Own Business : ಸ್ವಂತ ಉದ್ಯೋಗ ಆರಂಭಿಸಲು ಬಯಸಿದ ಹಲವರು ಹಿಂದೇಟು ಹಾಕುವುದಕ್ಕೆ ಮುಖ್ಯವಾಗಿರುವ ಕಾರಣವೇ ಅದರ ಬಂಡವಾಳ. ಸಾಮಾನ್ಯವಾಗಿ ಯಾವುದೇ ಉದ್ಯಮ ಆರಂಭಿಸುತ್ತೇವೆ ಎಂದಾದರೂ ಅದಕ್ಕೆ ಕನಿಷ್ಠ ಮೊತ್ತದ ಬಂಡವಾಳ (Investment) ಹಾಕಲೇಬೇಕು.
ಆದರೆ ಈ ಬಂಡವಾಳ ಹೂಡಿಕೆ ಎಲ್ಲರಿಗೂ ಸುಲಭವಾದ ಮಾತಲ್ಲ, ಹಾಗಾಗಿ ಅದೆಷ್ಟೋ ಹೊಸ ಉದ್ಯಮ ಆರಂಭಿಸುವವರ ಕನಸು ಕಮರಿ ಹೋಗಿದೆ. ಆದರೆ ಇಂದು ನಾವು ಈ ಲೇಖನದಲ್ಲಿ ಹೇಳುವ ಒಂದು ಸರಳ ಉದ್ಯಮವನ್ನು ನೀವು ಆರಂಭಿಸಿದರೆ ಪ್ರತಿದಿನ ಕನಿಷ್ಠ ನಾಲ್ಕು ಸಾವಿರ ರೂಪಾಯಿಗಳನ್ನು ಆದಾಯವಾಗಿ ಪಡೆಯಬಹುದು. ಅಷ್ಟೇ ಅಲ್ಲ ಇದಕ್ಕಾಗಿ ಹಣ, ಶ್ರಮ ಯಾವುದು ಬೇಡ.
ಹೆಣ್ಣು ಮಕ್ಕಳ ಪೋಷಕರಿಗೆ ಸಂತಸದ ಸುದ್ದಿ! ಈ ಯೋಜನೆ ನೀಡುತ್ತೆ ಹಿಚ್ಚಿನ ಬೆನಿಫಿಟ್
ಬಾಳೆಕಾಯಿ ಚಿಪ್ಸ್ ತಯಾರಿಕೆ! (Making of Banana chips)
ಸಾಮಾನ್ಯವಾಗಿ ಆಲೂಗಡ್ಡೆ ಚಿಪ್ಸ್ (potato chips) ಉದ್ಯಮವನ್ನು ಹೆಚ್ಚಿನ ಜನರು ಮಾಡುತ್ತಾರೆ, ಯಾಕೆಂದರೆ ಇದು ಬಹಳ ಸುಲಭ. ಆದರೆ ಇತ್ತೀಚಿನ ದಿನಗಳಲ್ಲಿ ಆಲೂಗಡ್ಡೆ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದಲ್ಲ ಎಂದು ಅರಿತ ಜನರು ಬಾಳೆಕಾಯಿ ಚಿಪ್ಸ್ (Banana chips) ಸೇವನೆ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹಾಗಾಗಿ ಅತ್ಯಂತ ಶುಚಿ ರುಚಿಯಿಂದ ನೀವು ಬಾಳೆಕಾಯಿ ಚಿಪ್ಸ್ ತಯಾರಿಸಿ ಮಾರಾಟ ಮಾಡಿದ್ರೆ ಪ್ರತಿದಿನ ಉತ್ತಮ ಆದಾಯ ಪಡೆಯುವುದರಲ್ಲಿ ಡೌಟೇ ಇಲ್ಲ.
ಸ್ಟೇಟ್ ಬ್ಯಾಂಕ್ ನಂತರ ಈ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ, ಆಕರ್ಷಕ ಬಡ್ಡಿ ಘೋಷಣೆ
ಬಾಳೆಕಾಯಿ ಚಿಪ್ಸ್ ಉದ್ಯಮ ಆರಂಭಿಸಲು ಆಗುವ ಉಪಕರಣಗಳು/ಕಚ್ಚಾ ವಸ್ತುಗಳು (needed equipment)
ಬಾಳೆಕಾಯಿ
ಉಪ್ಪು
ಎಣ್ಣೆ
ಮಸಾಲೆ ಪದಾರ್ಥಗಳು
ಬಾಳೆಕಾಯಿ ತೆಳ್ಳಗೆ ಕತ್ತರಿಸಲು ಯಂತ್ರ
ಬಾಳೆಕಾಯಿ ಸಿಪ್ಪೆ ಸುಲಿಯುವ ಯಂತ್ರ
ಮಸಾಲೆ ಸೇರಿಸಿ ಪ್ಯಾಕಿಂಗ್ ಮಾಡುವುದು
ಇಷ್ಟು ಬೇಸಿಕ್ ವಸ್ತುಗಳನ್ನು ನೀವು ಹೊಂದಿರಬೇಕಾಗುತ್ತದೆ.
