ಬೆಂಗಳೂರು: ಬಾತ್ ರೂಂಗೆ ಹೋಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವು

Story Highlights

ಬಾತ್ ರೂಂಗೆ ಹೋಗಿದ್ದ ಆಕೆ 25 ನಿಮಿಷ ಕಳೆದರೂ ಹೊರಗೆ ಬಾರದೇ ಇದ್ದುದರಿಂದ ಪತಿ ಹೋಗಿ ನೋಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು.

ಬೆಂಗಳೂರು (Bengaluru): ತಿರುಪತಿ ಮೂಲದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಮಂಗಳವಾರ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ನೆಲಮಂಗಲ ಪೊಲೀಸರ ಪ್ರಕಾರ, ಲಕ್ಷ್ಮಿ (25) ಎಂಬ ಮಹಿಳೆ ತಿರುಪತಿಯಿಂದ ಬೆಂಗಳೂರಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು.

ಮಂಗಳವಾರ ಬೆಳಗ್ಗೆ ಬಾತ್ ರೂಂಗೆ ಹೋಗಿದ್ದ ಆಕೆ 25 ನಿಮಿಷ ಕಳೆದರೂ ಹೊರಗೆ ಬಾರದೇ ಇದ್ದುದರಿಂದ ಪತಿ ಹೋಗಿ ನೋಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು.

ಬೆಂಗಳೂರು ಬಯ್ಯಪನಹಳ್ಳಿ ಪೊಲೀಸರಿಂದ ಖತರ್ನಾಕ್ ಬಿಹಾರಿ ಕಳ್ಳರ ಬಂಧನ

ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಮುಖದ ಮೇಲೆ ಗೀರುಗಳಿವೆ ಎಂದು ಪತಿ ಹೇಳುತ್ತಾರೆ.

ಗ್ಯಾಸ್ ಗೀಸರ್ ನಿಂದ ವಿಷಪೂರಿತ ಕಾರ್ಬನ್ ಮಾನಾಕ್ಸೈಡ್ ಗ್ಯಾಸ್ ಬಂದಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಗೀಸರ್ ಆನ್ ಮಾಡಿರಲಿಲ್ಲ ಎಂದು ಪತಿ ಹೇಳಿದ್ದಾರೆ.

Woman dies suspiciously after going to the bathroom in Bengaluru

Related Stories