ಈಗ ಫೋನ್ ಖರೀದಿಸಿದರೆ, ಅರ್ಧ ಬೆಲೆ! ಅಮೆಜಾನ್ ಸೇಲ್‌ನಲ್ಲಿ ಬಂಪರ್ ಡೀಲ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆರಂಭ, ಐಫೋನ್ 16, ಒನ್‌ಪ್ಲಸ್ 13, ಸ್ಯಾಮ್ಸಂಗ್ S24 ಸೇರಿದಂತೆ ಅನೇಕ ಫೋನ್‌ಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಅಪರೂಪದ ಅವಕಾಶ.

Amazon Great Indian Festival Sale: ಅಮೆಜಾನ್ ತನ್ನ ಬಹು ನಿರೀಕ್ಷಿತ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಾರಂಭಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ (Smartphones) ಜೊತೆಗೆ ಎಲೆಕ್ಟ್ರಾನಿಕ್ಸ್, ಫ್ಯಾಷನ್, ಬ್ಯೂಟಿ ಮತ್ತು ಗೃಹೋಪಯೋಗಿ ವಸ್ತುಗಳಿಗೂ ಭಾರೀ ರಿಯಾಯಿತಿ ದೊರೆಯುತ್ತಿದೆ.
ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಬೆಲೆ ಕಡಿತದ ಪ್ರಮಾಣ ಜನರನ್ನು ಆಕರ್ಷಿಸುತ್ತಿದೆ. ಈ ಸೇಲ್‌ನಲ್ಲಿ ಕೆಲವು ಫೋನ್‌ಗಳನ್ನು ಅದರ ಮೂಲ ಬೆಲೆಯ ಅರ್ಧಕ್ಕಿಂತ ಕಡಿಮೆ ದರದಲ್ಲಿ ಪಡೆಯಬಹುದು.
ಐಫೋನ್ 16 ಈಗ ಕೇವಲ ₹51,999 ಕ್ಕೆ ಲಭ್ಯ. ಬ್ಯಾಂಕ್ ಆಫರ್ ಬಳಸಿದರೆ ಇದರ ಬೆಲೆ ₹50,000ಕ್ಕಿಂತಲೂ ಕಡಿಮೆಯಾಗುತ್ತದೆ. A18 ಚಿಪ್‌ಸೆಟ್ ಮತ್ತು ಆಪಲ್ ಇಂಟೆಲಿಜೆನ್ಸ್ ಸಪೋರ್ಟ್‌ನೊಂದಿಗೆ ಇದು ಪ್ರೀಮಿಯಂ ಅನುಭವ ನೀಡುತ್ತದೆ.
ಪವರ್ ಯೂಸರ್‌ಗಳಿಗೆ ಸೂಕ್ತವಾದ ಒನ್‌ಪ್ಲಸ್ 13, ಮೂಲ ಬೆಲೆ ₹79,999 ಇದ್ದದ್ದು, ಬ್ಯಾಂಕ್ ಆಫರ್‌ನಲ್ಲಿ ಕೇವಲ ₹57,749 ಕ್ಕೆ ಸಿಗುತ್ತಿದೆ. Snapdragon 8 Gen 3 ಪ್ರೊಸೆಸರ್ ಹಾಗೂ AMOLED ಡಿಸ್‌ಪ್ಲೇ ಇದನ್ನು ಆಕರ್ಷಕ ಮಾಡುತ್ತದೆ.
ಜನಪ್ರಿಯ ಸ್ಯಾಮ್ಸಂಗ್ ಗ್ಯಾಲಕ್ಸಿ S24, ಮೂಲ ಬೆಲೆ ₹64,999 ಇದ್ದದ್ದು ಈಗ ಕೇವಲ ₹39,999 ಕ್ಕಿಂತ ಕಡಿಮೆ ದರಕ್ಕೆ ದೊರೆಯಲಿದೆ. ಫ್ಲಾಗ್‌ಶಿಪ್ AI ಫೀಚರ್‌ಗಳು, AMOLED ಡಿಸ್‌ಪ್ಲೇ ಮತ್ತು ಶಕ್ತಿಯುತ ಕ್ಯಾಮೆರಾ ಈ ಬೆಲೆಯಲ್ಲಿ ದೊಡ್ಡ ಡೀಲ್ ಆಗಿದೆ.
ಮಧ್ಯಮ ಶ್ರೇಣಿಯ ಗ್ರಾಹಕರಿಗೆ ಒನ್‌ಪ್ಲಸ್ ನಾರ್ಡ್ 5 ಉತ್ತಮ ಆಯ್ಕೆಯಾಗಿದ್ದು, ಇದರ ಬೆಲೆ ₹28,499 ಕ್ಕೆ ಇಳಿದಿದೆ. 6.83 ಇಂಚಿನ AMOLED ಡಿಸ್‌ಪ್ಲೇ, Snapdragon 8s Gen 3 ಪ್ರೊಸೆಸರ್ ಮತ್ತು 6800mAh ಬ್ಯಾಟರಿ ಇದರ ವಿಶೇಷತೆ.
ಗೇಮಿಂಗ್ ಪ್ರಿಯರಿಗಾಗಿ Infinix GT 30 ಕೇವಲ ₹17,959 ಕ್ಕೆ ಲಭ್ಯವಿದ್ದು, 144Hz AMOLED ಡಿಸ್‌ಪ್ಲೇ, ಗೇಮಿಂಗ್ ಟ್ರಿಗರ್‌ಗಳು ಮತ್ತು Dimensity 7400 ಪ್ರೊಸೆಸರ್‌ನೊಂದಿಗೆ ಗೇಮಿಂಗ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ.
ಇಷ್ಟೇ ಅಲ್ಲ, ಒನ್‌ಪ್ಲಸ್ 13R, ಒಪ್ಪೋ ರೆನೋ 14, Nord CE 5 ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳೂ ಆಕರ್ಷಕ ಬೆಲೆಯಲ್ಲಿ ಲಭ್ಯವಿದ್ದು, ಗ್ರಾಹಕರು ಅಮೆಜಾನ್ ಆಪ್ ಅಥವಾ ವೆಬ್‌ಸೈಟ್‌ನಲ್ಲಿ ಈ ಆಫರ್‌ಗಳನ್ನು ಬಳಸಿಕೊಳ್ಳಬಹುದು.
Amazon Great Indian Festival, Big Discounts on Smartphones



