ಪಡಿತರ ಚೀಟಿ ಹೊಂದಿರುವವರಿಗೆ ಬಿಗ್ ನ್ಯೂಸ್! 5ಕೆಜಿ ಅಕ್ಕಿ ಜೊತೆ ಈ ಎಲ್ಲಾ ವಸ್ತುಗಳು ಸಿಗಲಿದೆ

ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರದ ಸಚಿವರು ರೇಶನ್ ಕಾರ್ಡ್ ಹೊಂದಿರುವವರಿಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಲ್ಲಿ ಉಚಿತವಾಗಿ ಧಾನ್ಯ ಸಿಗಲಿದೆ.

ಕೇಂದ್ರ ಸರ್ಕಾರವು ಕಷ್ಟದಲ್ಲಿರುವ ಮತ್ತು ಬಡತನದ ಗೆರೆಗಿಂತ ಕೆಳಗಿರುವ ಎಲ್ಲಾ ಜನರಿಗೆ ಪಡಿತರ ಚೀಟಿ (Ration Card Benefits) ಮೂಲಕ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತದೆ. ಈಗ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳ ಸೌಲಭ್ಯಗಳನ್ನು ಪಡೆಯಬೇಕು ಎಂದರೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇರಲೇಬೇಕು.

ರಾಜ್ಯ ಸರ್ಕಾರ ಮಾತ್ರವಲ್ಲ ಕೇಂದ್ರ ಸರ್ಕಾರ ಕೂಡ ರೇಷನ್ ಕಾರ್ಡ್ ಇರುವವರಿಗೆ ಸಾಕಷ್ಟು ಕೊಡುಗೆಗಳು ಮತ್ತು ಕೊಡುಗೆಗಳನ್ನು ನೀಡುತ್ತಲೇ ಇರುತ್ತದೆ. ಇದೀಗ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರದ ಸಚಿವರು ರೇಶನ್ ಕಾರ್ಡ್ ಹೊಂದಿರುವವರಿಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಲ್ಲಿ ಉಚಿತವಾಗಿ ಧಾನ್ಯ ಸಿಗಲಿದೆ.

ಈ ಯೋಜನೆಯಲ್ಲಿ ಬರುತ್ತಿರುವ ಬ್ರ್ಯಾಂಡ್ ನ ಹೆಸರು ‘ಭಾರತ್ ದಾಲ್’ (Bharat Dal). ಈ ಬ್ರ್ಯಾಂಡ್ ನ ಅಡಿಯಲ್ಲಿ ಬೇಳೆಕಾಳುಗಳು ಕಡಿಮೆ ಬೆಲೆಗೆ ಸಬ್ಸಿಡಿ ಬೆಲೆಯಲ್ಲಿ ಸಿಗುತ್ತದೆ. ರೇಷನ್ ಕಾರ್ಡ್ ಹೊಂದಿರುವ ಎಲ್ಲರಿಗು 5 ಕೆಜಿ ಈ ಬೇಳೆಕಾಳುಗಳನ್ನು ನೀಡಲಾಗುತ್ತದೆ, ಬಹಳ ಕಡಿಮೆ ಬೆಲೆಗೆ ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯ ಆಗುವ ಬೆಲೆಗೆ ಬೇಳೆ ಕಾಳುಗಳು ಸಿಗಲಿದೆ.

ಪಡಿತರ ಚೀಟಿ ಹೊಂದಿರುವವರಿಗೆ ಬಿಗ್ ನ್ಯೂಸ್! 5ಕೆಜಿ ಅಕ್ಕಿ ಜೊತೆ ಈ ಎಲ್ಲಾ ವಸ್ತುಗಳು ಸಿಗಲಿದೆ - Kannada News