ಬಾಳೆಕಾಯಿ ಚಿಪ್ಸ್ ತಯಾರಿಸಲು ಬೇಕಾಗಿರುವ ಯಂತ್ರ (machineries) ಗಳನ್ನು ಸುಮಾರು 28,000ಗಳಿಂದ 50,000 ವೆಚ್ಚದಲ್ಲಿ ಖರೀದಿಸಬಹುದು. india.alibaba.com/index.html ಅಥವಾ ಅಮೆಜಾನ್ (amazon.com) ನಂತಹ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಖರೀದಿಸಬಹುದು. ಈ ಯಂತ್ರ ಸ್ಥಾಪಿಸಲು ಸುಮಾರು 5 ಸಾವಿರ ಚದರ ಅಡಿ ಜಾಗ ಬೇಕು.
ಇವು 2023 ರಲ್ಲಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರುಗಳು! ಟಾಪ್ ಯಾವುದು ಗೊತ್ತಾ?
ಚಿಪ್ಸ್ ತಯಾರಿಸಲು ತಗಲುವ ವೆಚ್ಚ! (The cost of making chips)
ಸುಮಾರು 50 ಕೆಜಿ ಬಾಳೆಕಾಯಿ ಚಿಪ್ಸ್ ತಯಾರಿಸುತ್ತೀರಿ ಎಂದು ಭಾವಿಸಿ, ಇದಕ್ಕೆ 120 ಕೆಜಿ ಬಾಳೆಕಾಯಿ ಬೇಕು. ಹತ್ತರಿಂದ ಹದಿನೈದು ಲೀಟರ್ ಎಣ್ಣೆ ಚಿಪ್ಸ್ ಕರೆಯಲು ಬೇಕು. ಇದಕ್ಕೆ ತಗುಲುವ ವೆಚ್ಚ ಅಂದಾಜು 1,050 ರೂಪಾಯಿಗಳು.
ಇನ್ನು ಯಂತ್ರಗಳಿಗೆ ಎಂಜಿನ್ ಓಡಿಸಲು 10 ರಿಂದ 15 ಲೀಟರ್ ಡೀಸೆಲ್ ಬೇಕಾಗುತ್ತದೆ. ಇದರ ವೆಚ್ಚ 900 ರೂಪಾಯಿಗಳು. ಉಪ್ಪು ಮತ್ತು ಮಸಾಲೆಯ ಖರ್ಚು 150 ರೂಪಾಯಿಗಳು. ಒಟ್ಟು ತಗುಲುವ ವೆಚ್ಚ ರೂ.3,200.
ಅಂದರೆ ಒಂದು ಕೆಜಿ ಬಾಳೆಕಾಯಿ ಚಿಪ್ಸ್ ತಯಾರಿಕೆಗೆ ನಿಮಗೆ 70 ರೂಪಾಯಿ ವೆಚ್ಚವಾಗುತ್ತದೆ. ಇದನ್ನು ಮಾರುಕಟ್ಟೆಯಲ್ಲಿ 90 ರಿಂದ 100 ರೂಪಾಯಿಗಳಿಗೆ ಮಾರಾಟ ಮಾಡಬಹುದು. ನೀವು ತಯಾರಿಸುವ ಚಿಪ್ಸ್ ರುಚಿ (good taste) ಉತ್ತಮವಾಗಿದ್ದರೆ ಬೇಡಿಕೆಯು ಹೆಚ್ಚಾಗುತ್ತದೆ.
ಸ್ಟೇಟ್ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಕೌಂಟ್ ನಿಷ್ಕ್ರಿಯ!
ಮಾರುಕಟ್ಟೆಯಲ್ಲಿ ಬಾಳೆಕಾಯಿ ಚಿಪ್ಸ್ ದರ ಪ್ರಸ್ತುತ 250 ಗ್ರಾಂ ಗೆ 100 ರೂಪಾಯಿಗಳು ಇವೆ. ಹಾಗಾಗಿ ನೀವು ಸ್ವಲ್ಪ ಬುದ್ಧಿವಂತಿಕೆಯಿಂದ ಸೆಲ್ ಮಾಡಿದರೆ ಇನ್ನು ಹೆಚ್ಚಿನ ಹಣ ಗಳಿಸಬಹುದು.
ಒಟ್ಟಾರೆಯಾಗಿ ನೀವು ಬಾಳೆಕಾಯಿ ಚಿಪ್ಸ್ ಉದ್ಯಮ ಆರಂಭಿಸುವುದಾದರೆ ಒಂದು ಕೆಜಿ ಬಾಳೆಕಾಯಿ ಚಿಪ್ಸ್ ಮೇಲೆ ಹತ್ತು ರೂಪಾಯಿ ಪ್ರಾಫಿಟ್ (profit) ಆದರೂ ದಿನದಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು.
ಅಂದರೆ ತಿಂಗಳಿಗೆ ಒಂದು ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ಸಂಪಾದನೆ. ಹಾಗಾದ್ರೆ ಇನ್ಯಾಕೆ ತಡ ನೀವು ಸಂತೋಷ ಆರಂಭಿಸಲು ಬಯಸಿದರೆ ಬಾಳೆಕಾಯಿ ಚಿಪ್ಸ್ ಉದ್ಯಮ ಅತ್ಯುತ್ತಮ ಆಯ್ಕೆಯಾಗಿದೆ.
4,000 income per day by Making of Banana chips Business
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.