ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ
ಕೆನರಾ ಬ್ಯಾಂಕ್ (Canara Bank) ತನ್ನ ಕ್ರೆಡಿಟ್ ಆಫೀಸರ್ (Junior Management Grade Scale I) ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Canara Bank Recruitment : ಬ್ಯಾಂಕಿಂಗ್ ವಲಯದಲ್ಲಿ (banking sector) ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಯುವಕರಿಗೆ ಇದು ಮಹತ್ವದ ಅವಕಾಶ. ಕೆನರಾ ಬ್ಯಾಂಕ್ (Canara Bank) ತನ್ನ ಕ್ರೆಡಿಟ್ ಆಫೀಸರ್ (Junior Management Grade Scale I) ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ (university) ಪದವಿ ಪೂರ್ಣಗೊಳಿಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 60% ಅಂಕಗಳನ್ನು ಹೊಂದಿರಬೇಕು. ಆದರೆ, SC/ST/OBC/PWBD ವರ್ಗದವರಿಗೆ 5% ರಿಯಾಯಿತಿ ನೀಡಲಾಗಿದೆ.
ಮಾರುಕಟ್ಟೆಗೆ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ! ಬೆಲೆ ಎಷ್ಟು ಗೊತ್ತಾ?
ಅರ್ಜಿ ಶುಲ್ಕ (application fee) ಬಗ್ಗೆ ಹೇಳುವುದಾದರೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 750 ರೂ. ಶುಲ್ಕದ ಇದೆ, ಆದರೆ SC/ST/PWBD ಅಭ್ಯರ್ಥಿಗಳಿಗೆ 150 ರೂ. ಶುಲ್ಕವನ್ನು ವಿಧಿಸಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬಹುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ (application process) ನಲ್ಲಿ, ಮೊದಲಿಗೆ IBPS (Institute of Banking Personnel Selection) ಅಧಿಕೃತ ವೆಬ್‌ಸೈಟ್‌ಗೆ (official website) ಹೋಗಿ, ನಂತರ “ಹೊಸ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ” ಆಯ್ಕೆ ಮಾಡಬೇಕು. ನಂತರ, ಅರ್ಜಿ ನಮೂನೆಯನ್ನು ತುಂಬಿ, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ, ಫೀ ಪಾವತಿಸಿ.
ಈ ಅರ್ಜಿ ಪ್ರಕ್ರಿಯೆ 30 ಜನವರಿಯಿಂದ ಪ್ರಾರಂಭವಾಗಿದೆ, ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20 ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Canara Bank Recruitment, Apply for Credit Officer Posts