Business News

ಲೋನ್ ಮೇಲೆ 10 ಲಕ್ಷದ ಕಾರ್ ತಗೊಂಡ್ರೆ ಬಡ್ಡಿ, EMI ಎಷ್ಟಾಗುತ್ತೆ? ಇಲ್ಲಿದೆ ಲೆಕ್ಕಾಚಾರ

ನಿಮ್ಮ ಹೊಸ ಕಾರಿಗೆ ಸಾಲ (car loan) ಬೇಕಾ? ಯಾವ ಬ್ಯಾಂಕ್ ನಲ್ಲಿ ಎಷ್ಟು EMI ಗೊತ್ತಾ? ಯಾವ ಬ್ಯಾಂಕ್ ಕಡಿಮೆ ಬಡ್ಡಿದರದಲ್ಲಿ ನೀಡುತ್ತೆ? ಇಲ್ಲಿದೆ ಪಟ್ಟಿ!

Publisher: Kannada News Today (Digital Media)

  • ಕಾರು ಖರೀದಿಗೆ 7 ವರ್ಷ ಗಡಿವರೆಗೆ ಸಾಲ ಲಭ್ಯ
  • ಕೆಲವು ಬ್ಯಾಂಕ್‌ಗಳು 100% ಹಣವನ್ನೂ ಲೋನ್ ಆಗಿ ನೀಡುತ್ತವೆ
  • ಕಡಿಮೆ EMI ಬೇಕಾದ್ರೆ ಈ ಪಟ್ಟಿಯಲ್ಲೇ ಉತ್ತರ ಇದೆ

Car Loan: ನಾವು ಕಾರು ಕೊಳ್ಳೋ ಕನಸು ತುಂಬ ಸಾಮಾನ್ಯ. ಕೆಲವರಿಗೆ ಅದು Prestige ವಿಷಯ, ಕೆಲವರಿಗೆ ನಿತ್ಯದ ಅವಶ್ಯಕತೆ. ಈಗ ಎಲ್ಲಾ ಆದಾಯದವರು ತಮ್ಮ ಬಜೆಟ್‌ಗೆ ತಕ್ಕಂತೆ ಕಾರು ಖರೀದಿ ಮಾಡಬಹುದು, ಕಾರಣ ಬಹುತೇಕ ಎಲ್ಲಾ ಪ್ರಮುಖ ಬ್ಯಾಂಕುಗಳು ಕಾರು ಸಾಲ (car loan) ನೀಡುತ್ತಿವೆ.

ಸಾಮಾನ್ಯವಾಗಿ ಉತ್ತಮ ಕ್ರೆಡಿಟ್ ಸ್ಕೋರ್ (credit score) ಹೊಂದಿರುವವರಿಗೆ ಕಡಿಮೆ ಬಡ್ಡಿದರದ (interest rate) ಲೋನ್ ಸಿಗುತ್ತದೆ. ಬಹುಶಃ, 750 ಕ್ಕಿಂತ ಹೆಚ್ಚಿದ್ರೆ ನೀವು ಲಾಭದಲ್ಲಿ ಲೋನ್ ಪಡೆಯಬಹುದು.

ಇದನ್ನೂ ಓದಿ: ಬಜಾಜ್‌ ಫ್ರೀಡಮ್ 125 ಬೈಕ್ ಡಿಸ್ಕೌಂಟ್ ಬೆಲೆಗೆ ಮಾರಾಟ! ಖರೀದಿಗೆ ಮುಗಿಬಿದ್ದ ಜನ

ಹೆಚ್ಚಿನ ಬ್ಯಾಂಕುಗಳು 80%ರಿಂದ 90% ವರೆಗೂ ಆನ್-ರೋಡ್ ಬೆಲೆ ಆಧಾರದ ಮೇಲೆ ಲೋನ್ ನೀಡುತ್ತವೆ. ಕೆಲವೊಂದು ಬ್ಯಾಂಕ್‌ಗಳು 100% ವರೆಗೂ ಫೈನಾನ್ಸ್ (finance) ಕೂಡ ಮಾಡಬಹುದು.

ಇದಕ್ಕಿಂತ ಹೆಚ್ಚಾಗಿ, ಪ್ರಾಸೆಸಿಂಗ್ ಫೀಸ್ (processing fee), ಪೂರ್ವಪಾವತಿ ಶುಲ್ಕ, ಇನ್ಶೂರೆನ್ಸ್ ಸೇರಿ ಹಲವು ಅಂಶಗಳನ್ನೂ ಗಮನದಲ್ಲಿಡಬೇಕು. ಎಲ್ಲವನ್ನೂ ಗಮನಿಸಿ ಲೋನ್ ಆಯ್ಕೆ ಮಾಡಿದ್ರೆ ದೀರ್ಘಕಾಲದ ಹೊರೆಯಿಲ್ಲದೆ ಸುಲಭವಾಗಿ EMI ಪಾವತಿಸಬಹುದು.

ಇದನ್ನೂ ಓದಿ: 10 ಗ್ರಾಂ ಚಿನ್ನ ಬ್ಯಾಂಕ್‌ನಲ್ಲಿ ಅಡವಿಟ್ಟರೆ ಎಷ್ಟು ಲೋನ್ ಸಿಗುತ್ತೆ? ಇಲ್ಲಿದೆ ಪಕ್ಕಾ ಲೆಕ್ಕ

ಪ್ರಸ್ತುತ, ವಿವಿಧ ಆದಾಯ ಗುಂಪುಗಳಿಗೆ ಮಾರುಕಟ್ಟೆಯಲ್ಲಿ ಅನೇಕ ಮಾದರಿಯ ಕಾರುಗಳು ಲಭ್ಯವಿದೆ. ಬಹುತೇಕ ಎಲ್ಲಾ ಬ್ಯಾಂಕುಗಳು ಕಾರು ಸಾಲಗಳನ್ನು ವ್ಯಾಪಕವಾಗಿ ಒದಗಿಸುವುದರಿಂದ ಕಾರು ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ.

Car Loan Interest Rates, Which Bank Offers the Best Deal in India

Car Loan

ಪ್ರಮುಖ ಬ್ಯಾಂಕುಗಳ ಕಾರು ಲೋನ್ ಬಡ್ಡಿದರಗಳು

ಬ್ಯಾಂಕ್ ಹೆಸರುಬಡ್ಡಿದರ (ಪ್ರತಿ ವರ್ಷ)EMI (₹1 ಲಕ್ಷಕ್ಕೆ / 7 ವರ್ಷ)
ಕೋಟಕ್ ಮಹೀಂದ್ರಾ ಬ್ಯಾಂಕ್7.70%₹1,544
ಬ್ಯಾಂಕ್ ಆಫ್ ಮಹಾರಾಷ್ಟ್ರಾ8.20%₹1,569
ಕನರಾ ಬ್ಯಾಂಕ್8.45%₹1,581
ಯೂನಿಯನ್ ಬ್ಯಾಂಕ್8.45%₹1,581
ಪಂಜಾಬ್ ನ್ಯಾಷನಲ್ ಬ್ಯಾಂಕ್8.50%₹1,584
ಪಂಜಾಬ್ & ಸಿಂಧ್ ಬ್ಯಾಂಕ್8.50%₹1,584
ಇಂಡಿಯನ್ ಓವರ್ಸೀಸ್ ಬ್ಯಾಂಕ್8.60%₹1,589
ಸೌತ್ ಇಂಡಿಯನ್ ಬ್ಯಾಂಕ್8.75%₹1,596
ಬ್ಯಾಂಕ್ ಆಫ್ ಇಂಡಿಯಾ8.75%₹1,596
ಕರ್ನಾಟಕ ಬ್ಯಾಂಕ್8.88%₹1,603
ಫೆಡರಲ್ ಬ್ಯಾಂಕ್9.00%₹1,609
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ9.10%₹1,614
ಬ್ಯಾಂಕ್ ಆಫ್ ಬರೋಡ9.15%₹1,617
ಕರೂರ್ ವೈಶ್ಯಾ ಬ್ಯಾಂಕ್9.35%₹1,627
ಆಕ್ಸಿಸ್ ಬ್ಯಾಂಕ್9.40%₹1,629
HDFC ಬ್ಯಾಂಕ್9.40%₹1,629
ಧನಲಕ್ಷ್ಮಿ ಬ್ಯಾಂಕ್9.75%₹1,647
ಸಿಟಿ ಯೂನಿಯನ್ ಬ್ಯಾಂಕ್12.25%₹1,779
ಬಜಾಜ್ ಫಿನ್‌ಸರ್ವ್14.00%₹1,874
English Summary

Our Whatsapp Channel is Live Now 👇

Whatsapp Channel

Related Stories