ಆಧಾರ್ ಕಾರ್ಡ್ ಅಪ್ಡೇಟ್, ಹೊಸ ಆಪ್ ಮೂಲಕ ಮನೆಯಲ್ಲೇ ಸೇವೆಗಳು
Aadhaar Update: ಆಧಾರ್ ಕಾರ್ಡ್ ಮಾಹಿತಿಯನ್ನು ನವೀಕರಿಸಲು ಈಗ ಎನ್‌ರೋಲ್‌ಮೆಂಟ್ ಕೇಂದ್ರಕ್ಕೆ ಹೋಗುವ ಅಗತ್ಯ ಕಡಿಮೆಯಾಗಿದೆ. ಹೊಸ ಆಧಾರ್ ಆಪ್ ಮೂಲಕ ಮನೆಯಲ್ಲೇ ಮೊಬೈಲ್ ನಂಬರ್ ಸೇರಿದಂತೆ ಕೆಲವು ಸೇವೆಗಳನ್ನು ಸುಲಭವಾಗಿ ಅಪ್ಡೇಟ್ ಮಾಡಬಹುದು.

Aadhaar Update: ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಪ್ರಮುಖ ಗುರುತಿನ ದಾಖಲೆ ಎಂದರೆ ಆಧಾರ್ ಕಾರ್ಡ್ (Aadhaar Card). ಸರ್ಕಾರಿ ಯೋಜನೆಗಳಿಂದ ಹಿಡಿದು ಬ್ಯಾಂಕ್ ಸೇವೆಗಳು, ಮೊಬೈಲ್ ಸಿಮ್ ಪಡೆಯುವುದು ಸೇರಿದಂತೆ ಹಲವು ಸೇವೆಗಳಿಗೆ ಇದು ಅಗತ್ಯವಾಗಿದೆ.
ಈ ಹಿನ್ನೆಲೆ, ಆಧಾರ್ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಇನ್ನಷ್ಟು ಸರಳಗೊಳಿಸಿದೆ.
ಇತ್ತೀಚೆಗೆ ಪರಿಚಯಿಸಿದ ಆಧಾರ್ ಮೊಬೈಲ್ ಆಪ್ ಮೂಲಕ ಮನೆಯಲ್ಲೇ ಕೆಲವು ಪ್ರಮುಖ ಸೇವೆಗಳನ್ನು ಪಡೆಯಬಹುದು. ಮೊಬೈಲ್ ನಂಬರ್ ನವೀಕರಣ ಸೇರಿದಂತೆ ಹಲವು ಅಪ್ಡೇಟ್‌ಗಳನ್ನು ಈಗ ಆನ್‌ಲೈನ್ ಮೂಲಕವೇ ಮಾಡಲು ಅವಕಾಶ ನೀಡಲಾಗಿದೆ.
ಮೊಬೈಲ್ ನಂಬರ್ ಲಿಂಕ್ ಯಾಕೆ ಮುಖ್ಯ?
ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಿರುವುದು ಬಹಳ ಮುಖ್ಯ. ಏಕೆಂದರೆ ಬಹುತೇಕ ಸೇವೆಗಳು OTP ದೃಢೀಕರಣ (verification) ಮೂಲಕವೇ ನಡೆಯುತ್ತವೆ. ಮೊಬೈಲ್ ನಂಬರ್ ಸಂಪರ್ಕಿಸದಿದ್ದರೆ ಆಧಾರ್ ಆಧಾರಿತ ಅನೇಕ ಸೇವೆಗಳನ್ನು ಬಳಸುವುದು ಕಷ್ಟವಾಗುತ್ತದೆ.
