ಮಹಿಳೆಯ ಹೆಸರಿನಲ್ಲಿ ಕಾರ್ ಲೋನ್ ತೆಗೆದುಕೊಂಡರೆ ಭಾರೀ ಬೆನಿಫಿಟ್! ಡಬಲ್ ಧಮಾಕ
Car Loan: ಮಹಿಳೆಯ ಹೆಸರಿನಲ್ಲಿ ಕಾರ್ ಲೋನ್ ತೆಗೆದುಕೊಂಡರೆ ಕಡಿಮೆ ಬಡ್ಡಿದರ, ಪ್ರಾಸೆಸಿಂಗ್ ಫೀ ಮನ್ನಾ, ವಿಮೆ ರಿಯಾಯಿತಿ ಸೇರಿದಂತೆ ಹಲವು ಆಫರ್ಗಳು ಲಭ್ಯ. ಸರಿಯಾದ ದಾಖಲೆಗಳು ಇದ್ದರೆ ಅನುಮೋದನೆ ಕೂಡ ಬೇಗ ಸಿಗುತ್ತದೆ.

Car Loan: ಮಹಿಳೆಯರ ಹೆಸರಿನಲ್ಲಿ ಕಾರ್ ಲೋನ್ ತೆಗೆದುಕೊಂಡರೆ ಹಲವು ಬ್ಯಾಂಕ್ಗಳು ವಿಶೇಷ ಸೌಲಭ್ಯಗಳನ್ನು ನೀಡುತ್ತಿವೆ ಎಂಬುದು ಈಗ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ.
ಸಾಮಾನ್ಯವಾಗಿ ಕುಟುಂಬದಲ್ಲಿ ಕಾರು ಖರೀದಿ ಮಾಡುವಾಗ ಪುರುಷರ ಹೆಸರನ್ನೇ ಬಳಸುವ ಪ್ರವೃತ್ತಿ ಹೆಚ್ಚು. ಆದರೆ ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದರೆ ಅವರಿಗೆ ನೀಡಲಾಗುವ ವಿಶೇಷ ರಿಯಾಯಿತಿಗಳು ಈಗ ಹೆಚ್ಚು ಚರ್ಚೆಗೆ ಕಾರಣವಾಗಿವೆ.
ಕಾರು ಲೋನ್ ಪರಿಶೀಲನೆ ವೇಳೆ ಬ್ಯಾಂಕ್ಗಳು ಪ್ರಾಸೆಸಿಂಗ್ ಫೀ ₹1,000 ದಿಂದ ₹3,000ವರೆಗೆ ವಿಧಿಸುವುದು ಸಾಮಾನ್ಯ. ಆದರೆ ಮಹಿಳಾ ಗ್ರಾಹಕರಿಗೆ ಈ ಶುಲ್ಕವನ್ನು ಅನೇಕ ಬ್ಯಾಂಕ್ಗಳು ಸಂಪೂರ್ಣ ಮನ್ನಾ ಮಾಡುತ್ತಿವೆ. ಕೆಲವು ಸಂಸ್ಥೆಗಳು ಮೊದಲ EMI ಮೇಲೆಯೂ ರಿಯಾಯಿತಿ ನೀಡುವ ಪ್ರಸ್ತಾಪವನ್ನೂ ಇಟ್ಟುಕೊಂಡಿವೆ ಎಂದು ವಾಹನ ಡೀಲರ್ಗಳು ತಿಳಿಸಿದ್ದಾರೆ.
ಕಡಿಮೆ ಬಡ್ಡಿದರ ನೀಡುವುದು ಮಹಿಳಾ ಕಾರ್ ಲೋನ್ನ ದೊಡ್ಡ ಆಕರ್ಷಣೆ. 0.40% ರಿಂದ 1%ರವರೆಗೆ ಬಡ್ಡಿದರ ಕಡಿತವನ್ನು ಹಲವು ಬ್ಯಾಂಕ್ಗಳು ಅನ್ವಯಿಸುತ್ತಿದ್ದು, ಇದು ಪುರುಷರಿಗೆ ಇರುವ ದರಕ್ಕಿಂತ ಕಡಿಮೆ. ಉತ್ತಮ ಕ್ರೆಡಿಟ್ ಸ್ಕೋರ್ (Credit Score) ಇರುವ ಮಹಿಳೆಯರಿಗೆ ಇನ್ನೂ ಉತ್ತಮ ಆಫರ್ಗಳು ದೊರಕುವ ಸಾಧ್ಯತೆ ಇದೆ.
ಮಹಿಳೆಯ ಹೆಸರಿನಲ್ಲಿ ಕಾರ್ ಲೋನ್ ಪಡೆಯಲು 21ರಿಂದ 65 ವರ್ಷದೊಳಗಿನ ವಯಸ್ಸು ಅಗತ್ಯ. ಅದರ ಜೊತೆಗೆ ಉದ್ಯೋಗ ಅಥವಾ ವ್ಯವಹಾರದಿಂದ ಇರುವ ನಿಯಮಿತ ಆದಾಯದ ದೃಢೀಕರಣ, CIBIL ಸ್ಕೋರ್ ಸರಿಯಾಗಿರುವುದು ಮುಖ್ಯ.
ಹಿಂದಿನ ಯಾವುದೇ ಸಾಲದಲ್ಲಿ ಡಿಫಾಲ್ಟ್ ಆಗಿರಬಾರದು. ಆದಾಯ ಸಂಬಂಧಿತ ದಾಖಲೆಗಳು ಸಂಪೂರ್ಣವಾಗಿದ್ದರೆ ಲೋನ್ ಅನುಮೋದನೆ ವೇಗವಾಗಿ ನಡೆಯುತ್ತದೆ.
ವಿಮೆ ಪ್ರೀಮಿಯಂಗಳ ಮೇಲೂ ಮಹಿಳೆಯರಿಗೆ ರಿಯಾಯಿತಿ ಲಭ್ಯ. ಕೆಲವು ಕಾರ್ ಪ್ಲ್ಯಾನ್ಗಳು ಮಹಿಳಾ ಖರೀದಿದಾರರಿಗೆ ವಿಶೇಷ ಬೋನಸ್ ಪಾಯಿಂಟ್ಗಳು, ಇತರೆ ಸರ್ವಿಸ್ ಡಿಸ್ಕೌಂಟ್ಗಳನ್ನೂ ನೀಡುತ್ತವೆ. ಒಂದೇ ಬ್ಯಾಂಕ್ಗೆ ಸೀಮಿತವಾಗದೆ 2–3 ಬ್ಯಾಂಕ್ಗಳಿಂದ ಕ್ವೋಟೇಶನ್ ಪಡೆದು ಹೋಲಿಕೆ ಮಾಡಿದರೆ ಉತ್ತಮ ಆಫರ್ಗಳನ್ನು ಪಡೆಬಹುದಾಗಿದೆ.
ಒಟ್ಟಿನಲ್ಲಿ, ಉದ್ಯೋಗಿ ಮಹಿಳೆಯ ಹೆಸರಿನಲ್ಲಿ ಕಾರು ಖರೀದಿಸಿದರೆ ಕಡಿಮೆ ಬಡ್ಡಿದರ, ಶುಲ್ಕ ಮನ್ನಾ, ವಿಮೆ ರಿಯಾಯಿತಿ ಸೇರಿದಂತೆ ಬಹುಪಾಲು ಪ್ರಯೋಜನಗಳನ್ನು ಪಡೆಯಲು ಅವಕಾಶವಿದೆ.
Benefits of Taking a Car Loan in a Woman’s Name



