ಬೆಂಗಳೂರಿನಲ್ಲಿ ಪಾರ್ಟಿ ವೇಳೆ ಪೊಲೀಸರ ಎಂಟ್ರಿ, ಭಯಕ್ಕೆ 3ನೇ ಮಹಡಿಯಿಂದ ಜಿಗಿದ ಯುವತಿ

ಸ್ನೇಹಿತರೊಂದಿಗೆ ಹೋಟಲ್‌ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಪೊಲೀಸರ ಆಗಮನದಿಂದ ಭಯಗೊಂಡ ಯುವತಿ ಕೆಳಗೆ ಬೀಳುವ ಮೂಲಕ ಗಂಭೀರ ಗಾಯಗೊಂಡಿದ್ದು, ಹಣ ಕೇಳಿದ ಆರೋಪದೊಂದಿಗೆ ಪ್ರಕರಣದ ತನಿಖೆ ಆರಂಭವಾಗಿದೆ ಬೆಂಗಳೂರು ನಗರದ ಎಚ್‌ಎಎಲ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದ ಘಟನೆ..

ಬೆಂಗಳೂರು (Bengaluru) ನಗರದ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತರೊಂದಿಗೆ ಹೋಟೆಲ್‌ನ ಮೂರನೇ ಮಹಡಿಯಲ್ಲಿ ಪಾರ್ಟಿ ನಡೆಸುತ್ತಿದ್ದ ಯುವತಿಯೊಬ್ಬಳು, ಪೊಲೀಸರ ಆಗಮನದಿಂದ ಗಾಬರಿಗೊಂಡು ಅಪಾಯಕರ ಹೆಜ್ಜೆ ಇಟ್ಟಿದ್ದಾಳೆ.

ಸ್ಥಳೀಯರ ದೂರಿನಿಂದ ತಿರುವು

ಅರ್ಧರಾತ್ರಿ ಗಟ್ಟಿಯಾದ ಮ್ಯೂಸಿಕ್ ಹಾಗೂ ಕೂಗು-ಕೇಕೆ ಕೇಳಿಬಂದ ಹಿನ್ನೆಲೆಯಲ್ಲಿ ಸುತ್ತಮುತ್ತಲ ನಿವಾಸಿಗಳು 112ಗೆ ಕರೆ ಮಾಡಿದ್ದರು. ಮಾಹಿತಿ ಪಡೆದ ಪೊಲೀಸರು ಹೋಟೆಲ್‌ಗೆ ತೆರತ್ತಿದ್ದಂತೆ, ಪಾರ್ಟಿಯಲ್ಲಿ ಭಾಗವಹಿಸಿದ್ದವರುದಿಕ್ಕಾಪಾಲಾಗಿ ಚದುರಿದರು.

ತಪ್ಪಿಸಿಕೊಳ್ಳುವ ಯತ್ನವೇ ಅವಘಡಕ್ಕೆ ಕಾರಣ

ಭಯದಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೈಷ್ಣವಿ (21), ಮೇಲ್ಮಹಡಿಯಿಂದ ಪೈಪ್ ಹಿಡಿದು ಕೆಳಗೆ ಇಳಿಯಲು ಪ್ರಯತ್ನಿಸಿದ್ದಾಳೆ. ಈ ವೇಳೆ ಕಾಲು ಜಾರಿ ಕೆಳಗಿದ್ದ ಗ್ರಿಲ್‌ಗಳ ಮೇಲೆ ಬಿದ್ದ ಪರಿಣಾಮ ತಲೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: ಬೆಂಗಳೂರು ಒಂಟಿ ಮಹಿಳೆಯರ ಕಿರುಕುಳ ಪ್ರಕರಣ, ಕಾಮಾಕ್ಷಿಪಾಳ್ಯ ಪೊಲೀಸರಿಂದ ಆರೋಪಿ ಬಂಧನ

ಆಸ್ಪತ್ರೆಯಲ್ಲಿ ಚಿಕಿತ್ಸೆ, ಸ್ಥಿತಿ ಗಂಭೀರ

ಗಾಯಗೊಂಡ ಯುವತಿಯನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಕುಟುಂಬದವರು ಆತಂಕದಲ್ಲಿದ್ದಾರೆ.

ಹಣ ಕೇಳಿದ ಆರೋಪ, ತನಿಖೆ ಶುರು

ಘಟನೆ ಬಳಿಕ ಹೋಟೆಲ್‌ಗೆ ಬಂದ ಪೊಲೀಸರು ಪ್ರಕರಣ ದಾಖಲಿಸಬಾರದೆಂದರೆ ಹಣ ನೀಡಬೇಕು ಎಂದು ಕೇಳಿದರು ಎಂದು ಪಾರ್ಟಿಯಲ್ಲಿ ಇದ್ದವರು ಆರೋಪಿಸಿದ್ದಾರೆ. ಫೋನ್‌ಪೇ ಮಾಡುವುದಾಗಿ ಹೇಳಿದಾಗ, ನಗದು ಬೇಕೆಂದು ಒತ್ತಾಯಿಸಲಾಯಿತು ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಕಸ್ಮಿಕ ಸಾವು–ಆತ್ಮಹತ್ಯೆ ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆ! ಇಲ್ಲಿದೆ ಅಂಕಿ-ಅಂಶ

ತಂದೆಯಿಂದ ದೂರು

ಯುವತಿಯ ತಂದೆ ಆಂಥೋನಿರಾಜ್, ಹೋಟೆಲ್ ಆಡಳಿತ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಡಿಸಿಪಿ ಮಟ್ಟದಲ್ಲಿ ತನಿಖೆ ಆರಂಭಗೊಂಡಿದ್ದು, ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.

TRENDING ARTICLES1 / 5

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories