ಯುವನಿಧಿ ಯೋಜನೆಗೆ ಹೊಸ ನಿಯಮ! ಫಲಾನುಭವಿಗಳಿಗೆ ಮಾಸಿಕ ದೃಢೀಕರಣ ಕಡ್ಡಾಯ

ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ಹೊಸ ಬದಲಾವಣೆಗಳು ಜಾರಿಯಾಗಿವೆ. ಫಲಾನುಭವಿಗಳು ಈಗಿನಿಂದ ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡಬೇಕಿದ್ದು, ತರಬೇತಿಗಾಗಿ ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯವಾಗಿದೆ.

Yuva Nidhi Scheme: ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಇದೀಗ ಹೊಸ ನಿಯಮದಡಿ ಬದಲಾವಣೆ ಕಂಡಿದೆ. ಫಲಾನುಭವಿಗಳು ಈಗಿನಿಂದ ತಮ್ಮ ಸ್ವಯಂ ಘೋಷಣೆಯನ್ನು ತ್ರೈಮಾಸಿಕ ಬದಲು ಪ್ರತಿ ತಿಂಗಳು ಮಾಡಬೇಕಾಗಿದೆ. ಇದರಿಂದ ಅರ್ಹರು ಮಾತ್ರ ಸರ್ಕಾರದ ನೆರವು ಪಡೆಯುವಂತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಪ್ರಕಟಣೆಯ ಪ್ರಕಾರ, ಯುವನಿಧಿ ಯೋಜನೆಯಡಿ ಡಿಬಿಟಿ (DBT) ಸಹಾಯಧನವನ್ನು ಆರು ತಿಂಗಳುಗಳ ಕಾಲ ಸತತವಾಗಿ ಪಡೆದವರು ತರಬೇತಿಗಾಗಿ https://www.kaushalkar.com ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸಿದವರಿಗೆ ಯುವನಿಧಿ ಯೋಜನೆಯಡಿ ದೊರೆಯುವ ಹಣಕಾಸು ನೆರವು ನಿಲ್ಲಿಸಲಾಗುವುದಿಲ್ಲ.

ಇದೇ ವೇಳೆ, ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವವರು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಅರ್ಜಿ ಸಲ್ಲಿಸಲು ಕರ್ನಾಟಕದ ನಿವಾಸಿಯಾಗಿರಬೇಕು ಮತ್ತು ನಿರುದ್ಯೋಗಿಯಾಗಿರಬೇಕು.

ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅಥವಾ ಪಿಎಫ್‌/ಇಎಸ್‌ಐ ಸೌಲಭ್ಯ ಪಡೆಯುತ್ತಿರುವವರು ಈ ಯೋಜನೆಗೆ ಅರ್ಹರಲ್ಲ.

ಅರ್ಜಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ತಮ್ಮ ಆಧಾರ್ ಇ–ಕೆವೈಸಿ ಪೂರೈಸಬೇಕು. ಇದು ಅಭ್ಯರ್ಥಿಯ ಗುರುತಿನ ದೃಢೀಕರಣ ಮತ್ತು ನಿವಾಸದ ಮಾಹಿತಿಯನ್ನು ಖಚಿತಪಡಿಸುತ್ತದೆ. ನಂತರ, ಶೈಕ್ಷಣಿಕ ದಾಖಲೆಗಳು ಮತ್ತು ವಿದ್ಯಾಸಂಸ್ಥೆಯ ವಿವರಗಳನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕಿದೆ.

ಅಂತಿಮ ಹಂತದಲ್ಲಿ ಒಟಿಪಿ ದೃಢೀಕರಣ ಮೂಲಕ ಅರ್ಜಿ ಪೂರ್ಣಗೊಳ್ಳುತ್ತದೆ. ರಾಜ್ಯ ಸರ್ಕಾರದ ಉದ್ದೇಶವು ಈ ಕ್ರಮದ ಮೂಲಕ ಯೋಜನೆಯ ಪಾರದರ್ಶಕತೆ ಮತ್ತು ಅಸಲಿ ಫಲಾನುಭವಿಗಳ ಗುರುತನ್ನು ಖಚಿತಪಡಿಸುವುದಾಗಿದೆ.

Yuva Nidhi Scheme 2025, New Monthly Declaration Rule Announced

TRENDING ARTICLES1 / 5

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories