ಸುಜುಕಿ ವ್ಯಾಗನ್-ಆರ್ ಗಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು
2025 MG Comet EV: ಎಂಜಿ ಮೋಟಾರ್ ಹೊಸ 2025 ಎಂಜಿ ಕಾಮೆಟ್ ಈವಿ ಕಾರನ್ನು ಬಿಡುಗಡೆ ಮಾಡಿದ್ದು, ಇದು ಸುರಕ್ಷತೆ, ಆಧುನಿಕ ತಂತ್ರಜ್ಞಾನ, ಮತ್ತು ಹೆಚ್ಚು ಸುಧಾರಿತ ಫೀಚರ್‌ಗಳನ್ನು ಒಳಗೊಂಡಿದೆ. ಇದರ ದರ ತಗ್ಗಿಸಿದ್ದು, ವಾಗನ್ ಆರ್ ಗಿಂತಲೂ ಕಡಿಮೆ ಬೆಲೆಗೆ ಲಭ್ಯವಿದೆ.
Publisher: Kannada News Today (Digital Media)
- 2025 ಎಂಜಿ ಕಾಮೆಟ್ ಈವಿ ಹಳೆಯ ಮಾದರಿಗಿಂತ ಹೆಚ್ಚು ಸ್ಮಾರ್ಟ್ ಮತ್ತು ಆಕರ್ಷಕ
- 230 ಕಿಮೀ ರೇಂಜ್, ಅತ್ಯಾಧುನಿಕ ತಂತ್ರಜ್ಞಾನ, ಹೈಸ್ಟೆಂಡ್ ಸೆಫ್ಟಿ ಫೀಚರ್‌ಗಳು
- ವಾಗನ್ ಆರ್ ಬೆಲೆಗೆ ತಕ್ಕ ಸ್ಪರ್ಧೆ ನೀಡುವ ಬೆಲೆಯೊಂದಿಗೆ ಲಭ್ಯ
2025 MG Comet EV: ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಎಂಜಿ (MG) ತನ್ನ ಕಾರುಗಳ ಮೂಲಕ ಜನಪ್ರಿಯತೆ ಗಳಿಸಿರುವುದು ಎಲ್ಲರಿಗೂ ತಿಳಿದ ಸಂಗತಿ.
ಈಗ ಹೊಸದಾಗಿ 2025 ಎಂಜಿ ಕಾಮೆಟ್ ಈವಿ (Comet EV) ಕಾರು ಲಾಂಚ್ ಆಗಿದ್ದು, ಅದನ್ನು ನೋಡಿದ್ರೆ ಖಂಡಿತ ನೀವು ಆಕರ್ಷಿತರಾಗುತ್ತೀರಿ.
ನೀವು ಎಲೆಕ್ಟ್ರಿಕ್ ಕಾರು (Electric Car) ಖರೀದಿಸಲು ಯೋಚಿಸುತ್ತಿದ್ದರೆ, ಕಾಮೆಟ್ ಈವಿಯು ಅತ್ಯುತ್ತಮ ಆಯ್ಕೆಯಾಗಿದೆ. ಹೊಸ ಮೋಡಲ್‌ನಲ್ಲಿ ಸುಧಾರಿತ ಸೆಫ್ಟಿ ಫೀಚರ್‌ಗಳು, ಪ್ರೀಮಿಯಂ ಲುಕ್, ಹೈಟೆಕ್ ಟಚ್‌ಸ್ಕ್ರೀನ್ ಡಿಸ್ಪ್ಲೇ (Touchscreen Display), ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ (Wireless Android Auto) ಮುಂತಾದವು ನೀಡಲಾಗಿದೆ.
ಇದನ್ನೂ ಓದಿ: ಏಪ್ರಿಲ್ 1 ರಿಂದ ಇಂತಹ ಮೊಬೈಲ್ ಗಳಲ್ಲಿ ಯುಪಿಐ ಸೇವೆಗಳು ಸ್ಥಗಿತ
2025 ಎಂಜಿ ಕಾಮೆಟ್ ಈವಿಯ ಬೆಲೆ ₹4.99 ಲಕ್ಷದಿಂದ ಪ್ರಾರಂಭವಾಗುತ್ತದೆ, ಇದು ಮಾರುತಿಯ ವ್ಯಾಗನ್ ಆರ್ (Wagon R) ಕಾರಿನ ಬೇಸ್ ವೇರಿಯಂಟ್‌ಗಿಂತಲೂ ಕಡಿಮೆ!
ಈ ಎಲೆಕ್ಟ್ರಿಕ್ ಕಾರು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿದ್ದು, 17.4 ಕೇಡಬ್ಲ್ಯೂಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಸಿಂಗಲ್ ಚಾರ್ಜ್‌ನಲ್ಲಿ 230 ಕಿಮೀ (Range) ಪ್ರಯಾಣ ಮಾಡಬಹುದಾಗಿದೆ.
ಹೊಸ ಕಾರು ಐದು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ಎಕ್ಸಿಕ್ಯೂಟಿವ್, ಎಕ್ಸೈಟ್, ಎಕ್ಸೈಟ್ ಫಾಸ್ಟ್ ಚಾರ್ಜ್, ಎಕ್ಸ್ಕ್ಲೂಸಿವ್, ಮತ್ತು ಎಕ್ಸ್ಕ್ಲೂಸಿವ್ ಫಾಸ್ಟ್ ಚಾರ್ಜ್ ಎನ್ನುವ ಆಯ್ಕೆಗಳಲ್ಲಿ ಬರಲಿದೆ.
ಕಾಮೆಟ್ ಈವಿಯ ಇಂಟೀರಿಯರ್ ಆಕರ್ಷಕವಾಗಿದ್ದು, ಪ್ರೀಮಿಯಂ ಲೆದರ್ (Leather) ಸೀಟುಗಳು, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪಾರ್ಕಿಂಗ್ ಕ್ಯಾಮೆರಾ, ಹಾಗೂ ಆಧುನಿಕ ಸೇಫ್ಟಿ ಫೀಚರ್‌ಗಳಿವೆ. ಅದೇ ರೀತಿ ಬಣ್ಣದ ಆಯ್ಕೆಗಳಲ್ಲಿ ಬ್ಲಾಕ್ ಸ್ಟಾರ್ಮ್ ಎಡಿಷನ್ (Black Storm Edition) ವಿಶೇಷ ಆಕರ್ಷಣೆಯಾಗಿದೆ.
ಇದನ್ನೂ ಓದಿ: ಬಜೆಟ್ ಬೆಲೆ, ಹೊಸ ಆವೃತ್ತಿಯಲ್ಲಿ Honda Shine 100 ಬೈಕ್ ಬಿಡುಗಡೆ!
ಭಾರತೀಯ ಕಾರು ಪ್ರಿಯರು ಎಲೆಕ್ಟ್ರಿಕ್ ಕಾರುಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ತೈಲ ಬೆಲೆ ಏರಿಕೆ, ಮಾಲಿನ್ಯ ನಿಯಂತ್ರಣ, ಹಾಗೂ ಸುಲಭ ನಿರ್ವಹಣೆ ಕಾರಣದಿಂದಾಗಿ ಎಲೆಕ್ಟ್ರಿಕ್ ಕಾರುಗಳ ಭವಿಷ್ಯ ಬಹಳ ಪ್ರಬಲವಾಗಿದೆ. ನೀವು ಹೊಸ ಎಲೆಕ್ಟ್ರಿಕ್ ಕಾರು ನೋಡುತ್ತಿದ್ದರೆ, 2025 ಎಂಜಿ ಕಾಮೆಟ್ ಈವಿಯು ಖಂಡಿತಾ ಪರಿಗಣಿಸಬಹುದಾದ ಆಯ್ಕೆ!
2025 MG Comet EV, Affordable Electric Car with Smart Features