ಬಜಾಜ್ ಫೈನಾನ್ಸ್ ನಿಂದ ಡಿಜಿಟಲ್ ಎಫ್‌ಡಿ ಸ್ಕೀಮ್ ಪ್ರಾರಂಭ! ಸಿಗುತ್ತೆ 8.85% ಬಡ್ಡಿ

Bajaj Finance Digital FD :ಪ್ರಮುಖ ಎನ್‌ಬಿಎಫ್‌ಸಿ ಕಂಪನಿ ಬಜಾಜ್ ಫೈನಾನ್ಸ್ ಡಿಜಿಟಲ್ ಸ್ಥಿರ ಠೇವಣಿ (Digital Fixed Deposit) ಪ್ರಾರಂಭಿಸಿದೆ. ಕಂಪನಿಯ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಠೇವಣಿ ಮಾಡುವವರಿಗೆ ಗರಿಷ್ಠ ಶೇಕಡಾ 8.85 ಬಡ್ಡಿದರವನ್ನು ಪಾವತಿಸಲಾಗುತ್ತದೆ. ಈ ಬಡ್ಡಿ ದರಗಳು ಜನವರಿ 2, 2024 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.
ಬಜಾಜ್ ಫಿನ್‌ಸರ್ವ್ ಅಪ್ಲಿಕೇಶನ್ ಮತ್ತು ವೆಬ್ ಮೂಲಕ 42 ತಿಂಗಳ ಎಫ್‌ಡಿ ಮಾಡುವ ಹಿರಿಯ ನಾಗರಿಕರಿಗೆ ಬಜಾಜ್ ಫೈನಾನ್ಸ್ ಶೇಕಡಾ 8.85 ರಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತಿದೆ.
ಇವು ಈ ವರ್ಷ ಬಿಡುಗಡೆಗೆ ಸಿದ್ಧವಾಗಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು!
60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಗರಿಷ್ಠ 8.60 ಶೇಕಡಾ ಬಡ್ಡಿ ಸಿಗುತ್ತದೆ. ಈ ಬಡ್ಡಿ ದರಗಳು ತಾಜಾ ಠೇವಣಿ ಮತ್ತು ರೂ.5 ಕೋಟಿವರೆಗಿನ ನವೀಕರಣಗಳಿಗೆ ಅನ್ವಯಿಸುತ್ತವೆ.
ಡಿಜಿಟಲ್ ಎಫ್‌ಡಿ ಮೂಲಕ ಹೆಚ್ಚಿನ ಬಡ್ಡಿದರದೊಂದಿಗೆ ನಿಶ್ಚಿತ ಠೇವಣಿ ಯೋಜನೆಯನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಬಜಾಜ್ ಫೈನಾನ್ಸ್‌ನ ಫಿಕ್ಸೆಡ್ ಡೆಪಾಸಿಟ್ ಮತ್ತು ಇನ್ವೆಸ್ಟ್‌ಮೆಂಟ್‌ಗಳ ಮುಖ್ಯಸ್ಥ ಸಚಿನ್ ಸಿಕ್ಕಾ ಹೇಳಿದ್ದಾರೆ. FD ಯೋಜನೆಗಳು 12-60 ತಿಂಗಳ ಅವಧಿಗಳಲ್ಲಿ ಲಭ್ಯವಿದೆ.
ಈ ಬ್ಯಾಂಕಿನ ಬಡ್ಡಿಯಲ್ಲಿ ಭಾರೀ ಏರಿಕೆ! ಫಿಕ್ಸೆಡ್ ಡೆಪಾಸಿಟ್ ಮಾಡೋರಿಗೆ ಗುಡ್ ನ್ಯೂಸ್

Bajaj Finance has introduced digital FD, offers maximum interest of 8.85 percent



