ನಿಮ್ಮ ಸಂಬಳಕ್ಕೆ HDFC ಬ್ಯಾಂಕ್ ನಲ್ಲಿ ಹೋಂ ಲೋನ್ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್

ಸಾಮಾನ್ಯವಾಗಿ ಕಡಿಮೆ ಬಡ್ಡಿ ದರದಲ್ಲಿ ಹೋಂ ಲೋನ್ (Home Loan) ಬೇಕು ಅಂತ ಅಂದ್ರೆ ಸಿಬಿಲ್ ಸ್ಕೋರ್ (Credit Score) 800 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.

- - - - - - - - - - - - - Story - - - - - - - - - - - - -
  • HDFC ಬ್ಯಾಂಕ್ ನಲ್ಲಿ ಹೋಂ ಲೋನ್ ತಗೋಳ್ಳೋದಾದ್ರೆ ಇಎಂಐ ಎಷ್ಟು?
  • 90,000 ತಿಂಗಳ ಸಂಬಳ ಇರೋರಿಗೆ ಹೋಂ ಲೋನ್ ಮಾಹಿತಿ ಇಲ್ಲಿದೆ ನೋಡಿ.
  • ಹೋಂ ಲೋನ್ ಮೇಲೆ ಬಡ್ಡಿ ಎಷ್ಟಿರುತ್ತೆ?

Home Loan : ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆಗಿರುವಂತಹ ಸ್ವಂತ ಮನೆಯನ್ನು (Own House) ಕಟ್ಟಿಸಿಕೊಳ್ಳುವಂತಹ ಆಸೆ ಇರುತ್ತೆ. ಆದರೆ ಹೋಂ ಲೋನ್ ಪಡೆದುಕೊಳ್ಳಬೇಕು ಅಂತಂದ್ರೆ ಸಿಬಿಲ್ ಸ್ಕೋರ್ ಹಾಗೂ ಸಾಕಷ್ಟು ವಿಚಾರಗಳು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಅದರಲ್ಲೂ ಸ್ಪೆಷಲ್ ಆಗಿ ಕಡಿಮೆ ಬಡ್ಡಿಯಲ್ಲಿ ಹೋಂ ಲೋನ್ ಬೇಕು ಅಂತ ಅಂದ್ರೆ ಅಷ್ಟೊಂದು ಸುಲಭ ಆಗಿರುವುದಿಲ್ಲ. ಸಾಮಾನ್ಯವಾಗಿ ಕಡಿಮೆ ಬಡ್ಡಿ ದರದಲ್ಲಿ ಹೋಂ ಲೋನ್ (Home Loan) ಬೇಕು ಅಂತ ಅಂದ್ರೆ ಸಿಬಿಲ್ ಸ್ಕೋರ್ (Credit Score) 800 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.

ಸಾಲವನ್ನು ಮರುಪಾವತಿ ಮಾಡುವಂತಹ ಅವಧಿ ಕೂಡ ಈ ಸಂದರ್ಭದಲ್ಲಿ ಕಡಿಮೆಯಾಗುತ್ತೆ. ಇವತ್ತಿನ ಈ ಲೇಖನದ ಮೂಲಕ ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಹೋಂ ಲೋನ್ ಪಡೆದುಕೊಳ್ಳುವ ವಿಧಾನವನ್ನ ಸಂಪೂರ್ಣವಾಗಿ ಅರ್ಥೈಸಿಕೊಳ್ಳೋಣ ಬನ್ನಿ.

ನಿಮ್ಮ ಸಂಬಳಕ್ಕೆ HDFC ಬ್ಯಾಂಕ್ ನಲ್ಲಿ ಹೋಂ ಲೋನ್ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್

ಎಚ್ ಡಿ ಎಫ್ ಸಿ ಬ್ಯಾಂಕ್ ನಿಂದ ಕಡಿಮೆ ಬಡ್ಡಿದರಕ್ಕೆ ಹೋಂ ಲೋನ್ ಪಡೆದುಕೊಳ್ಳುವ ವಿಧಾನ

ಸಮಯ ಕಡಿಮೆ ಇದ್ದಷ್ಟು ಕಡಿಮೆ ಬಡ್ಡಿಯನ್ನ ಹೋಂ ಲೋನ್ ನಲ್ಲಿ ನೀಡಬೇಕಾಗುತ್ತದೆ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಂಡು ಲೋನ್ ತೆಗೆದುಕೊಳ್ಳುವುದು ಉತ್ತಮ. ಹೆಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ ಗರಿಷ್ಠ 30 ವರ್ಷಗಳವರೆಗೆ ಹೋಂ ಲೋನ್ ಮರುಪಾವತಿ ಮಾಡೋದಕ್ಕೆ ಸಮಯಾವಾಕಾಶ ನೀಡಲಾಗುತ್ತದೆ.

