Bank Loans: ಈ 6 ಪ್ರಮುಖ ಬ್ಯಾಂಕ್‌ಗಳಿಂದ ಸಾಲಗಾರರಿಗೆ ದೊಡ್ಡ ಶುಭಸುದ್ದಿ! ಬಡ್ಡಿದರ ಭಾರೀ ಇಳಿಕೆ

RBI ರೇಪೋ ದರ ಕಡಿತದ ಪರಿಣಾಮವಾಗಿ 6 ಬ್ಯಾಂಕ್‌ಗಳು ಸಾಲದ ಬಡ್ಡಿದರ ಇಳಿಕೆ ಘೋಷಿಸಿವೆ. ಮನೆ, ಕಾರು ಹಾಗೂ ರಿಟೈಲ್ ಸಾಲಗಳ EMI ಕಡಿಮೆಯಾಗುವ ಮೂಲಕ ಸಾಲಗಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

Bank Loans: ದ್ರವ್ಯ ನೀತಿ ಪರಿಶೀಲನೆಯ ನಂತರ ರಿಸರ್ವ್ ಬ್ಯಾಂಕ್ 25 ಬೇಸಿಸ್ ಪಾಯಿಂಟ್‌ಗಳ ರೇಪೋ ದರ ಕಡಿತ ಮಾಡುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂತು. ಬಹುಪಾಲು ಸಾಲಗಾರರಿಗೆ ಇದು ತಕ್ಷಣದ ರಿಲೀಫ್ ತಂದಿದೆ. ಆರ್ಥಿಕ ವೃದ್ಧಿ ಸ್ಥಿರವಾಗಿರುವುದು ಮತ್ತು ದ್ರವ್ಯೋಲ್ಬಣ ನಿಯಂತ್ರಿತ ಮಟ್ಟಕ್ಕಿಳಿದಿರುವುದು ಈ ತೀರ್ಮಾನಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ.

ಫೆಬ್ರವರಿ 2025 ರಿಂದಲೇ RBI ನಾಲ್ಕು ಹಂತಗಳಲ್ಲಿ ರೇಪೋ ದರ ಕಡಿತ ಮಾಡುತ್ತಾ ಬಂದಿದೆ. ಮೊದಲು 6.50% ರಿಂದ 6.25%, ನಂತರ ಮತ್ತೆ 6% ಕ್ಕೆ. ಜೂನ್‌ನಲ್ಲಿ 50 ಬೇಸಿಸ್ ಪಾಯಿಂಟ್ ಕಡಿತದೊಂದಿಗೆ ದರ 5.50% ಆಗಿದ್ದರೆ, ಡಿಸೆಂಬರ್‌ನ ಇತ್ತೀಚಿನ ಕಡಿತದೊಂದಿಗೆ ರೇಪೋ ದರ 5.25% ಆಗಿದೆ.

ಬ್ಯಾಂಕ್‌ಗಳಿಂದ ತ್ವರಿತ ಕ್ರಮ, ಸಾಲಗಾರರಿಗೆ ನೇರ ಲಾಭ

RBI ನಿರ್ಧಾರದ ನಂತರ ಅರು ಬ್ಯಾಂಕ್‌ಗಳು ತಕ್ಷಣ ಪ್ರತಿಕ್ರಿಯಿಸಿ ಬಡ್ಡಿದರ ಕಡಿತ ಘೋಷಿಸಿವೆ. ಬ್ಯಾಕ್ ಆಫ್ ಇಂಡಿಯಾ ತಮ್ಮ RBLR ಅನ್ನು 8.10% ಕ್ಕೆ ಇಳಿಸಿದ್ದು, ಇಂಡಿಯನ್ ಬ್ಯಾಂಕ್ RBLR ಅನ್ನು 7.95% ಗೆ ಮತ್ತು MCLR ಅನ್ನು 5 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ.

ಬ್ಯಾಂಕ್ ಆಫ್ ಬರೋಧಾ ರೇಪೋ ಆಧಾರಿತ ಲೆಂಡಿಂಗ್ ರೇಟ್ ಅನ್ನು 7.90% ಕ್ಕೆ ತಗ್ಗಿಸಿದೆ. ಕರುರ್ ವೈಶ್ಯಾ ಬ್ಯಾಂಕ್ ತನ್ನ ಎಲ್ಲಾ ಅವಧಿಯ ಸಾಲಗಳ MCLR ಅನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿ 9.45% ಗೆ ತಂದಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ಮನೆ ಸಾಲ (Home Loan) ಮತ್ತು ವಾಹನ ಸಾಲಗಳ (Vehicle Loan) ಆರಂಭಿಕ ದರಗಳನ್ನು ಕ್ರಮವಾಗಿ 7.10% ಮತ್ತು 7.45% ಆಗಿ ಪ್ರಕಟಿಸಿದೆ. ಇದರ ಪರಿಣಾಮವಾಗಿ EMIಗಳು ನೇರವಾಗಿ ಕಡಿಮೆಯಾಗುತ್ತವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಗ್ರಾಹಕರ ಬಡ್ಡಿದರಕ್ಕೆ ರಿಯಾಯಿತಿ ಘೋಷಿಸಿ ಸಾಲಗಾರರ ಭಾರವನ್ನು ತಗ್ಗಿಸಿದೆ.

ಈ ಬಡ್ಡಿದರ ಇಳಿಕೆ ಹೊಸ ಸಾಲ ಪಡೆಯುವವರಿಗೆ ಮಾತ್ರವಲ್ಲ, ಈಗಾಗಲೇ ಸಾಲ ಹೊಂದಿರುವ ಗ್ರಾಹಕರಿಗೂ ದೊಡ್ಡ ನೆರವಾಗಲಿದೆ. EMI ಕಡಿಮೆಯಿಂದ ಹಣಕಾಸಿನ ಒತ್ತಡ ತಗ್ಗಿ ಮನೆ ಖರ್ಚು ನಿರ್ವಹಣೆಗೆ ಸಹಾಯಕವಾಗುತ್ತದೆ. ತಜ್ಞರ ಪ್ರಕಾರ, ಮುಂದಿನ ತಿಂಗಳುಗಳಲ್ಲಿ ಇನ್ನೂ ಕೆಲವು ಬ್ಯಾಂಕ್‌ಗಳು ಇದೇ ದಾರಿಯಲ್ಲಿ ನಡೆದು ಮತ್ತಷ್ಟು ರಿಯಾಯಿತಿಗಳನ್ನು ನೀಡುವ ಸಾಧ್ಯತೆ ಇದೆ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories