ಅತಿ ಹೆಚ್ಚು ಮೈಲೇಜ್ ನೀಡುವ ಈ ಬೈಕ್ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ
Best Mileage Bikes: ದಿನನಿತ್ಯ ಪ್ರಯಾಣಕ್ಕೆ ಕಡಿಮೆ ಖರ್ಚು, ಹೆಚ್ಚು ಲಾಭ ನೀಡುವ ಬೈಕ್ ಹುಡುಕುವವರಿಗೆ ಭಾರತೀಯ ಮಾರುಕಟ್ಟೆಯಲ್ಲಿ 65 ರಿಂದ 75 ಕಿಮೀ ಮೈಲೇಜ್ ನೀಡುವ ಹಲವು ಬೈಕ್ಗಳು ಈಗ ಲಭ್ಯವಿವೆ.
- ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ಗಳು ಇವು
- ಲೀಟರ್ಗೆ 65–75 ಕಿಮೀ ವರೆಗೆ ಮೈಲೇಜ್ ಪಕ್ಕ
- ಕಡಿಮೆ ಬೆಲೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚ
Best Mileage Bikes: ಇಂಧನ ಬೆಲೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ, ಹೆಚ್ಚು ಮೈಲೇಜ್ ನೀಡುವ ಬೈಕ್ಗಳ ಮೇಲಿನ ಗ್ರಾಹಕರ ಗಮನ ಹೆಚ್ಚಾಗಿದೆ. ವಿಶೇಷವಾಗಿ ದಿನನಿತ್ಯ ಕಚೇರಿ, ವ್ಯಾಪಾರ ಅಥವಾ ಗ್ರಾಮೀಣ ಪ್ರಯಾಣ ಮಾಡುವವರಿಗೆ ಇವು ದೊಡ್ಡ ಉಳಿತಾಯದ ಆಯ್ಕೆಯಾಗಿ ಪರಿಣಮಿಸಿವೆ.
ಭಾರತೀಯ ಮಾರುಕಟ್ಟೆಯಲ್ಲಿ ₹60,000 ರಿಂದ ₹70,000 ಬೆಲೆ ಮಿತಿಯಲ್ಲಿ ಉತ್ತಮ ಮೈಲೇಜ್ ನೀಡುವ ಹಲವು ಬೈಕ್ಗಳು ಲಭ್ಯವಿವೆ.
ಬಜಾಜ್ ಪ್ಲಾಟಿನಾ 100
ಮೈಲೇಜ್ ವಿಷಯದಲ್ಲಿ ಬಜಾಜ್ ಪ್ಲಾಟಿನಾ 100ನ್ನು ‘ಮೈಲೇಜ್ ಕಿಂಗ್’ ಎಂದೇ ಕರೆಯಲಾಗುತ್ತದೆ. ಲೀಟರ್ಗೆ ಸುಮಾರು 75 ಕಿಮೀ ಇಂಧನ ದಕ್ಷತೆ ನೀಡುವ ಈ ಬೈಕ್, 11 ಲೀಟರ್ ಟ್ಯಾಂಕ್ನೊಂದಿಗೆ ಸುಮಾರು 800 ಕಿಮೀ ರೇಂಜ್ ಒದಗಿಸುತ್ತದೆ. ಹಗುರವಾದ ವಿನ್ಯಾಸ ಮತ್ತು ಆರಾಮದಾಯಕ ಸೀಟ್ಗಳು ಇದರ ವಿಶೇಷತೆ.
ಟಿವಿಎಸ್ ಸ್ಪೋರ್ಟ್
ಯುವಕರಿಗೆ ಹೆಚ್ಚು ಇಷ್ಟವಾಗಿರುವ ಟಿವಿಎಸ್ ಸ್ಪೋರ್ಟ್ ಕಡಿಮೆ ಬೆಲೆಯಲ್ಲೇ ಉತ್ತಮ ಕಾರ್ಯಕ್ಷಮತೆ ನೀಡುತ್ತದೆ. ಲೀಟರ್ಗೆ ಸುಮಾರು 70 ಕಿಮೀ ಮೈಲೇಜ್ ನೀಡುವ ಈ ಬೈಕ್, ನಗರ ರಸ್ತೆಗಳಲ್ಲೂ ಸುಲಭ ಚಾಲನೆಗೆ ಅನುಕೂಲ. ಫುಲ್ ಟ್ಯಾಂಕ್ನಲ್ಲಿ ದೀರ್ಘ ದೂರ ಪ್ರಯಾಣ ಸಾಧ್ಯವಾಗುವುದು ಇದರ ಮತ್ತೊಂದು ಪ್ಲಸ್ ಪಾಯಿಂಟ್.
ಹೀರೋ ಸ್ಪ್ಲೆಂಡರ್ ಪ್ಲಸ್
ಭಾರತದಲ್ಲಿ ವರ್ಷಗಳಿಂದ ನಂಬಿಕೆಯ ಹೆಸರಾಗಿರುವ ಹೀರೋ ಸ್ಪ್ಲೆಂಡರ್ ಪ್ಲಸ್, ದಿಟ್ಟ ನಿರ್ಮಾಣ ಮತ್ತು ಕಡಿಮೆ ಮೆಂಟೆನನ್ಸ್ಗಾಗಿ ಪ್ರಸಿದ್ಧ. ಲೀಟರ್ಗೆ ಸುಮಾರು 70 ಕಿಮೀ ಮೈಲೇಜ್ ನೀಡುವ ಈ ಬೈಕ್ನಲ್ಲಿ ಇರುವ i3S ತಂತ್ರಜ್ಞಾನ ಇಂಧನ ಉಳಿತಾಯಕ್ಕೆ ಸಹಕಾರಿ.
ಹೀರೋ HF ಡಿಲಕ್ಸ್
ನಗರ ಹಾಗೂ ಗ್ರಾಮೀಣ ಪ್ರದೇಶ ಎರಡಕ್ಕೂ ಸೂಕ್ತವಾದ ಹೀರೋ HF ಡಿಲಕ್ಸ್, 97.2cc ಎಂಜಿನ್ನೊಂದಿಗೆ ಲೀಟರ್ಗೆ ಸುಮಾರು 65 ಕಿಮೀ ಮೈಲೇಜ್ ನೀಡುತ್ತದೆ. ದೀರ್ಘಕಾಲಿಕ ಬಳಕೆಗೆ ಸೂಕ್ತವಾದ ಈ ಬೈಕ್, ಬಜೆಟ್ ಗ್ರಾಹಕರಿಗೆ ಉತ್ತಮ ಆಯ್ಕೆ.
ಹೋಂಡಾ ಶೈನ್ 100
ಹೋಂಡಾ ಶೈನ್ 100, 100cc ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ಗಳಲ್ಲಿ ಒಂದು. ಲೀಟರ್ಗೆ ಸುಮಾರು 65 ಕಿಮೀ ಮೈಲೇಜ್ ನೀಡುವ ಇದು, ಗಟ್ಟಿ ಸಸ್ಪೆನ್ಷನ್ ಹಾಗೂ ನಂಬಿಕಸ್ಥ ಎಂಜಿನ್ನಿಂದ ಗ್ರಾಮೀಣ ಬಳಕೆದಾರರಲ್ಲಿ ಹೆಚ್ಚು ಜನಪ್ರಿಯವಾಗಿದೆ.



