ಈ ಜಿಲ್ಲೆಯ ಪಡಿತರ ಚೀಟಿದಾರರಿಗೆ ಸಿಕ್ಕಿದೆ ಅನ್ನಭಾಗ್ಯ ಯೋಜನೆ ಹಣ, ಯಾರ ಖಾತೆಗೆ ಎಷ್ಟು ಹಣ ಬಂದಿದೆ?

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನ್ನಭಾಗ್ಯ ಪ್ರಯೋಜನ ಪಡೆಯುವವರಿಗೆ ₹11.58ಕೋಟಿ ರೂಪಾಯಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ.

Bengaluru, Karnataka, India
Edited By: Satish Raj Goravigere

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ (Anna Bhagya Yojane) ಅಡಿಯಲ್ಲಿ ಸರ್ಕಾರವು ಬಿಪಿಎಲ್ ಕಾರ್ಡ್ (BPL Card) ಮತ್ತು ಅಂತ್ಯೋದಯ ಕಾರ್ಡ್ (Anthyodaya Card) ಹೊಂದಿರುವ ಕುಟುಂಬಗಳ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಜೊತೆಗೆ ಇನ್ನು 5ಕೆಜಿ ಅಕ್ಕಿಯ ಬದಲಾಗಿ, ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ, ಒಬ್ಬ ವ್ಯಕ್ತಿಗೆ 170 ರೂಪಾಯಿಯ ಹಾಗೆ ರೇಷನ್ ಕಾರ್ಡ್ (Ration card) ನಲ್ಲಿರುವ ವ್ಯಕ್ತಿಗಳಿಗೆ ಹಣವನ್ನು ಮನೆಯ ಯಜಮಾನಿಗೆ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಹೇಳಿತ್ತು.

ಆದರೆ ಹಣದ ಸೌಲಭ್ಯ ಪಡೆಯಲು ಕೆಲವು ನಿಯಮಗಳನ್ನು ಇಡಲಾಗಿತ್ತು. ರಾಜ್ಯದ ಜನರಿಗೆ ಇನ್ನು ಅನ್ನಭಾಗ್ಯ ಯೋಜನೆಯ ಹಣ ಸಿಕ್ಕಿಲ್ಲ ಎಂದು ಮಾಹಿತಿ ಸಿಕ್ಕಿತ್ತು. ಆದರೆ ಈಗ ಚಿಕ್ಕಮಗಳೂರು (Chikkamagalur) ಜಿಲ್ಲೆಯ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಬಂದಿದೆ ಎಂದು ಮಾಹಿತಿ ಸಿಕ್ಕಿದೆ. ಈ ಜಿಲ್ಲೆಯಲ್ಲಿ ಅನ್ನಭಾಗ್ಯ ಪ್ರಯೋಜನ ಪಡೆಯುವವರಿಗೆ ₹11.58ಕೋಟಿ ರೂಪಾಯಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ.

Annabhagya Yojana DBT status check Online

2,13,257 ರೇಷನ್ ಕಾರ್ಡ್ ದಾರರ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಒಟ್ಟು ₹11,58,06,720 ರೂಪಾಯಿ ಜಮೆಯಾಗಿದೆ ಎನ್ನುವ ಮಾಹಿತಿಯನ್ನು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮೀನಾಕುಮಾರಿ ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆಯ ಫಲ ಈ ಜಿಲ್ಲೆಯ AAY ಮತ್ತು PHH ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ತಿಳಿಸಿದ್ದಾರೆ..

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 25,628 ರೇಷನ್ ಕಾರ್ಡ್ ಗಳು ರಿಜೆಕ್ಟ್ ಆಗಿವೆ, ಅದಕ್ಕೆ ಕಾರಣ ಏನು ಎಂದರೆ, 7731 ರೇಷನ್ ಕಾರ್ಡ್ ಗಳ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿಲ್ಲ, 17,856 ರೇಷನ್ ಕಾರ್ಡ್ ಗಳು ಇರುವ ಜನರ ಹತ್ತಿರ ಬ್ಯಾಂಕ್ ಅಕೌಂಟ್ ಇಲ್ಲ, 95 ರೇಷನ್ ಕಾರ್ಡ್ ಗಳ ಕುಟುಂಬವು ಬ್ಯಾಂಕ್ ಅಕೌಂಟ್ ಅನ್ನು ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ..

ಒಂದು ವೇಳೆ ಜನರು ಇನ್ನು ಬ್ಯಾಂಕ್ ಅಕೌಂಟ್ ತೆರೆದಿಲ್ಲ ಎಂದರೆ ನಿಮ್ಮ ಹತ್ತಿರದ ತಾಲ್ಲೂಕ್ ಆಫೀಸ್, ಪೋಸ್ಟ್ ಆಫೀಸ್ ಗಳಲ್ಲಿ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕಿಂಗ್ ಅಕೌಂಟ್ ಓಪನ್ ಮಾಡಬಹುದು. ಎಲ್ಲಾ ಪೋಸ್ಟ್ ಆಫೀಡ್ ಗಳಲ್ಲಿ IIPB ಅಕೌಂಟ್ ಓಪನ್ ಮಾಡಬಹುದು. ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿಲ್ಲದೆ ಹೋದರೆ..

ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಯಜಮಾನಿಯರು ಇದ್ದರೆ, ಅಥವಾ ಆಧಾರ್ ಕಾರ್ಡ್ ನಂಬರ್ ತಪ್ಪಾಗಿ ಕೊಟ್ಟಿದ್ದರೆ, 3 ತಿಂಗಳಿನಿಂದ ರೇಷನ್ ತೆಗೆದುಕೊಳ್ಳದೇ ಹೋಗಿದ್ದರೆ ಕೂಡ, ನಿಮಗೆ ಅನ್ನಭಾಗ್ಯ ಯೋಜನೆಯ 5ಕೆಜಿ ಅಕ್ಕಿಯ ಹಣ ಸಿಗದೆ ಹೋಗಬಹುದು. ಹಾಗಾಗಿ ಮೊದಲು ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ತಿ ಮಾಡಿಕೊಳ್ಳಿ..

Annabhagya yojana amount credited to this district people

ನಿಮ್ಮ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿದ್ದರೆ ಆಗಸ್ಟ್ ತಿಂಗಳಿನಿಂದಲೇ ನೀವು ಅನ್ನಭಾಗ್ಯ ಯೋಜನೆಯ ಫಲದ ಹಣವನ್ನು ಬ್ಯಾಂಕ್ ಖಾತೆಗೆ ಪಡೆಯಬಹುದು. ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾರನ್ನು ಮನೆಯ ಯಜಮಾನಿ ಎಂದು ಉಲ್ಲೇಖಿಸಿರುತ್ತೀರೋ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ಈ ಫಲ ಸಿಗುತ್ತದೆ.

Annabhagya yojana amount credited to this district people