ಒಂದು ರೂಪಾಯಿಗೆ ತಿಂಗಳ ರೀಚಾರ್ಜ್! ಬಿಎಸ್‌ಎನ್‌ಎಲ್ ದೀಪಾವಳಿ ಬಂಪರ್ ಸರ್ಪ್ರೈಸ್

ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ದೀಪಾವಳಿಯ ಸಂಭ್ರಮದಲ್ಲಿ ಹೊಸ ಬಂಪರ್ ಆಫರ್ ಘೋಷಿಸಿದೆ. ಕೇವಲ ಒಂದು ರೂಪಾಯಿಗೆ ತಿಂಗಳ ಮಾನ್ಯತೆಯ ಹೊಸ ಪ್ಲಾನ್ ಬಿಡುಗಡೆ ಮಾಡಿ ಗ್ರಾಹಕರಿಗೆ ಉಡುಗೊರೆ ನೀಡಿದೆ.

BSNL Recharge Offer: ಸರ್ಕಾರಿ ಟೆಲಿಕಾಂ ಸಂಸ್ಥೆ ಭಾರತ ಸಂಚಾರ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ತನ್ನ ಗ್ರಾಹಕರಿಗೆ ದೀಪಾವಳಿಯ ವಿಶೇಷ ಉಡುಗೊರೆಯಾಗಿ ಹೊಸ ಬಂಪರ್ ಆಫರ್ ಘೋಷಿಸಿದೆ. ಕೇವಲ ರೂ.1 ಕ್ಕೆ ತಿಂಗಳ ವ್ಯಾಲಿಡಿಟಿಯ ಹೊಸ ಪ್ಲಾನ್ ಅನ್ನು ಬಿಡುಗಡೆ ಮಾಡಿ ಗ್ರಾಹಕರ ಮನ ಗೆದ್ದಿದೆ.

‘ಬಿಎಸ್‌ಎನ್‌ಎಲ್ ದೀಪಾವಳಿ ಬೋನಾಂಜಾ’ ಎಂದು ಹೆಸರಿಸಲಾದ ಈ ಆಫರ್ ಅಕ್ಟೋಬರ್ 15ರಿಂದ ನವೆಂಬರ್ 15ರವರೆಗೆ ಮಾತ್ರ ಲಭ್ಯವಿರುತ್ತದೆ.

ಈ ಪ್ಲಾನ್‌ನಲ್ಲಿ ಗ್ರಾಹಕರು ಒಂದು ತಿಂಗಳ ಕಾಲ ಅನ್ಲಿಮಿಟೆಡ್ ಕಾಲ್‌ಗಳು, ಪ್ರತಿದಿನ 100 SMS ಹಾಗೂ ದಿನಕ್ಕೆ 2GB ಡೇಟಾ ಸೌಲಭ್ಯವನ್ನು ಪಡೆಯಬಹುದು.

ಹೊಸ ಬಳಕೆದಾರರಿಗೆ ಈ ಪ್ಲಾನ್ ಅನ್ವಯವಾಗುತ್ತದೆ. ಬಿಎಸ್‌ಎನ್‌ಎಲ್ ಸಿಮ್ ಪಡೆಯಲು ಹತ್ತಿರದ ಬಿಎಸ್‌ಎನ್‌ಎಲ್ ಸೇವಾ ಕೇಂದ್ರ ಅಥವಾ ಅಧಿಕೃತ ರಿಟೈಲರ್‌ನಿಂದ ಉಚಿತ ಸಿಮ್ ಪಡೆಯಬಹುದು.

ಇತ್ತ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮುಂತಾದ ಖಾಸಗಿ ಕಂಪನಿಗಳು ರೀಚಾರ್ಜ್ ದರಗಳನ್ನು ಹೆಚ್ಚಿಸುತ್ತಿರುವ ವೇಳೆ, ಬಿಎಸ್‌ಎನ್‌ಎಲ್ ಕಡಿಮೆ ಬೆಲೆಯ ಪ್ಲಾನ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನದಲ್ಲಿದೆ.

ಶೀಘ್ರದಲ್ಲೇ 5G ಸೇವೆ ಪ್ರಾರಂಭಿಸುವ ಉದ್ದೇಶವೂ ಬಿಎಸ್‌ಎನ್‌ಎಲ್‌ನದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. 5G ಪ್ರವೇಶಿಸಿದರೆ ಖಾಸಗಿ ಕಂಪನಿಗಳಿಗೆ ಬಿಎಸ್‌ಎನ್‌ಎಲ್ ನಿಂದ ಬಿಗಿಯಾದ ಸ್ಪರ್ಧೆ ಎದುರಾಗಲಿದೆ.

BSNL 1 Diwali Offer, 30 Days Validity Plan

Related Stories