ಹಿರಿಯ ನಾಗರೀಕರಿಗೆ 4 ಹೊಸ ಪಿಂಚಣಿ ಯೋಜನೆಗಳು ಜಾರಿ! ಸಣ್ಣ ಉಳಿತಾಯದೊಂದಿಗೆ ದೊಡ್ಡ ಆದಾಯ
Pension Schemes : ಈ ಯೋಜನೆಗಳಲ್ಲಿ ಉಳಿತಾಯ ಮಾಡುವುದದಿಂದ ಜನರು ಒಳ್ಳೆಯ ರಿಟರ್ನ್ಸ್ ಪಡೆಯಬಹುದು. ಹಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಉಳಿತಾಯ ಮಾಡುವುದರಿಂದ ನಿಮಗೆ ಒಳ್ಳೆಯ ರಿಟರ್ನ್ಸ್ ಬರುತ್ತದೆ.
Pension Schemes : ಸಾಮಾನ್ಯ ವರ್ಗದ ಜನರು, ಬಡವರ್ಗದ ಕುಟುಂಬದವರು ಎಲ್ಲರು ಹಣ ಉಳಿತಾಯ (Savings) ಮಾಡಲು ಸಹಕಾರ ಆಗಲಿ ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಈ ಯೋಜನೆಗಳಲ್ಲಿ ಉಳಿತಾಯ ಮಾಡುವುದದಿಂದ ಜನರು ಒಳ್ಳೆಯ ರಿಟರ್ನ್ಸ್ ಪಡೆಯಬಹುದು. ಹಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ (Savings Schemes) ಉಳಿತಾಯ ಮಾಡುವುದರಿಂದ ನಿಮಗೆ ಒಳ್ಳೆಯ ರಿಟರ್ನ್ಸ್ ಬರುತ್ತದೆ.
ಈ ಯೋಜನೆಗಳಲ್ಲಿ ನೀವು ಕಡಿಮೆ ಹಣ ಹೂಡಿಕೆ (Money Investment) ಮಾಡಿ ಹೆಚ್ಚು ಲಾಭ ಹೊಂದಬಹುದು. ಆ ರೀತಿಯ ಹಲವು ಯೋಜನೆಗಳು ಜಾರಿಯಲ್ಲಿದ್ದು, ಇಂದು ನಿಮಗೆ ಆ ರೀತಿಯ 4 ಯೋಜನೆಗಳನ್ನು ತಿಳಿಸಿಕೊಡುತ್ತೇವೆ. ಆ ಯೋಜನೆಗಳು ಯಾವುವು? ಅವುಗಳಲ್ಲಿ ಎಷ್ಟು ಹೂಡಿಕೆ ಮಾಡಬೇಕು? ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ? ಇದೆಲ್ಲವನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ ನೋಡಿ..
1. ರಾಷ್ಟ್ರೀಯ ಪಿಂಚಣಿ ಯೋಜನೆ (ನ್ಯಾಷನಲ್ ಪೆನ್ಶನ್ ಸ್ಕೀಮ್) :- ಇದು ಹಿರಿಯ ನಾಗರೀಕರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಳ್ಳೆಯ ಪೆನ್ಶನ್ ಯೋಜನೆ ಆಗಿದ್ದು, 60 ವರ್ಷಕ್ಕಿಂತ ಹಿರಿಯರಾಗಿರುವ ಯಾರೇ ಆದರೂ ಈ ಯೋಜನೆಯಲ್ಲಿ ಪೆನ್ಶನ್ ಪಡೆಯಬಹುದು.
ನಿವೃತ್ತಿ ನಂತರ ಉತ್ತಮ ಮಟ್ಟದಲ್ಲಿ ಪೆನ್ಶನ್ ಬರುವ, ಅದಕ್ಕಾಗಿ ಹಣ ಉಳಿತಾಯ ಮಾಡುವಂತಹ ಯೋಜನೆ ಇದಾಗಿದೆ. ಪೆನ್ಶನ್ ಗಾಗಿ ಹಣ ಉಳಿತಾಯ ಮಾಡಬೇಕು ಎಂದುಕೊಂಡಿದ್ದರೆ ಇದು ಒಳ್ಳೆಯ ಆಯ್ಕೆ ಆಗಿದೆ.
2. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ :- ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಲು ಸೀನಿಯರ್ ಸಿಟಿಜನ್ ಗಳು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ವಯಸ್ಸಾದ ನಂತರ 60 ರಿಂದ 70 ವರ್ಷಗಳ ಸಮಯದಲ್ಲಿ ಪ್ರತಿ ತಿಂಗಳು ₹300 ರೂಪಾಯಿ ಪೆನ್ಶನ್, 80 ವರ್ಷಗಳ ನಂತರ ₹500 ರೂಪಾಯಿ ಪೆನ್ಶನ್ ಬರುತ್ತದೆ.
3. ಅಟಲ್ ಪಿಂಚಣಿ ಯೋಜನೆ :- ಇದು ಸಹ ನಿವೃತ್ತಿ ನಂತರ, ಅಂದರೆ 60 ವರ್ಷಕ್ಕಿಂತ ಹೆಚ್ಚಿಗೆ ವಯಸ್ಸಾದ ಸೀನಿಯರ್ ಸಿಟಿಜನ್ ಗಳಿಗಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಅಟಲ್ ಪಿಂಚಣಿ ಯೋಜನೆ ಶುರುವಾಗಿದ್ದು 2015ರಲ್ಲಿ, ಈ ಯೋಜನೆಯಲ್ಲಿ ನೀವು ಜಾಸ್ತಿ ಹಣ ಹೂಡಿಕೆ ಮಾಡಿದಷ್ಟು ಜಾಸ್ತಿ ಪೆನ್ಶನ್ ಸಿಗುತ್ತದೆ.
ಇದು ಪ್ರತಿ ತಿಂಗಳು ಪೆನ್ಶನ್ ಬರುವ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತಿಂಗಳಿಗೆ ₹1000 ಇಂದ ₹5000 ರೂಪಾಯಿಯವರೆಗು ಹೂಡಿಕೆ ಮಾಡಬಹುದು.
4. ವರಿಷ್ಠ ಬಿಮಾ ಯೋಜನೆ :- ಈ ವಿಮೆ ನಿಮಗೆ ಸಿಗುವುದು ಲೈಫ್ ಇನ್ಷುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ. ಈ ಯೋಜನೆಯಲ್ಲಿ ನೀವು ಇಂತಿಷ್ಟು ಮೊತ್ತ ಎಂದು ಒಂದು ಸಾರಿ ಪಾವತಿ ಮಾಡಿದರೆ. ನಿಮಗೆ ಪೆನ್ಶನ್ ಹಣವನ್ನು LIC ನೀಡುತ್ತದೆ. ಹೂಡಿಕೆ ಮಾಡಿ 15 ವರ್ಷಗಳ ಬಳಿಕ ಪಾಲಿಸಿದಾರರು ಪೆನ್ಶನ್ ಲಾಭ ಪಡೆಯಬಹುದು.
4 new pension schemes for senior citizens have been implemented
Follow us On
Google News |