ಜನರ ಆರೋಗ್ಯಕ್ಕೆ ಅಕ್ಕಿಯ ಜೊತೆಗೆ ಧಾನ್ಯಗಳ ಸೇವನೆ ಕೂಡ ಮುಖ್ಯವಾಗುತ್ತದೆ. ಜನರು ಮನೆಯಲ್ಲಿ ಅಡುಗೆಗೆ ಪ್ರತಿದಿನ ಬಳಸುವ ಪ್ರಮುಖ ಧಾನ್ಯಗಳಲ್ಲಿ ಒಂದು ಬೇಳೆಕಾಳು. ಹಾಗಾಗಿ ಜನರಿಗೆ ಈ ಬೇಳೆ ಕಾಳುಗಳು ಸುಲಭವಾಗಿ ಸಿಗುವ ಹಾಗೆ ಮಾಡುವ ಪ್ರಯತ್ನ ಸರ್ಕಾರದ್ದು. ಎಲ್ಲಾ ಜನರಿಗೂ ಬೇಳೆ ಕಾಳುಗಳು ಕಡಿಮೆ ಬೆಲೆಯಲ್ಲಿ ಸಿಗಬೇಕು ಎಂದು ಈ ನಿರ್ಧಾರ ಮತ್ತು ಕ್ರಮಗಳನ್ನು ತೆಗೆದುಕೊಂಡಿದೆ.

ಬೇಳೆಕಾಳು ಸಿಗುವ ಹಾಗೆ ಪ್ರಯತ್ನ ನಡೆಯುತ್ತಿದೆ.ಈಗಾಗಲೇ 58ಲಕ್ಷ ಕುಟುಂಬಗಳಿಗೆ ಬೇಳೆಕಾಳುಗಳು ಸಿಕ್ಕಿದೆ.. ಎಪಿಎಲ್ (APL), ಬಿಪಿಎಲ್ (BPL) ಮತ್ತು ಅಂತ್ಯೋದಯ ಕಾರ್ಡ್ (Anthyodaya Card) ಎಲ್ಲರಿಗೂ ಓ ಸೌಲಭ್ಯ ಸಿಗಲಿದ್ದು, ಶೀಘ್ರದಲ್ಲೇ ಜಾರಿಗೆ ತರುವ ಎಲ್ಲಾ ಪ್ರಯತ್ನಗಳು ಆಹಾರ ಸರಬರಾಜು ಇಲಾಖೆಯಿಂದ ನಡೆಯುತ್ತಿದೆ. ಈ ಮೂಲಕ ರೇಷನ್ ಕಾರ್ಡ್ ಹೊಂದಿರುವ ಎಲ್ಲರಿಗೂ 5ಕೆಜಿ ಬೇಳೆಕಾಳು ಸಿಗುತ್ತದೆ.

ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂವು ಸಣ್ಣ ಅಂಗಡಿಗಳ ಮೂಲಕ ಬೇಳೆಕಾಲುಗಳನ್ನು ಮಾರಾಟ ಮಾಡುತ್ತಿದೆ. ಸಬ್ಸಿಡಿ ಹೊಂದಿರುವ ಈ ಬೇಳೆಕಾಳುಗಳು ಮದರ್ ಡೈರಿ, ಕೇಂದ್ರೀಯ ಭಂಡಾರ್, ಎನ್.ಸಿ.ಸಿ.ಎಫ್ (NCCF) ಇಲ್ಲಿ ಕೂಡ ಸಿಗುತ್ತದೆ..ಕೇಂದ್ರ ಸರ್ಕಾರ ಜನರಿಗಾಗಿ ಈ ಎಲ್ಲಾ ಹೊಸ ಯೋಜನೆಗಳು, ಸೌಲಭ್ಯಗಳನ್ನು ತರುತ್ತಿದೆ.

along with 5kg rice these things will be given with ration card

ಜನರು ಕೂಡ ಇದನ್ನು ಉಪಯೋಗಿಸಿಕೊಂಡರೆ, ಅವರಿಗೇ ಲಾಭವಾಗುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ನೀಡುತ್ತಿರುವ ಈ ಎಲ್ಲಾ ಹೊಸ ಯೋಜನೆಗಳನ್ನು ಕೂಡ ಜನರು ಸದುಪಯೋಗ ಪಡಿಸಿಕೊಂಡು, ಉತ್ತಮ ಜೀವನ ಸಾಗಿಸಬೇಕು. ಆಗ ನಮ್ಮ ದೇಶದ ಸ್ಥಿತಿ ಕೂಡ ಉನ್ನತ ಹಂತವನ್ನು ತಲುಪುತ್ತದೆ. ಪ್ರತಿ ದೇಶದಲ್ಲಿ ಪ್ರಜೆಗಳ ಆರೋಗ್ಯ ಬಹಳ ಮುಖ್ಯವಾಗುತ್ತದೆ.

Along with 5kg rice these things will be given with ration card

Follow us On

FaceBook Google News

along with 5kg rice these things will be given with ration card