ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಈ ತಿಂಗಳು ಬಂಪರ್ ಡಿಸ್ಕೌಂಟ್: ಇಎಂಐ ಮೇಲೆ ಭಾರೀ ಆಫರ್!
ಡಿಸೆಂಬರ್ ತಿಂಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಏಥರ್ ಎನರ್ಜಿ ವಿಶೇಷ ರಿಯಾಯಿತಿ, ಇಎಂಐ ಸೌಲಭ್ಯ ಮತ್ತು ದಿರ್ಘವದಿಯ ಬ್ಯಾಟರಿ ವಾರಂಟಿ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುವ ಆಕರ್ಷಕ ಆಫರ್ಗಳನ್ನು ಪ್ರಕಟಿಸಿದೆ.
Electric Scooter Discount: ವರ್ಷಾಂತ್ಯದಲ್ಲಿ ವಾಹನ ಮೌಲ್ಯ ಕುಸಿತವಾಗುವ ಭಯದಿಂದ ಗ್ರಾಹಕರು ಖರೀದಿ ಮುಂದೂಡುವುದು ಸಾಮಾನ್ಯ. ಈ ಸಮಸ್ಯೆಯನ್ನು ಪರಿಹರಿಸಲು ಏಥರ್ ಎನರ್ಜಿ “Ather Electric December” ಎಂಬ ತಿಂಗಳ ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು ಘೋಷಿಸಿದೆ.
ದೇಶದ ವಿವಿಧ ರಾಜ್ಯಗಳಲ್ಲಿ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಗ್ರಾಹಕರು ₹20,000 ವರೆಗೆ ಲಾಭ ಪಡೆಯುವ ಅವಕಾಶವಿದೆ.
ಕ್ರೆಡಿಟ್ ಕಾರ್ಡ್ EMI ಮೇಲೆ ತಕ್ಷಣದ ಲಾಭ
Bank Of Baroda, HDFC, Axis, Yes Bank, Kotak ಸೇರಿದಂತೆ ಅನೇಕ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ಗಳಿಂದ EMI ಮಾಡುವವರಿಗೆ ₹10,000 ವರೆಗೆ ತಕ್ಷಣದ ರಿಯಾಯಿತಿ ಲಭ್ಯ. ಜೊತೆಗೆ, ₹5,000 ಮೌಲ್ಯದ ಉಚಿತ 8 ವರ್ಷದ ಬ್ಯಾಟರಿ ವಾರಂಟಿ ಮತ್ತು ಹೆಚ್ಚುವರಿ ₹5,000 ನಗದು ರಿಯಾಯಿತಿ ಸಹ ಸೇರಿದೆ.
ಏಥರ್ ಸ್ಕೂಟರ್ಗಳ ವೈಶಿಷ್ಟ್ಯಗಳು
ಕಂಪನಿಯ ಮುಖ್ಯ 450 ಸರಣಿ 161 ಕಿಮೀ IDC ರೇಂಜ್ ಅನ್ನು ಒದಗಿಸುವುದು ವಿಶೇಷ. 450X, 450S ಮತ್ತು 450 Apex ಮಾದರಿಗಳು ಗೂಗಲ್ ಮ್ಯಾಪ್ಸ್, ಮ್ಯೂಸಿಕ್, ಕಾಲ್ ನಿಯಂತ್ರಣ, ಟ್ರಾಕ್ಷನ್ ಕಂಟ್ರೋಲ್, ಮ್ಯಾಜಿಕ್ ಟ್ವಿಸ್ಟ್ ಮುಂತಾದ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿವೆ.
ಇದೇ ವೇಳೆ, ಕುಟುಂಬ ಬಳಕೆಗೆ ಬಿಡುಗಡೆಯಾದ Rizta ಮಾದರಿ 159 ಕಿಮೀ ವರೆಗೆ ರೇಂಜ್ ನೀಡುತ್ತದೆ. 56 ಲೀಟರ್ ಸ್ಟೋರೇಜ್, ಸ್ಕಿಡ್ ಕಂಟ್ರೋಲ್, ಫಾಲ್ ಸೆಫ್, ಟೋ ಅಲರ್ಟ್, ತುರ್ತು ಸ್ಟಾಪ್ ಸಿಗ್ನಲ್ ಸೇರಿದಂತೆ ಸುರಕ್ಷತಾ ವೈಶಿಷ್ಟ್ಯಗಳು ಇದರಲ್ಲಿ ಸೇರಿವೆ.
Ather Community Day 2025 ಕಾರ್ಯಕ್ರಮದಲ್ಲಿ, ಕಂಪನಿ Rizta Z ಗೆ ಟಚ್ಸ್ಕ್ರೀನ್ ಅಪ್ಗ್ರೇಡ್ ಅನ್ನು ಒದಗಿಸುವುದಾಗಿ ಘೋಷಿಸಿದೆ, ಇದು ಬಳಕೆದಾರ ಅನುಭವವನ್ನು ಇನ್ನಷ್ಟು ಸುಧಾರಿಸುವ ನಿರೀಕ್ಷೆ ಇದೆ.