ಈ ಲೇಖನದ ಮೂಲಕ ತಿಂಗಳಿಗೆ ಸರಿ ಸುಮಾರು 90 ಸಾವಿರ ರೂಪಾಯಿ ಸಂಬಳವನ್ನು ಪಡೆಯುವಂತಹ ವ್ಯಕ್ತಿಗೆ ಯಾವ ರೀತಿಯಲ್ಲಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಲೋನ್ (Bank Loan) ಕೊಡುತ್ತೆ ಎನ್ನುವುದನ್ನ ಉದಾಹರಣೆಯ ಮೂಲಕ ತಿಳಿಯೋಣ.

ಯಾವುದೇ ಸಾಲವನ್ನ ಪಾವತಿ ಮಾಡುವಂತಹ ಜವಾಬ್ದಾರಿ ನಿಮ್ಮ ಮೇಲೆ ಇಲ್ಲದಿದ್ದರೆ ಹಾಗೂ ಉತ್ತಮ ಸಿಬಿಲ್ ಸ್ಕೋರ್ ಇದ್ರೆ ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ನಿಮಗೆ 8.75% ಬಡ್ಡಿದರದಿಂದ ಹೋಂ ಲೋನ್ ಪ್ರಾರಂಭವಾಗುತ್ತೆ.

ತಿಂಗಳಿಗೆ 90 ಸಾವಿರ ರೂಪಾಯಿ ಸಂಬಳದ ಪ್ರಕಾರ 20 ವರ್ಷಗಳ ವರೆಗೆ 8.75% ಬಡ್ಡಿ ದರದ ಲೆಕ್ಕಾಚಾರದಲ್ಲಿ 50,92,164 ರೂಪಾಯಿಗಳ ಹೋಂ ಲೋನ್ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು ಇದಕ್ಕೆ ಇಎಂಐ ಎಷ್ಟು ಹಾಗೂ ಕಟ್ಟಬೇಕಾಗಿರೋ ಬಡ್ಡಿಯೆಷ್ಟು ಅನ್ನೋದನ್ನ ತಿಳಿಯೋಣ.

50,92,164 ರೂಪಾಯಿ ಸಾಲವನ್ನು ನೀವು 8.75% ಬಡ್ಡಿ ದರದ ಲೆಕ್ಕಾಚಾರದಲ್ಲಿ ಪಡೆದುಕೊಂಡಿದ್ದೀರಿ ಎಂದಾದಲ್ಲಿ ನೀವು ಪ್ರತಿ ತಿಂಗಳಿಗೆ 45000 ರೂಪಾಯಿ EMI ಕಟ್ಟಬೇಕಾಗುತ್ತೆ. ಅಂದರೆ 20 ವರ್ಷಗಳ ಅವಧಿಗೆ ನೀವು ಕೇವಲ ಬಡ್ಡಿ ರೂಪದಲ್ಲಿ 57,07,836 ರೂಪಾಯಿಗಳನ್ನು ಕಟ್ಟಬೇಕಾಗುತ್ತೆ.

ತೆಗೆದುಕೊಂಡಿರುವ 50,92,164 ರೂಪಾಯಿ ಹೋಂ ಲೋನ್ ಗೆ ಬಡ್ಡಿ ಸೇರಿಸಿ ಒಟ್ಟಾರೆ 1,08,00,000 ರೂಪಾಯಿಗಳನ್ನು ನೀವು ಕಟ್ಟಬೇಕು. ಪಡೆದುಕೊಂಡಿರುವ ಹೋಂ ಲೋನ್ ಮೇಲೆ ದುಪ್ಪಟ್ಟು ಹಣವನ್ನ ಮರುಪಾವತಿಯ ಸಂದರ್ಭದಲ್ಲಿ ನೀವು ಕಟ್ಟಬೇಕಾಗುತ್ತದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

Can You Get a Home Loan from HDFC Bank Based on Your Salary

Related Stories