಗಳಲ್ಲಿ ಗಂಡನ ವಿಚಿತ್ರ ಲೈಂಗಿಕ ವರ್ತನೆ, ಮಾನಸಿಕ ಹಿಂಸೆ ಆರೋಪಿಸಿ ನ್ಯಾಯಕ್ಕಾಗಿ ದೂರು ನೀಡಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

  • ಅಶ್ಲೀಲ ವಿಡಿಯೋ ನೋಡಿ ಗಂಡನ ಲೈಂಗಿಕ ಒತ್ತಡ
  • ವಿಚಿತ್ರ ವರ್ತನೆ, ಮಾನಸಿಕ ಹಿಂಸೆ ಆರೋಪ
  • ಮಹಿಳಾ ಠಾಣೆಯಲ್ಲಿ ಮಹಿಳೆ ಪ್ರಕರಣ ದಾಖಲು

ಬೆಂಗಳೂರು (Bengaluru): ಮದುವೆಯಾದ ಕೆಲವೇ ದಿನಗಳಲ್ಲಿ ಜೀವನ ನರಕವಾಗಿ ಬದಲಾಗಿತ್ತೆಂದು ಮಹಿಳೆಯೊಬ್ಬರು ಗಂಡನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಗಂಡನ ವಿಚಿತ್ರ ಲೈಂಗಿಕ ವರ್ತನೆ ಮತ್ತು ನಿರಂತರ ಮಾನಸಿಕ ಹಿಂಸೆಯಿಂದ ತೀವ್ರ ಮನಸ್ತಾಪ ಅನುಭವಿಸಿದ್ದಾಗಿ ಅವರು ತಿಳಿಸಿದ್ದಾರೆ.

ಪೀಡಿತ ಮಹಿಳೆ ಮತ್ತು ಗಂಡ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು. ಅಲ್ಲಿ ಪರಿಚಯವಾಗಿ ಪ್ರೀತಿ ಬೆಳೆದಿದ್ದು, ಕುಟುಂಬದ ಒಪ್ಪಿಗೆಯೊಂದಿಗೆ 2025ರ ಸೆಪ್ಟೆಂಬರ್ 3ರಂದು ಚಿಂತಾಮಣಿಯಲ್ಲಿ ವಿವಾಹ ನಡೆದಿತ್ತು. ಆರಂಭದ ಕೆಲ ದಿನಗಳು ಸಾಮಾನ್ಯವಾಗಿದ್ದರೂ, ನಂತರ ಗಂಡನ ವರ್ತನೆ ಸಂಪೂರ್ಣವಾಗಿ ಬದಲಾಗಿದೆ ಎನ್ನಲಾಗಿದೆ.

ಮಹಿಳೆಯ ದೂರಿನ ಪ್ರಕಾರ, ಗಂಡ ಅಶ್ಲೀಲ ವಿಡಿಯೋಗಳನ್ನು ನೋಡುತ್ತಾ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ. ಮನೆ ಒಳಗಷ್ಟೇ ಅಲ್ಲದೆ, ಅತ್ತೆ-ಮಾಮಂದಿರ ಮುಂದೆಯೂ ಅಸಭ್ಯವಾಗಿ ವರ್ತಿಸಿ ಮಾನಸಿಕವಾಗಿ ಅವಮಾನಿಸುತ್ತಿದ್ದನೆಂದು ಆರೋಪಿಸಲಾಗಿದೆ.

ಪ್ಯಾಸೇಜ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಅಸಹಜವಾಗಿ ನಡೆದು ಇತರರಿಗೆ ತೊಂದರೆ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೂ ಮಿಕ್ಕಾಗಿ, ಗಂಡ ಅಸಭ್ಯ ಪದಗಳಿಂದ ನಿಂದನೆ, ಶಾರೀರಿಕ ಹಿಂಸೆ ಪ್ರಯತ್ನ ನಡೆಸಿದ್ದಾನೆ. ತನ್ನ ತಾಯಿಯನ್ನೂ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಗಂಡನ ವರ್ತನೆಗೆ ಅವನ ಕುಟುಂಬದವರ ಬೆಂಬಲವಿದೆ ಎಂಬ ಆರೋಪವೂ ದೂರಿನಲ್ಲಿ ಇದೆ. ಪ್ರಕರಣವನ್ನು ಕೇಂದ್ರ ವಿಭಾಗ ಮಹಿಳಾ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories