ದಿನಕ್ಕೆ ಕೇವಲ 7 ರೂಪಾಯಿಗೆ 50 ದಿನಗಳ ವ್ಯಾಲಿಡಿಟಿ! ಹೊಸ ಪ್ರೀಪೇಯ್ಡ್ ಪ್ಲಾನ್ ಇದು
Recharge Plan: ಬಿಎಸ್ಎನ್ಎಲ್ ಪರಿಚಯಿಸಿರುವ ಹೊಸ ಪ್ರೀಪೇಯ್ಡ್ ಪ್ಲಾನ್ ದಿನಕ್ಕೆ ಕೇವಲ ₹7 ಖರ್ಚಿನಲ್ಲಿ 50 ದಿನಗಳ ವ್ಯಾಲಿಡಿಟಿ, ಅನಿಯಮಿತ ಕಾಲಿಂಗ್, 2GB ಡೇಟಾ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುವುದರಿಂದ ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿದೆ.

Prepaid Recharge Plan: ಭಾರತ ಸಂಚಾರ ನಿಗಮ್ ಲಿಮಿಟೆಡ್ (BSNL) ತನ್ನ 4G ಜಾಲವನ್ನು ದೇಶದಾದ್ಯಂತ ವೇಗವಾಗಿ ವಿಸ್ತರಿಸುತ್ತಿದ್ದು, ಮುಂದಿನ ದಿನಗಳಲ್ಲಿ 5G ಸೇವೆಗೂ ಸಜ್ಜಾಗುತ್ತಿದೆ.
ಸ್ವದೇಶಿ ತಂತ್ರಜ್ಞಾನದಲ್ಲಿ ರೂಪುಗೊಂಡ ಈ ಜಾಲಕ್ಕೆ ಶೀಘ್ರದಲ್ಲೇ 5G ಅಪ್ಗ್ರೇಡ್ ಸಿಗಲಿದೆ ಎನ್ನಲಾಗುತ್ತದೆ. ದಿಲ್ಲಿ ಮತ್ತು ಮುಂಬೈಗಳಲ್ಲಿ ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ 5G ಸೇವೆ ಆರಂಭಿಸಿ ನಂತರ ದೇಶದ ಇತರ ನಗರಗಳಿಗೆ ವಿಸ್ತರಿಸುವ ಯೋಜನೆ ಕಂಪನಿಯದು.
ಈ ನಡುವೆ, ಗ್ರಾಹಕರ ಗಮನ ಸೆಳೆದಿರುವ ಹೊಸ ಪ್ರೀಪೇಯ್ಡ್ ಪ್ಲಾನ್ ಬಗ್ಗೆ ಬಿಎಸ್ಎನ್ಎಲ್ ತನ್ನ ಅಧಿಕೃತ X ಹ್ಯಾಂಡಲ್ನಲ್ಲಿ ವಿವರ ಹಂಚಿಕೊಂಡಿದೆ.
ಇದನ್ನೂ ಓದಿ: ಹೊಸ ಕಾರ್ ಖರೀದಿ ಮಾಡ್ತಾ ಇದ್ದೀರಾ? ಈ ಬ್ಯಾಂಕ್ಗಳಲ್ಲಿ ಕಮ್ಮಿ ಬಡ್ಡಿಗೆ ಲೋನ್ ಸಿಗುತ್ತೆ ನೋಡಿ
ಪ್ರತಿ ದಿನಕ್ಕೆ ಕೇವಲ ₹7 ರೂಪಾಯಿ ಖರ್ಚಿನಲ್ಲಿ 50 ದಿನಗಳ ವ್ಯಾಲಿಡಿಟಿ ದೊರೆಯುವ ಈ ಪ್ಲಾನ್ ಈಗ ಖಾಸಗಿ ಟೆಲಿಕಾಂಗಳಿಗೆ ಬಲವಾದ ಸ್ಪರ್ಧೆಯಾಗಿದೆ. ಪ್ರಸ್ತುತ ಯಾವುದೇ ಖಾಸಗಿ ಸಂಸ್ಥೆ 50 ದಿನಗಳ ವ್ಯಾಲಿಡಿಟಿ ನೀಡುತ್ತಿಲ್ಲ ಎಂಬುದು ಕಂಪನಿಯ ಹೇಳಿಕೆ.
ಈ ಪ್ಲಾನ್ನಲ್ಲಿ ದೇಶವ್ಯಾಪ್ತಿಯ ಅನಿಯಮಿತ ಕಾಲಿಂಗ್, ಉಚಿತ ನ್ಯಾಷನಲ್ ರೋಮಿಂಗ್ ಸೌಲಭ್ಯಗಳನ್ನು ನೀಡಲಾಗುತ್ತದೆ. ದಿನಕ್ಕೆ 2GB ಹೈ-ಸ್ಪೀಡ್ ಡೇಟಾ ಜೊತೆಗೆ 100 ಉಚಿತ SMSಗಳೂ ಒಳಗೊಂಡಿವೆ.
ಇಷ್ಟೇ ಅಲ್ಲ, BSNL ತನ್ನ BiTV ಪ್ಲಾಟ್ಫಾರ್ಮ್ಗೆ ಈ ಪ್ಲಾನ್ ಮೂಲಕ ಉಚಿತ ಪ್ರವೇಶ ಒದಗಿಸುತ್ತಿದ್ದು, 350 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು ಮತ್ತು ಹಲವು OTT ಅಪ್ಲಿಕೇಶನ್ಗಳನ್ನು ನೋಡುವ ಅವಕಾಶ ನೀಡುತ್ತದೆ.
ಇದನ್ನೂ ಓದಿ: ಪ್ರತಿ ತಿಂಗಳು 5 ಸಾವಿರ ಪಡೆಯಿರಿ, ಪೋಸ್ಟ್ ಆಫೀಸ್ನಲ್ಲಿ ಬಂಪರ್ ಸ್ಕೀಮ್ ಬಿಡುಗಡೆ!
ಖಾಸಗಿ ಕಂಪನಿಗಳ 56 ದಿನಗಳ ಪ್ಲಾನ್ಗಳಿಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚುವರಿ ಲಾಭ ನೀಡುತ್ತಿರುವುದರಿಂದ, ಈ ಹೊಸ ಪ್ಯಾಕ್ ಬಳಕೆದಾರರ ನಡುವೆ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಇತ್ತೀಚಿನ ಡಿಜಿಟಲ್ ಬಳಕೆಗೆ ತಕ್ಕಂತೆ BSNL ತನ್ನ ಸೇವೆಗಳನ್ನು ನಿರಂತರವಾಗಿ ಸುಧಾರಿಸುತ್ತಿರುವುದನ್ನು ಈ ಪ್ಲಾನ್ ಮತ್ತೊಮ್ಮೆ ತೋರಿಸಿದೆ.
BSNL 7 Per Day Plan with 50-Day Validity



