ಈ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಓಡಿಸೋಕೆ ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ! ಬೆಲೆ ಕೂಡ ಕಮ್ಮಿ
ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೂ ಈಗ ಸ್ಕೂಟರ್ ಸವಾರಿ ಸಾಧ್ಯ. ಕಡಿಮೆ ವೇಗದ ಈ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು ಸುಲಭವಾಗಿ ಬಳಸಬಹುದು. ಬೆಲೆ ಕೂಡ ಕೈಗೆಟುಕುವಂತಿದೆ.

Electric Scooter : ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತೈಲದ ಬೆಲೆ ಏರಿಕೆಯಿಂದ ಜನರು ಎಲೆಕ್ಟ್ರಿಕ್ ವಾಹನಗಳತ್ತ ತಿರುಗುತ್ತಿದ್ದಾರೆ. ಇದನ್ನು ಗಮನಿಸಿ ಹಲವು ಕಂಪನಿಗಳು ಕಡಿಮೆ ವೆಚ್ಚದ ಹಾಗೂ ಸುಲಭವಾಗಿ ಬಳಸಬಹುದಾದ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡುತ್ತಿವೆ.
ಸಾಮಾನ್ಯವಾಗಿ ಸ್ಕೂಟರ್ ಅಥವಾ ಬೈಕ್ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಅಗತ್ಯ. ಆದರೆ ಕೆಲವು EV ಸ್ಕೂಟರ್ಗಳು ಲೈಸೆನ್ಸ್ ಇಲ್ಲದೆ ಸಹ ಓಡಿಸಬಹುದು ಎಂಬುದು ಹಲವರಿಗೆ ಗೊತ್ತಿಲ್ಲ. 25 ಕಿ.ಮೀ/ಗಂ. ವೇಗಕ್ಕಿಂತ ಕಡಿಮೆ ವೇಗ ಹೊಂದಿರುವ ಹಾಗೂ ಕಡಿಮೆ ಮೋಟರ್ ಸಾಮರ್ಥ್ಯ ಇರುವ ಸ್ಕೂಟರ್ಗಳಿಗೆ ಯಾವುದೇ ನೋಂದಣಿ ಅಥವಾ ಲೈಸೆನ್ಸ್ ಅಗತ್ಯವಿಲ್ಲ.
ಇವು ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ಹಿರಿಯ ನಾಗರಿಕರಿಗೆ ಬಹಳ ಉಪಯುಕ್ತ. ನಗರದಲ್ಲಿನ ಕಡಿಮೆ ಪ್ರಯಾಣಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ವರ್ಗದಲ್ಲಿ ಕೆಲವು ಜನಪ್ರಿಯ ಮಾದರಿಗಳು ಇದೀಗ ಹೆಚ್ಚು ಬೇಡಿಕೆಗೆ ಬಂದಿವೆ.
ಓಲಾ ಗಿಗ್ (Ola Gig):
1 ಕಿಲೋವಾಟ್ ಬ್ಯಾಟರಿಯಿಂದ ಕಾರ್ಯನಿರ್ವಹಿಸುವ ಓಲಾ ಗಿಗ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 112 ಕಿಲೋಮೀಟರ್ಗಳಷ್ಟು ಪ್ರಯಾಣಿಸಬಹುದು. ಗರಿಷ್ಠ ವೇಗ 24 ಕಿ.ಮೀ/ಗಂ. ಆಗಿದ್ದು, ಫಾಸ್ಟ್ ಚಾರ್ಜಿಂಗ್, ಎಲ್ಇಡಿ ಲೈಟ್ ಹಾಗೂ ಡಿಜಿಟಲ್ ಡಿಸ್ಪ್ಲೇ ಸೌಲಭ್ಯಗಳಿವೆ. ಇದರ ಬೆಲೆ ಸುಮಾರು ₹35,000.
ಆಂಪಿಯರ್ ರಿಯೋ 80 (Ampere Reo 80):
ಈ EV ಸ್ಕೂಟರ್ನಲ್ಲಿ 1.44 ಕಿಲೋವಾಟ್ ಬ್ಯಾಟರಿ ಇದೆ. ಗರಿಷ್ಠ ವೇಗ 25 ಕಿ.ಮೀ/ಗಂ. ಸಿಂಗಲ್ ಚಾರ್ಜ್ನಲ್ಲಿ 50 ಕಿ.ಮೀ ರೇಂಜ್ ನೀಡುತ್ತದೆ. ಡ್ರೈವಿಂಗ್ ಲೈಸೆನ್ಸ್ ಮತ್ತು ನೋಂದಣಿ ಇಲ್ಲದೆ ಸಹ ಓಡಿಸಬಹುದಾಗಿದೆ. ಇದರ ಬೆಲೆ ₹59,900 ಸುತ್ತಮುತ್ತ ಇದೆ.
ಹೀರೋ ಎಲೆಕ್ಟ್ರಿಕ್ ಅಟ್ರಿಯಾ ಎಲ್ಎಕ್ಸ್ (Hero Electric Atria LX):
ಅಧುನಿಕ ವಿನ್ಯಾಸ ಹಾಗೂ ಕ್ರೂಸ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವಾಕ್ ಅಸಿಸ್ಟ್ ಸೇರಿದಂತೆ ಹಲವು ಸೌಲಭ್ಯಗಳು ಈ ಮಾದರಿಯಲ್ಲಿವೆ. ಗರಿಷ್ಠ ವೇಗ 25 ಕಿ.ಮೀ/ಗಂ. ಆಗಿದ್ದು, ಒಂದು ಚಾರ್ಜ್ನಲ್ಲಿ 85 ಕಿ.ಮೀ ರೇಂಜ್ ನೀಡುತ್ತದೆ. ಇದರ ಬೆಲೆ ₹77,690.
ಕೈನಟಿಕ್ ಗ್ರೀನ್ ಜಿಂಗ್ (Kinetic Green Zing):
ಆಕರ್ಷಕ ವಿನ್ಯಾಸ ಹೊಂದಿರುವ ಈ ಸ್ಕೂಟರ್ನಲ್ಲಿ 1.4 ಕಿಲೋವಾಟ್ ಬ್ಯಾಟರಿ ಇದೆ. ಒಂದು ಚಾರ್ಜ್ನಲ್ಲಿ 70 ಕಿ.ಮೀ ರೇಂಜ್ ನೀಡುತ್ತದೆ. ಸ್ಮಾರ್ಟ್ ಕ್ಲಸ್ಟರ್, ಟ್ಯೂಬ್ಲೆಸ್ ಟೈರ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್ಗಳಿವೆ. ಇದರ ಬೆಲೆ ₹67,990.
ಈ ಮಾದರಿಗಳು ಪರಿಸರ ಸ್ನೇಹಿ ಪ್ರಯಾಣದೊಂದಿಗೆ ಅಲ್ಪ ವೆಚ್ಚದಲ್ಲಿ ದಿನನಿತ್ಯದ ಸಂಚಾರಕ್ಕೆ ಪರಿಪೂರ್ಣ ಆಯ್ಕೆಯಾಗಿವೆ.
Best Electric Scooters Without License



