Tax Saving Schemes: 1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳನ್ನು ನೀಡುವ ಅತ್ಯುತ್ತಮ ಪೋಸ್ಟ್ ಆಫೀಸ್ ಯೋಜನೆಗಳು
Tax Saving Schemes: ತೆರಿಗೆ ಉಳಿತಾಯ ಯೋಜನೆಗಳ ಬಗ್ಗೆ ಹುಡುಕುತ್ತಿದ್ದರೆ, ರೂ. 1.5 ಲಕ್ಷದವರೆಗೆ ತೆರಿಗೆ ಉಳಿತಾಯ ಮಾಡಬಹುದಾದ, ಜೊತೆಗೆ ಹೆಚ್ಚಿನ ಬಡ್ಡಿ ಸಿಗುವ ಈ ಪೋಸ್ಟ್ ಆಫೀಸ್ ಯೋಜನೆಗಳನ್ನು ಒಮ್ಮೆ ಪರಿಶೀಲಿಸಿ
Tax Saving Schemes: ತೆರಿಗೆ ಉಳಿತಾಯ ಯೋಜನೆಗಳ ಬಗ್ಗೆ ಹುಡುಕುತ್ತಿದ್ದರೆ, ರೂ. 1.5 ಲಕ್ಷದವರೆಗೆ ತೆರಿಗೆ ಉಳಿತಾಯ ಮಾಡಬಹುದಾದ (Saving Scheme), ಜೊತೆಗೆ ಹೆಚ್ಚಿನ ಬಡ್ಡಿ ಸಿಗುವ ಈ ಪೋಸ್ಟ್ ಆಫೀಸ್ ಯೋಜನೆಗಳನ್ನು (Post Office Saving Schemes) ಒಮ್ಮೆ ಪರಿಶೀಲಿಸಿ.
ಜನರು ಅಂಚೆ ಕಚೇರಿಗಳಲ್ಲಿ (Post Office) ಹೂಡಿಕೆ ಮಾಡಲು ಹೆಚ್ಚು ಒಲವು ತೋರುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ನಡೆಯುವ ಕಾರಣ, ಇದು ಭದ್ರತೆ ಮತ್ತು ಭರವಸೆ ಎರಡನ್ನೂ ಒದಗಿಸುತ್ತದೆ. ಜೊತೆಗೆ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿಯನ್ನು (Interest Rates) ಸಹ ಪಡೆಯಬಹುದಾಗಿದೆ.
ಅಲ್ಲದೆ ಕೆಲವು ಯೋಜನೆಗಳು ತೆರಿಗೆಯನ್ನು ಉಳಿಸುತ್ತವೆ. ಅವುಗಳಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ರೂ.1.5 ಲಕ್ಷದವರೆಗೆ ತೆರಿಗೆ ರಿಯಾಯಿತಿಯನ್ನು ಪಡೆಯಬಹುದು.
Fixed Deposits: ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿ ಬೇಕೇ? ಆಗಿದ್ದರೆ ಈ ಬ್ಯಾಂಕ್ ಅತ್ಯುತ್ತಮ ಆಯ್ಕೆ
ಅಂಚೆ ಕಚೇರಿಗಳಲ್ಲಿ ಇಂತಹ ಹಲವು ಯೋಜನೆಗಳಿವೆ. ಅವುಗಳಲ್ಲಿ ಐದು ಅತ್ಯುತ್ತಮ ಅಂಚೆ ಕಚೇರಿ ಯೋಜನೆಗಳನ್ನು ನಾವು ಪರಿಚಯಿಸುತ್ತಿದ್ದೇವೆ . ಅವುಗಳೆಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ಐದು ವರ್ಷಗಳ ಪೋಸ್ಟ್ ಆಫೀಸ್ ಠೇವಣಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸುಕನ್ಯಾ ಸಮೃದ್ಧಿ ಯೋಜನೆ (SSY) ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS). ಈಗ ಇವುಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೋಡೋಣ..
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
PPF ಜನರಿಂದ ಅತ್ಯಂತ ವಿಶ್ವಾಸಾರ್ಹ ಯೋಜನೆಯಾಗಿದೆ. ಇದರಲ್ಲಿ ಅಂಚೆ ಇಲಾಖೆ ವಾರ್ಷಿಕ ಶೇ.7.1 ಬಡ್ಡಿ ನೀಡುತ್ತದೆ. ಇದರಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿಗೆ ಅರ್ಹತೆ (Tax Saving) ಪಡೆಯುತ್ತವೆ. ಇದರಲ್ಲಿ ಹೂಡಿಕೆದಾರರು ರೂ. 1.5 ಲಕ್ಷ ತೆರಿಗೆ ಲಾಭ ಪಡೆಯಬಹುದು.