ಹಿಂದೆ ಮೊಬೈಲ್ ನಂಬರ್ ಬದಲಾಯಿಸಲು ಅಥವಾ ಅಪ್ಡೇಟ್ ಮಾಡಲು ಜನರು ಆಧಾರ್ ನೋಂದಣಿ ಕೇಂದ್ರಗಳಿಗೆ ತೆರಳಬೇಕಾಗಿತ್ತು. ಆದರೆ ಈಗ ಹೊಸ ವ್ಯವಸ್ಥೆಯ ಮೂಲಕ ಮೊಬೈಲ್ ಆಪ್ ಬಳಸಿ ಮನೆಯಲ್ಲೇ ನಂಬರ್ ಬದಲಾಯಿಸುವ ಅವಕಾಶ ಸಿಕ್ಕಿದೆ.
ಆಧಾರ್ ಆಪ್ ಮೂಲಕ ಮೊಬೈಲ್ ನಂಬರ್ ಅಪ್ಡೇಟ್ ಹೇಗೆ?
ಮೊಬೈಲ್ ಆಪ್ ಮೂಲಕ ನಂಬರ್ ಅಪ್ಡೇಟ್ ಮಾಡಲು ಈ ಕ್ರಮಗಳನ್ನು ಅನುಸರಿಸಬಹುದು:
- ಮೊಬೈಲ್‌ನಲ್ಲಿ ಅಧಿಕೃತ ಆಧಾರ್ ಆಪ್ ಡೌನ್‌ಲೋಡ್ ಮಾಡಿ
- ಆಧಾರ್ ಆಧಾರಿತ ದೃಢೀಕರಣ ಬಳಸಿ ಲಾಗಿನ್ ಆಗಿ
- ಹೋಮ್ ಪೇಜ್‌ನಲ್ಲಿ Services ವಿಭಾಗವನ್ನು ಆಯ್ಕೆ ಮಾಡಿ
- Update Mobile Number ಆಯ್ಕೆಯನ್ನು ಕ್ಲಿಕ್ ಮಾಡಿ
- ಹೊಸ ಮೊಬೈಲ್ ನಂಬರ್ ನಮೂದಿಸಿ
- ಹೊಸ ನಂಬರ್‌ಗೆ ಬರುವ OTP ಅನ್ನು ನಮೂದಿಸಿ
- ಅಗತ್ಯ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
- ಆನ್‌ಲೈನ್ ಮೂಲಕ ಸೇವಾ ಶುಲ್ಕವನ್ನು ಪಾವತಿಸಿ
- ಇದಾದ ನಂತರ ನಿಮ್ಮ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಸೇವಾ ಶುಲ್ಕ ಮತ್ತು ಅಪ್ಡೇಟ್ ಸಮಯ
ಮೊಬೈಲ್ ನಂಬರ್ ಅಥವಾ ವಿಳಾಸವನ್ನು ಆಪ್ ಮೂಲಕ ಅಪ್ಡೇಟ್ ಮಾಡಲು ₹75 ಸೇವಾ ಶುಲ್ಕ ವಿಧಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಬಳಿಕ ಸಾಮಾನ್ಯವಾಗಿ 10 ರಿಂದ 15 ದಿನಗಳೊಳಗೆ ನಂಬರ್ ಅಪ್ಡೇಟ್ ಆಗುತ್ತದೆ.
ಕೆಲ ಸಂದರ್ಭಗಳಲ್ಲಿ ಈ ಪ್ರಕ್ರಿಯೆಗೆ ಒಂದು ತಿಂಗಳವರೆಗೆ ಸಮಯ ಹಿಡಿಯಬಹುದು. ಅಪ್ಡೇಟ್ ಆದ ಬಳಿಕ ಹೊಸ ಮೊಬೈಲ್ ನಂಬರ್‌ಗೆ ದೃಢೀಕರಣ ಸಂದೇಶ ಬರುತ್ತದೆ. ಜೊತೆಗೆ ಅಪ್ಲಿಕೇಶನ್‌ನಲ್ಲಿ ಸ್ಟೇಟಸ್ ಪರಿಶೀಲಿಸುವ ಅವಕಾಶವೂ ಇದೆ.



