ಕೋಳಿ ಸಾಕಾಣಿಕೆಗೆ 25 ಲಕ್ಷ ರೂಪಾಯಿ ಸಹಾಯಧನ! ಕೇವಲ ಅರ್ಜಿ ಹಾಕಿ ಸಾಕು
Poultry Farming Business: ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸಲು ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಜಾನುವಾರು ಮಿಷನ್ ಮೂಲಕ ಕೋಳಿ ಸಾಕಾಣಿಕೆ ಯೋಜನೆಗೆ ಗರಿಷ್ಠ 25 ಲಕ್ಷ ರೂ ಸಹಾಯಧನ ನೀಡುತ್ತಿದೆ.

Poultry Farming Scheme: ಭಾರತ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯನ್ನು ಪರಿಷ್ಕರಿಸಿ ಜಾರಿಗೆ ತಂದಿದೆ.
ಈ ಯೋಜನೆಯಡಿ ಕೋಳಿ ಸಾಕಾಣಿಕೆ ಕ್ಷೇತ್ರಕ್ಕೆ ವಿಶೇಷ ಉತ್ತೇಜನ ನೀಡಲಾಗುತ್ತಿದ್ದು, ಹೊಸ ಅಥವಾ ವಿಸ್ತರಣೆ ಹಂತದಲ್ಲಿರುವ ಫಾರ್ಮ್ಗಳಿಗೆ 50% ಬಂಡವಾಳ ಸಹಾಯಧನವನ್ನು ನೀಡಲಾಗುತ್ತಿದೆ. ಗರಿಷ್ಠ ₹25 ಲಕ್ಷದವರೆಗೆ ಸಬ್ಸಿಡಿ ಲಭ್ಯವಿದೆ.
ಈ ಯೋಜನೆಯ ಪ್ರಮುಖ ಉದ್ದೇಶ ಗ್ರಾಮೀಣ ಕೋಳಿ ಸಾಕಾಣಿಕೆಯನ್ನು ಸಂಘಟಿತ ವಲಯಕ್ಕೆ ತರಿಸುವುದು ಮತ್ತು ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
ಪೋಷಕ ಲೇಯರ್ ಫಾರ್ಮ್ಗಳು, ಹ್ಯಾಚರಿಗಳು ಹಾಗೂ ಬ್ರೂಡಿಂಗ್ ಯೂನಿಟ್ಗಳನ್ನು ಸ್ಥಾಪಿಸಲು ರೈತರು, ಸ್ವಸಹಾಯ ಸಂಘಗಳು ಹಾಗೂ ಖಾಸಗಿ ಉದ್ಯಮಿಗಳು ಅರ್ಹರಾಗಿದ್ದಾರೆ. ಇದರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ.
ಕೋಳಿ ಸಾಕಣೆ ಯೋಜನೆಯಡಿ ಪೋಷಕ ಲೇಯರ್ ಫಾರ್ಮ್ನಲ್ಲಿ ಕನಿಷ್ಠ 1,000 ಪೋಷಕ ಕೋಳಿಗಳು ಇರಬೇಕು ಮತ್ತು ಹ್ಯಾಚರಿಗಳು ವಾರಕ್ಕೆ 3,000 ಮೊಟ್ಟೆ ಮರಿ ಮಾಡಿಸುವ ಸಾಮರ್ಥ್ಯ ಹೊಂದಿರಬೇಕು. ಮದರ್ ಯೂನಿಟ್ಗಳು ಸುಮಾರು 2,000 ಮರಿಗಳನ್ನು ನಾಲ್ಕು ವಾರಗಳವರೆಗೆ ಆರೈಕೆ ಮಾಡಬೇಕು. ಈ ಘಟಕಗಳಿಗೆ ರಾಜ್ಯ ಅನುಷ್ಠಾನ ಸಂಸ್ಥೆಯಿಂದ ಎರಡು ವರ್ಷಗಳವರೆಗೆ ತಾಂತ್ರಿಕ ಬೆಂಬಲ ದೊರೆಯುತ್ತದೆ.
ಯೋಜನೆಯಡಿ ಬ್ಯಾಂಕ್ ಸಾಲ (Bank Loan) ಅಥವಾ ಸ್ವಂತ ಹಣಕಾಸು ಮೂಲಕ ಹೂಡಿಕೆ ಮಾಡಬಹುದು. ಪಶುಸಂಗೋಪನಾ ಇಲಾಖೆ ತಾಂತ್ರಿಕ ತರಬೇತಿಯನ್ನು ನೀಡುವುದರೊಂದಿಗೆ ಯೋಜನಾ ಕಾರ್ಯಗತಗೊಳಣೆಯ ಮೇಲ್ವಿಚಾರಣೆಯನ್ನೂ ಮಾಡಲಿದೆ. ರೈತರು ಯೋಜನೆಯಡಿ ಕೇವಲ ಭೂಮಿ ಖರೀದಿಗೆ ಅಥವಾ ವೈಯಕ್ತಿಕ ಕಾರು ಖರೀದಿಗೆ ಸಹಾಯಧನ ಪಡೆಯಲು ಸಾಧ್ಯವಿಲ್ಲ.
ಅರ್ಹರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ಜಾನುವಾರು ಮಿಷನ್ ಪೋರ್ಟಲ್ https://nlm.udyamimitra.in/ ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ರಾಜ್ಯ ಅನುಷ್ಠಾನ ಸಂಸ್ಥೆ ಅರ್ಜಿಯನ್ನು ಪರಿಶೀಲಿಸಿ ಸಂಬಂಧಿತ ಬ್ಯಾಂಕ್ಗೆ ಶಿಫಾರಸು ಮಾಡುತ್ತದೆ.
ಯೋಜನಾ ವೆಚ್ಚದ 25% ಖರ್ಚಾದ ನಂತರ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಅನುಮೋದಿತ ಯೋಜನೆಗಳ ಸಹಾಯಧನವನ್ನು ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಮೂಲಕ ಬ್ಯಾಂಕ್ಗೆ ವರ್ಗಾಯಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪಶುಸಂಗೋಪನೆ ಇಲಾಖೆಯ ಅಧಿಕೃತ ವೆಬ್ಸೈಟ್ https://ahvs.karnataka.gov.in/ ಗೆ ಭೇಟಿ ನೀಡಬಹುದು ಅಥವಾ nlm.support@sidbi.in ಗೆ ಇಮೇಲ್ ಕಳುಹಿಸಬಹುದು.
25 Lakh Subsidy for Poultry Farming under National Livestock Mission







