ಕೋಳಿ ಮಾಂಸದ ಬೆಲೆ ಧಿಡೀರ್ ಏರಿಕೆ, ಒಮ್ಮೆಲೇ ಕೆಜಿಗೆ 350 ರೂಪಾಯಿಗೆ ಜಿಗಿತ! ಎಲ್ಲಿ ಗೊತ್ತಾ?

Chicken Price Hike: ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಏಕೆಂದರೆ ಆಂಧ್ರ ಮತ್ತು ತೆಲಂಗಾಣದಲ್ಲಿ ಬಾಯ್ಲರ್ ಕೋಳಿ ಬೆಲೆ ಏರಿಕೆಯಾಗಿದೆ. ಹೌದು, ತೆಲುಗು ರಾಜ್ಯಗಳಲ್ಲಿ ಕೋಳಿ ಮಾಂಸದ ಬೆಲೆ ಧಿಡೀರ್ ಏರಿಕೆಯೊಂದಿಗೆ ಶಾಕ್ ನೀಡಿದೆ.

Chicken Price Hike: ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಏಕೆಂದರೆ ಆಂಧ್ರ ಮತ್ತು ತೆಲಂಗಾಣದಲ್ಲಿ (Andhra Telangana) ಬಾಯ್ಲರ್ ಕೋಳಿ ಬೆಲೆ (Broiler chicken prices) ಏರಿಕೆಯಾಗಿದೆ. ಹೌದು, ತೆಲುಗು ರಾಜ್ಯಗಳಲ್ಲಿ ಕೋಳಿ ಮಾಂಸದ ಬೆಲೆ ಧಿಡೀರ್ ಏರಿಕೆಯೊಂದಿಗೆ ಶಾಕ್ ನೀಡಿದೆ.

ಹೌದು ಸ್ನೇಹಿತರೆ, ಮಾಂಸ ಪ್ರಿಯರಿಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಬಾರೀ ಹೊರೆ ಬಿದ್ದಿದೆ, ಬಾಯ್ಲರ್ ಕೋಳಿ ಬೆಲೆ ಏರಿಕೆಯಾಗಿದೆ. ಬೇಸಿಗೆ ಶುರುವಾದಂತೆ ಕೋಳಿ ಖರೀದಿ ಸಹ ಜೋರಾಗಿದೆ, ಆದರೆ ಈಗ ಬೆಲೆ ಏರಿಕೆಯೊಂದಿಗೆ ಗ್ರಾಹಕರು ಖರೀದಿಗೂ ಮುನ್ನ ಆಲೋಚಿಸುವ ಪರಿಸ್ಥಿತಿ ಎದುರಾಗಿದೆ.

ತಿಂಗಳ ಹಿಂದೆ ಒಂದು ಕಿಲೋ ಕೋಳಿ ಬೆಲೆ 200 ರೂ. ಇದ್ದು ಈಗ, ಕಳೆದ 15-20 ದಿನಗಳಲ್ಲಿ 300 ರೂ.ನಿಂದ 350 ರೂ.ಗೆ ಏರಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕೆಜಿ ಕೋಳಿ ಬೆಲೆ 350 ರೂ.ಗೆ ತಲುಪಿದೆ.

ಕೋಳಿ ಮಾಂಸದ ಬೆಲೆ ಧಿಡೀರ್ ಏರಿಕೆ, ಒಮ್ಮೆಲೇ ಕೆಜಿಗೆ 350 ರೂಪಾಯಿಗೆ ಜಿಗಿತ! ಎಲ್ಲಿ ಗೊತ್ತಾ? - Kannada News

ಬೇಡಿಕೆ ಹೆಚ್ಚಾದ ಕಾರಣ ಇದೆ ಬೆಲೆಯಲ್ಲಿ ಜನರು ಕೋಳಿ ಮಾಂಸ ಖರೀದಿಸುತ್ತಿದ್ದಾರೆ. ವಿಜಯವಾಡದಲ್ಲಿ ಚಿಕನ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಇನ್ನೂ ಒಂದು ತಿಂಗಳು ಈ ದರ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಕೋಳಿ ಫಾರಂ ವ್ಯವಸ್ಥಾಪಕರು.

Broiler chicken pricesವಿಜಯವಾಡ, ಅದಿಲಾಬಾದ್ ಮತ್ತು ಹೈದರಾಬಾದ್‌ನಲ್ಲಿ ಕೋಳಿಮಾಂಸದ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ವಿಜಯವಾಡದಲ್ಲಿ ಕಿಲೋ ಸ್ಕಿನ್ ಲೆಸ್ ಚಿಕನ್ ಬೆಲೆ ರೂ. 350, ಬೋನ್ ಲೆಸ್ ಚಿಕನ್ ಕಿಲೋ ಬೆಲೆ 700 ರೂ.ಗೆ ತಲುಪಿದೆ. ಕೋಳಿ ಫಾರಂನಲ್ಲಿಯೇ ಜೀವಂತ ಕೋಳಿ ಕೆಜಿಗೆ 166 ರೂ.ಗೆ ಮಾರಾಟವಾಗುತ್ತಿದೆ.

Broiler chicken prices have gone up in Andhra and Telangana

Follow us On

FaceBook Google News

Broiler chicken prices have gone up in Andhra and Telangana