Flight Ticket Offer: ₹1500 ಕ್ಕೆ ವಿಮಾನ ಪ್ರಯಾಣ? ಏರ್ ಇಂಡಿಯಾ ಸ್ಪೆಷಲ್ ಸೇಲ್ ಶುರು!
ಏರ್ ಇಂಡಿಯಾ ಹೊಸ ಆಫರ್ ಮೂಲಕ ಕೇವಲ ₹1499 ರಿಂದ ದೇಶೀಯ ಪ್ರಯಾಣಕ್ಕೆ ಅವಕಾಶ ನೀಡಿದೆ. ಈ ಸ್ಪೆಷಲ್ ಸೇಲ್ ನವೆಂಬರ್ 2 ರವರೆಗೆ ಮಾತ್ರ ಲಭ್ಯವಿದ್ದು, ಸೀಮಿತ ಟಿಕೆಟ್ಗಳಿಗೆ ಮಾತ್ರ ಅನ್ವಯಿಸುತ್ತದೆ.

Air India Flight Ticket Offer : ವಿಮಾನ ಪ್ರಯಾಣ ಎಂದರೆ ಹೆಚ್ಚು ಖರ್ಚು ಎಂಬ ಭಾವನೆ ಜನರ ಮನಸ್ಸಿನಲ್ಲಿ ಇರುವ ಕಾಲದಲ್ಲಿ, ಏರ್ ಇಂಡಿಯಾ ಹೊಸ ಸರ್ಪ್ರೈಸ್ ನೀಡಿದೆ.
ಕಂಪನಿಯು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ವಿಶೇಷ ಸೇಲ್ ಘೋಷಿಸಿದ್ದು, ಕೇವಲ ₹1499 ರಿಂದ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ.
ಈ ಆಫರ್ ಅಕ್ಟೋಬರ್ ಅಂತ್ಯದಿಂದ ನವೆಂಬರ್ 2ರವರೆಗೆ ಮಾತ್ರ ಲಭ್ಯವಿರುತ್ತದೆ. ಪ್ರಯಾಣ ದಿನಾಂಕಗಳು 2026ರ ಜನವರಿ 12 ರಿಂದ ಸೆಪ್ಟೆಂಬರ್ 30ರೊಳಗೆ ಇರಬೇಕೆಂಬ ನಿಬಂಧನೆ ಇದೆ. ಆನ್ಲೈನ್ನಲ್ಲಿ (Air India Website ಅಥವಾ ಮೊಬೈಲ್ ಆಪ್) ಟಿಕೆಟ್ ಬುಕ್ ಮಾಡಿದರೆ ಇನ್ನಷ್ಟು ಪ್ರಯೋಜನಗಳು ಸಿಗುತ್ತವೆ.
ಈ ಸೇಲ್ನಡಿ ಆಯ್ದ ರೂಟ್ಗಳಿಗೆ ಮಾತ್ರ ರಿಯಾಯಿತಿ ಅನ್ವಯವಾಗುತ್ತದೆ. ಉದಾಹರಣೆಗೆ, ಹೈದರಾಬಾದ್ನಿಂದ ವಿಜಯವಾಡಕ್ಕೆ ಕೇವಲ ₹2800 ಕ್ಕೆ ಟಿಕೆಟ್ ದೊರೆಯಲಿದೆ. ಆದರೆ ಈ ಆಫರ್ನಲ್ಲಿ ಸೀಟುಗಳು ಸೀಮಿತವಾಗಿದ್ದು, ಮೊದಲು ಬುಕ್ ಮಾಡಿದವರಿಗೆ ಮಾತ್ರ ಲಭ್ಯವಾಗುತ್ತದೆ.
ಅದೇ ರೀತಿಯಲ್ಲಿ ಅಂತಾರಾಷ್ಟ್ರೀಯ ಫ್ಲೈಟ್ಗಳಿಗೆ FLYAI ಪ್ರೋಮೋ ಕೋಡ್ ಬಳಸಿದರೆ ₹3,000 ವರೆಗೆ ರಿಯಾಯಿತಿ ಸಿಗಬಹುದು. ಯಾವುದೇ ಕನ್ವೀನಿಯನ್ಸ್ ಫೀ ಇರದೇ ಕೆಲವು ಬ್ಯಾಂಕ್ ಆಫರ್ಗಳೂ ಕೂಡಾ ಅನ್ವಯವಾಗುತ್ತವೆ. ಈ ಸೀಮಿತ ಅವಧಿಯ ಸೇಲ್ ಮೂಲಕ ಏರ್ ಇಂಡಿಯಾ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ.
Air India Special Sale, Flight Tickets from 1499







