ಕೇವಲ 1429 ರೂಪಾಯಿಗೆ ವಿಮಾನ ಪ್ರಯಾಣ, ಬಂಪರ್ ಅವಕಾಶ
Flight Ticket : ಎಷ್ಟೋ ಜನ ವಿಮಾನ ಪ್ರಯಾಣವನ್ನು ದುಬಾರಿ ಅಂತಾ ದೂರ ಉಳಿಯುತ್ತಾರೆ. ಆದರೆ, ಕೇವಲ ₹1429ರಿಂದಲೇ ಟಿಕೆಟ್ ಬುಕಿಂಗ್ ಮಾಡಿಕೊಳ್ಳುವ ಅವಕಾಶ ಬಂದಿದೆ!
Publisher: Kannada News Today (Digital Media)
- Air India Express ಸ್ಪೆಷಲ್ “Pay Day Sale” ಆರಂಭ
- ₹1429 ರಿಂದ ವಿಮಾನ ಟಿಕೆಟ್ ಬುಕಿಂಗ್‌ಗೆ ಅವಕಾಶ
- ಮಾರ್ಚ್ 31ರೊಳಗೆ ಬುಕಿಂಗ್ ಮಾಡಿದವರಿಗೆ ಮಾತ್ರ ಅನ್ವಯ
Flight Ticket : ಸಾಮಾನ್ಯವಾಗಿ ವಿಮಾನ ಪ್ರಯಾಣ ಅಷ್ಟು ಸುಲಭವಲ್ಲ ಅಂತ ಅನಿಸುತ್ತೆ! ಆದರೆ Air India Express ಈಗ “Pay Day Sale” ಹೆಸರಿನ ಬಂಪರ್ ಆಫರ್ ನೀಡಿದ್ದು, ಕೇವಲ ₹1429ಕ್ಕೆ (Flight Ticket) ನಿಮ್ಮ ವಿಮಾನ ಟಿಕೆಟ್ ಅನ್ನು ಬುಕಿಂಗ್ ಮಾಡಬಹುದು. ಹೌದು, ಇದು ಸತ್ಯ!
ಇಲ್ಲಿ ಮತ್ತೊಂದು ಮಹತ್ವದ ಮಾಹಿತಿ ಏನಪ್ಪಂದರೆ, ಈ ಆಫರ್ ಮಾರ್ಚ್ 31, 2025ರೊಳಗೆ ಮಾತ್ರ ಲಭ್ಯ. ಏಪ್ರಿಲ್ 1, 2025 ರಿಂದ ಸೆಪ್ಟೆಂಬರ್ 20, 2025ರ ಒಳಗೆ ಪ್ರಯಾಣ ಮಾಡಬೇಕಾದರೆ, ಈಗಲೇ ನಿಮ್ಮ ಟಿಕೆಟ್ ಬುಕಿಂಗ್ ಮಾಡಿಕೊಳ್ಳಿ!
ಎಲ್ಲಿದೆ ಬುಕಿಂಗ್ ಲಿಂಕ್..? ಸೀಮಿತ ಅವಧಿಯ ಆಫರ್!
ಈ ಆಫರ್ Air India Expressನ ಅಧಿಕೃತ ವೆಬ್‌ಸೈಟ್ (Website) https://www.airindiaexpress.com ಮತ್ತು ಮೊಬೈಲ್ ಆಪ್ (Mobile App) ಮೂಲಕ ಮಾತ್ರ ಲಭ್ಯವಿದೆ. ಅಂತಿಮ ದಿನಾಂಕ (Deadline) ಮಾರ್ಚ್ 31, 2025!
ಇದು ಕೇವಲ ಅಗ್ಗದ ಟಿಕೆಟ್ ಅಲ್ಲ, ವಿಶೇಷ ಆಫರ್ ಕೂಡ!
ಈ ಆಫರ್‌ನಡಿಯಲ್ಲಿ, ಪ್ರಯಾಣಿಕರು ಎರಡು ಪ್ರಕಾರದ ದರಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು:
1️⃣ ಎಕ್ಸ್‌ಪ್ರೆಸ್ ವಾಲ್ಯೂ (Express Value) – ₹1499 ದರದಿಂದ ಆರಂಭ (ಹೆಚ್ಚುವರಿ ಪ್ರಯೋಜನಗಳೊಂದಿಗೆ)
2️⃣ ಎಕ್ಸ್‌ಪ್ರೆಸ್ ಲೈಟ್ (Express Lite) – ₹1429 ದರದಿಂದ ಆರಂಭ (ಚೆಕ್-ಇನ್ ಬ್ಯಾಗೇಜ್ ಹೊರತುಪಡಿಸಿ)
ಬ್ಯಾಗೇಜ್ ಪರಿಮಿತಿಗಳು ಏನು?
- 3Kg ಕ್ಯಾರಿ-ಆನ್ ಲಗೇಜ್ (Carry-On Baggage) – ಉಚಿತ
- 15Kg ಚೆಕ್-ಇನ್ ಲಗೇಜ್ – ₹1000 (ದೇಶೀಯ ವಿಮಾನಕ್ಕೆ)
- 20Kg ಚೆಕ್-ಇನ್ ಲಗೇಜ್ – ₹1300 (ಅಂತಾರಾಷ್ಟ್ರೀಯ ವಿಮಾನಕ್ಕೆ)
Cheapest Flight Tickets at Just 1429