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆ (TD)
ಭಾರತೀಯ ಅಂಚೆಯ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳಲ್ಲಿ ಒಂದು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆ (ಟಿಡಿ). ಈ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬಹುದಾದರೂ, ಕಡಿಮೆ ಬ್ಯಾಂಕ್‌ಗಳಿರುವ ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಇದು ಬಹಳ ಜನಪ್ರಿಯವಾಗಿದೆ.
ಈ ಯೋಜನೆಯಡಿ ಕನಿಷ್ಠ ಮೊತ್ತ ರೂ. 1000 ಹೂಡಿಕೆ ಮಾಡಬಹುದು. ಮತ್ತು ಯಾವುದೇ ಮೇಲಿನ ಮಿತಿ ಇಲ್ಲ. ಯಾವುದೇ ಮೊತ್ತವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯನ್ನು ಆಯ್ಕೆ ಮಾಡುವ ವ್ಯಕ್ತಿಗಳು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು.
Fixed Deposits: ಈ ಬ್ಯಾಂಕ್‌ನ ಗ್ರಾಹಕರಿಗೆ ಸಿಹಿ ಸುದ್ದಿ, ಹಿರಿಯ ನಾಗರಿಕರಿಗೆ ಸಿಗಲಿದೆ ಶೇ.8.25 ಬಡ್ಡಿ!
ಸುಕನ್ಯಾ ಸಮೃದ್ಧಿ ಯೋಜನೆ (SSY)
ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಗುವಿನ ಪ್ರಯೋಜನಕ್ಕಾಗಿ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಹತ್ತು ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದು. ಆಕೆಗೆ 18 ವರ್ಷವಾದಾಗ, ಆಕೆಯು ಖಾತೆಯ ಮಾಲೀಕರಾಗುತ್ತಾರೆ. ಈ ಯೋಜನೆಯ ಪ್ರಸ್ತುತ ಬಡ್ಡಿ ದರವು ಶೇಕಡಾ 7.6 ಆಗಿದೆ. ಯೋಜನೆಗೆ ಸೇರಲು ಕನಿಷ್ಠ ರೂ. 250 ಆರಂಭಿಕ ಠೇವಣಿ ಅಗತ್ಯವಿದೆ. ಗರಿಷ್ಠ ರೂ. 1,50,000 ಠೇವಣಿ ಇಡಬಹುದು. ಇದು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಒದಗಿಸುತ್ತದೆ.
ಸೀನಿಯರ್ ಸಿಟಿಜೆನ್ ಸೇವಿಂಗ್ ಸ್ಕೀಮ್ (SCSS)
ಈ ಯೋಜನೆಯು 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಭ್ಯವಿದೆ. ಕನಿಷ್ಠ ರೂ. 1,000 ಕ್ಕೆ ಖಾತೆ ತೆರೆಯಬಹುದು. ಗರಿಷ್ಠ ರೂ. 15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಜನವರಿ ಮತ್ತು ಡಿಸೆಂಬರ್ ನಡುವೆ ಮಾಡಿದ ಠೇವಣಿಗಳ ಮೇಲೆ ವಾರ್ಷಿಕ ಶೇಕಡಾ 7.6 ಬಡ್ಡಿದರವನ್ನು ಪಾವತಿಸುತ್ತದೆ. ಹಿರಿಯ ನಾಗರಿಕರು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
Credit Card: ಕ್ರೆಡಿಟ್ ಕಾರ್ಡ್ ಮೂಲಕ ಲೋನ್ ಪಡೆಯಬಹುದೇ? ಕ್ರೆಡಿಟ್ ಕಾರ್ಡ್ ಬಳಸುವ ವಿಧಾನ ಮತ್ತು ಉಪಯೋಗಗಳು
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC)
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಭಾರತೀಯ ಅಂಚೆ ನೀಡುವ ಸ್ಥಿರ-ಆದಾಯ ಹೂಡಿಕೆ ಯೋಜನೆಯಾಗಿದೆ. ಯೋಜನೆಯು ಭಾರತ ಸರ್ಕಾರದಿಂದ ಬೆಂಬಲಿತವಾಗಿದೆ. ಮೆಚುರಿಟಿ ಅವಧಿ 5 ವರ್ಷಗಳು. ಯಾವುದೇ ಗರಿಷ್ಠ ಹೂಡಿಕೆ ಮಿತಿ ಇಲ್ಲ; 100 ಆರಂಭಿಕ ಹೂಡಿಕೆ ಮಾಡಬಹುದು. ತೆರಿಗೆದಾರರು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
Best Post Office Schemes that give Tax Saving Benefits up to Rs 1.5 lakh
Follow us On
Google News |