Electric Car: ಕೇವಲ 6,500 ರೂಪಾಯಿಯಲ್ಲಿ ವರ್ಷವಿಡೀ ಸುತ್ತಾಡಬಹುದಾದ ಎಲೆಕ್ಟ್ರಿಕ್ ಕಾರು ಇದು! ಕಡಿಮೆ ವೆಚ್ಚ ಅತ್ತ್ಯುತ್ತಮ ವೈಶಿಷ್ಟ್ಯಗಳು
Electric Car: ನೀವು ಹೊಸ ಕಾರನ್ನು ಖರೀದಿಸಲು ಆಲೋಚಿಸುತ್ತಿದ್ದರೆ, ಎಲೆಕ್ಟ್ರಿಕ್ ಕಾರನ್ನು ಖರೀದಿಸುವುದರಿಂದ ಕಡಿಮೆ ಚಾಲನೆಯ ವೆಚ್ಚವಾಗುತ್ತದೆ. ಇದರಿಂದ ಜೇಬಿಗೆ ಸಹ ಹೊರೆಯಾಗುವುದಿಲ್ಲ
Electric Car: ನೀವು ಹೊಸ ಕಾರನ್ನು ಖರೀದಿಸಲು ಆಲೋಚಿಸುತ್ತಿದ್ದರೆ, ಎಲೆಕ್ಟ್ರಿಕ್ ಕಾರನ್ನು (Buy Electric Car) ಖರೀದಿಸುವುದರಿಂದ ಕಡಿಮೆ ಚಾಲನೆಯ ವೆಚ್ಚವಾಗುತ್ತದೆ. ಇದರಿಂದ ಜೇಬಿಗೆ ಸಹ ಹೊರೆಯಾಗುವುದಿಲ್ಲ.
ನೀವು ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಆದರೆ ಯಾವ ಕಾರನ್ನು ಖರೀದಿಸಬೇಕೆಂದು ಗೊತ್ತಾಗುತ್ತಿಲ್ಲವೇ? ಪೆಟ್ರೋಲ್ ಕಾರು (Petrol Car) ಖರೀದಿಸುವುದು ಉತ್ತಮವೇ? ಅಥವಾ ಎಲೆಕ್ಟ್ರಿಕ್ ಕಾರು (EV Cars) ಖರೀದಿಸುವುದು ಉತ್ತಮವೇ? ಯಾವುದಕ್ಕೆ ಕಡಿಮೆ ಇಂಧನ ವೆಚ್ಚವಾಗುತ್ತದೆ? ಎಂಬೆಲ್ಲಾ ಅಂಶಗಳು ನಿಮ್ಮನ್ನು ಕಾಡುತ್ತಿದ್ದರೆ, ನಿಮ್ಮ ಸಂದೇಹಕ್ಕೆ ಉತ್ತರಕ್ಕಾಗಿ ಈ ಪುಟ ಪೂರ್ಣವಾಗಿ ಓದಿ.
ಟಾಟಾ ಮೋಟಾರ್ಸ್ (TATA Motors) ಕಂಪನಿಯು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ನೀಡುತ್ತಿದೆ. ಟಾಟಾ ನೆಕ್ಸಾನ್ (TATA Nexon) ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ನೆಕ್ಸಾನ್ ಬೆಲೆ ರೂ. 7.8 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ಪೆಟ್ರೋಲ್ ರೂಪಾಂತರದ ಬೆಲೆ.
ಅದೇ ಎಲೆಕ್ಟ್ರಿಕ್ ಆವೃತ್ತಿಯ ಟಾಟಾ ನೆಕ್ಸಾನ್ ಕಾರನ್ನು (TATA Nexon EV) ಖರೀದಿಸಲು ರೂ. 14.5 ಲಕ್ಷ ಪಾವತಿಸಬೇಕು. ಇದರರ್ಥ ಕಾರು ಹೆಚ್ಚು ದುಬಾರಿಯಾಗಿದೆ. ನೀವು ಹೆಚ್ಚಿನ ದರದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಬಹುದೇ? ಎಂಬುದರ ಬಗ್ಗೆ ತಿಳಿಯೋಣ.
