ಕೇವಲ ₹5,000ಕ್ಕೆ ಬ್ರ್ಯಾಂಡೆಡ್ ಟಿವಿಗಳು! ಈ ಆಫರ್ ಮಿಸ್ ಮಾಡ್ಕೋಬೇಡಿ
ಹಬ್ಬದ ಸೀಸನ್ನಲ್ಲಿ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಭಾರೀ ಆಫರ್ಗಳನ್ನು ತಂದಿದೆ. ಸ್ಮಾರ್ಟ್ ಟಿವಿಗಳು, ಬ್ರ್ಯಾಂಡೆಡ್ ಮಾದರಿಗಳು, ಕೇವಲ ₹5,000ರಿಂದಲೇ ಲಭ್ಯವಾಗುತ್ತಿದ್ದು ಗ್ರಾಹಕರಿಗೆ ಬಂಪರ್ ಅವಕಾಶ.

Smart TV : ಹಬ್ಬದ ಖರೀದಿ ಕಾಲಕ್ಕೆ ತಕ್ಕಂತೆ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ (Flipkart Big Billion Days Sale) ಭಾರೀ ಆಫರ್ಗಳು ಸಿಗುತ್ತಿವೆ. ಮೊಬೈಲ್ಗಳಿಂದ ಹಿಡಿದು ಟಿವಿಗಳವರೆಗೆ ಎಲ್ಲ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೂ ಡಿಸ್ಕೌಂಟ್ ಸಿಕ್ಕಿದ್ದು, ವಿಶೇಷವಾಗಿ ಸ್ಮಾರ್ಟ್ ಟಿವಿಗಳ ಬೆಲೆ ಆಕರ್ಷಕ ಮಟ್ಟಕ್ಕೆ ಇಳಿದಿದೆ.
ಗ್ರಾಹಕರಿಗೆ ಆಕರ್ಷಕವಾಗಿ ಕಾಣುತ್ತಿರುವ ಆಫರ್ಗಳಲ್ಲಿ ಸ್ಯಾಮ್ಸಂಗ್ 32 ಇಂಚಿನ ಟೈಝನ್ ಟಿವಿ ಪ್ರಮುಖವಾಗಿದೆ. ರೂ.22,900 ಬೆಲೆಯ ಈ ಮಾದರಿ ಸೇಲ್ನಲ್ಲಿ ಕೇವಲ ರೂ.5,999ಕ್ಕೆ ಲಭ್ಯ. ನೆಟ್ಫ್ಲಿಕ್ಸ್, ಪ್ರೈಮ್, ಹಾಟ್ಸ್ಟಾರ್ ಮುಂತಾದ ಒಟಿಟಿ ಆ್ಯಪ್ಗಳಿಗೆ ಬೆಂಬಲ ನೀಡುವ ಈ ಎಚ್ಡಿ ರೆಡಿ ಎಲ್ಇಡಿ ಟಿವಿ 60Hz ರಿಫ್ರೆಶ್ ರೇಟ್ ಹೊಂದಿದೆ.
ಇದೇ ಸೇಲ್ನಲ್ಲಿ ಒನ್ಪ್ಲಸ್ 32 ಇಂಚಿನ ಎಲ್ಇಡಿ ಟಿವಿ ಕೇವಲ ರೂ.4,999ಕ್ಕೆ ಸಿಗುತ್ತಿದೆ. ರೂ.21,999 ಮೂಲ ಬೆಲೆಯ ಈ ಮಾದರಿಯ ಡಿಸೈನ್ ಫ್ರೇಮ್ಲೆಸ್ ಆಗಿದ್ದು, ಸೌಂಡ್ ಕ್ವಾಲಿಟಿ ಉತ್ತಮವಾಗಿದೆ. ಎಲ್ಲಾ ಪ್ರಮುಖ ಒಟಿಟಿ ಆ್ಯಪ್ಗಳು ಹಾಗೂ ಯೂಟ್ಯೂಬ್ ಬೆಂಬಲವಿದೆ.
ರಿಯಲ್ಮಿ 32 ಇಂಚಿನ ಸ್ಮಾರ್ಟ್ ಟಿವಿ ಕೂಡ ಈ ಸೇಲ್ನಲ್ಲಿ ಕೇವಲ ರೂ.4,999ಕ್ಕೇ ಲಭ್ಯ. ಮೂಲ ಬೆಲೆ ರೂ.21,999 ಇದ್ದ ಈ ಮಾದರಿಯಲ್ಲಿ ನೆಟ್ಫ್ಲಿಕ್ಸ್, ಪ್ರೈಮ್ (Amazon Prime), ಹಾಟ್ಸ್ಟಾರ್ ಸೇರಿದಂತೆ ಯೂಟ್ಯೂಬ್ ಸೌಲಭ್ಯವಿದೆ.
ಇದೇ ವೇಳೆ ರಿಯಲ್ಮಿ ನಿಯೋ 32 ಇಂಚಿನ ಲಿನಕ್ಸ್ ಟಿವಿ ರೂ.4,999ಕ್ಕೇ ಸಿಗುತ್ತಿದೆ. ಆದರೆ ಈ ಮಾದರಿಯಲ್ಲಿ ಯೂಟ್ಯೂಬ್ ಹೊರತುಪಡಿಸಿ ಬೇರೆ ಒಟಿಟಿ ಆ್ಯಪ್ಗಳ ಸೌಲಭ್ಯವಿಲ್ಲ. ಆದರೂ ಕಡಿಮೆ ದರದಲ್ಲಿ ಬ್ರ್ಯಾಂಡೆಡ್ ಟಿವಿ ಖರೀದಿಸಲು ಬಯಸುವವರಿಗೆ ಇದು ಸೂಕ್ತ ಆಯ್ಕೆ.
ಹೀಗಾಗಿ ಈ ಬಾರಿ ಹಬ್ಬದ ಸೇಲ್ ಗ್ರಾಹಕರಿಗೆ ಆಕರ್ಷಕ ದರದಲ್ಲಿ ಗುಣಮಟ್ಟದ ಸ್ಮಾರ್ಟ್ ಟಿವಿ (Smart TV Offers) ಖರೀದಿಸಲು ಉತ್ತಮ ಅವಕಾಶ ಒದಗಿಸಿದೆ.
Branded Smart TV Offers in Flipkart Big Billion Days Sale