ಪೆಟ್ರೋಲ್ ಕಾರನ್ನು ನೋಡಿದರೆ… ಲೀಟರ್ ಗೆ 18 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಪ್ರತಿ ಲೀಟರ್ ಬೆಲೆ ರೂ. 110 ನಲ್ಲಿದೆ. ದಿನಕ್ಕೆ 20 ಕಿಲೋಮೀಟರ್ ಪ್ರಯಾಣ ಮಾಡಿದರೆ.. ವರ್ಷದಲ್ಲಿ 7500 ಕಿಲೋಮೀಟರ್ ಪ್ರಯಾಣಿಸಬಹುದು. ಅಂದರೆ ಸುಮಾರು ರೂ. 46 ಸಾವಿರ ಪೆಟ್ರೋಲ್ ವೆಚ್ಚವಾಗಲಿದೆ.
Electric Bike: ಈ ಎಲೆಕ್ಟ್ರಿಕ್ ಬೈಕ್ ಮೇಲೆ ಯುವಕರಿಗೆ ಫುಲ್ ಕ್ರೇಜ್, ಯಾಕಿಷ್ಟು ಬೇಡಿಕೆ? ಏನಿದರ ವಿಶೇಷ ಗೊತ್ತಾ?
ಅದೇ ಎಲೆಕ್ಟ್ರಿಕ್ ಕಾರಿನ ವಿಷಯಕ್ಕೆ ಬಂದರೆ.. ದಿನಕ್ಕೆ 20 ಕಿಲೋಮೀಟರ್ ಪ್ರಯಾಣ ಎಂದುಕೊಂಡರೆ.. ಒಂದು ವರ್ಷದಲ್ಲಿ ಸುಮಾರು 7500 ಕಿಲೋಮೀಟರ್ ಪ್ರಯಾಣಿಸುತ್ತೇವೆ. ಒಂದು ಬ್ಯಾಟರಿ ಪೂರ್ಣ ಚಾರ್ಜ್ ಮಾಡಲು ರೂ. 240 ಖರ್ಚು ಮಾಡಲಾಗುವುದು. ಇಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ 8 ಎಂದು ತೆಗೆದುಕೊಂಡರೂ ಎಲೆಕ್ಟ್ರಿಕ್ ಕಾರು ಒಂದೇ ಚಾರ್ಜ್‌ನಲ್ಲಿ 300 ಕಿಲೋಮೀಟರ್‌ಗಳಿಗಿಂತ ಹೆಚ್ಚು ಚಲಿಸುತ್ತದೆ.
ಪ್ರತಿ ಕಿಲೋಮೀಟರ್‌ಗೆ ಸುಮಾರು 90 ಪೈಸೆ ವೆಚ್ಚವಾಗುತ್ತದೆ. ಹೀಗಾಗಿ ನಿಮಗೆ ಚಾರ್ಜಿಂಗ್ ವೆಚ್ಚ ರೂ. 6500 ವರೆಗೆ ಬರಬಹುದು. ಅಂದರೆ ತುಂಬಾ ಕಡಿಮೆ ಎಂದು ಹೇಳಬಹುದು.
ಪೆಟ್ರೋಲ್ ಚಾಲನೆಯ ವೆಚ್ಚಕ್ಕೆ ಹೋಲಿಸಿದರೆ, ಎಲೆಕ್ಟ್ರಿಕ್ ಕಾರಿನ ಚಾಲನೆಯ ವೆಚ್ಚವು ತುಂಬಾ ಕಡಿಮೆಯಾಗಿದೆ. ಅಂದರೆ ಪೆಟ್ರೋಲ್ ಕಾರುಗಿಂತ ಎಲೆಕ್ಟ್ರಿಕ್ ಕಾರು ಉತ್ತಮ. ಆದರೆ ಇಲ್ಲಿ ಎಲೆಕ್ಟ್ರಿಕ್ ಕಾರ್ ದರ ಹೆಚ್ಚು.
ಈ ವಿಷಯಕ್ಕೆ ಬರುವುದಾದರೆ.. ಎಲೆಕ್ಟ್ರಿಕ್ ಕಾರನ್ನು ಖರೀದಿಸುವುದರಿಂದ ಕಡಿಮೆ ಚಾಲನೆಯ ವೆಚ್ಚದಿಂದಾಗಿ ದೀರ್ಘಾವಧಿಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಕಾರಿನ ಬೆಲೆಯನ್ನು ಸರಿದೂಗಿಸಬಹುದು. ಆದ್ದರಿಂದ, ಕಡಿಮೆ ವೆಚ್ಚವನ್ನು ಬಯಸುವವರು ಎಲೆಕ್ಟ್ರಿಕ್ ಕಾರಿನತ್ತ ಮುಖ ಮಾಡಬಹುದು.
buying an TATA Nexon electric car can get high benefits, Go 300 kilometers on a single charge