ಸರ್ಕಾರಿ ಕೆಲಸ ಬೇಕಾದ್ರೂ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು! ಕೋರ್ಟ್ ಸಂಚಲನ ತೀರ್ಪು
ಸರ್ಕಾರಿ ಉದ್ಯೋಗ ಅವಕಾಶ ಕಳೆದುಕೊಂಡ ಅಭ್ಯರ್ಥಿಗೆ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದ ತೀರ್ಪು. ಸಿಬಿಲ್ ಸ್ಕೋರ್ (CIBIL Score) ಅಪರಿಪೂರ್ಣವಾದ ಕಾರಣ ಕೆಲಸ ರದ್ದಾಯಿತು ಎಂಬುದನ್ನು ನ್ಯಾಯಾಲಯ ದೃಢಪಡಿಸಿದೆ.

- ಸಿಬಿಲ್ ಸ್ಕೋರ್ ಸರಿಯಿಲ್ಲದ ಕಾರಣ ಅಭ್ಯರ್ಥಿಗೆ ಉದ್ಯೋಗ ನಿರಾಕರಣೆ
- ಹೈಕೋರ್ಟ್ ತೀರ್ಪು: ಹಣಕಾಸು ಶಿಸ್ತು ಬೇಕು
- ಬ್ಯಾಂಕ್ ಉದ್ಯೋಗಕ್ಕೆ ಕ್ರೆಡಿಟ್ ಇತಿಹಾಸ ಪ್ರಮುಖ ಅಂಶ
ಸರ್ಕಾರಿ ಉದ್ಯೋಗಗಳು ಭದ್ರತೆಯ ಸಂಕೇತವೆಂದು ಭಾವಿಸುವವರಿಗಾಗಿ ಮದ್ರಾಸ್ ಹೈಕೋರ್ಟ್ನ ತೀರ್ಪು ಸಂದೇಶವೊಂದನ್ನು ಒದಗಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬಿಒ (Circle Based Officer) ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಪಿ. ಕಾರ್ತಿಕೇಯನ್ ಎಂಬ ವ್ಯಕ್ತಿಗೆ, ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೂ, ಸಿಬಿಲ್ ಸ್ಕೋರ್ (CIBIL Score) ಸರಿಯಿಲ್ಲದ ಕಾರಣ ನೇಮಕಾತಿ ನಿರಾಕರಿಸಲಾಗಿದೆ.
ಈ ನಿರಾಕರಣೆಯನ್ನು ಪ್ರಶ್ನಿಸಿ ಆತ ನ್ಯಾಯಾಲಯದ ಮೊರೆ ಹೋಗಿದ್ದ. ತಮ್ಮ ಸಾಲಗಳೆಲ್ಲಾ (Bank Loan) ತೀರಿಸಲಾಗಿದ್ದು ಮತ್ತು ಯಾವುದೇ ಕ್ರೆಡಿಟ್ ಏಜೆನ್ಸಿಯಿಂದ negative ರಿಪೋರ್ಟ್ ಇಲ್ಲವೆಂದು ಆತ ನ್ಯಾಯಾಲಯಕ್ಕೆ ತಿಳಿಸಿದ್ದ. ಆದರೆ ನ್ಯಾಯಾಲಯದ ಅಭಿಪ್ರಾಯ ವಿಭಿನ್ನವಿತ್ತು.
ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ₹36,000 ಪಿಂಚಣಿ! ಶ್ರಮ ಯೋಗಿ ಯೋಜನೆಗೆ ಅರ್ಜಿ ಹಾಕಿ
ನ್ಯಾಯಮೂರ್ತಿ ಜಸ್ಟಿಸ್ ಎನ್. ಮಾಲಾ ಈ ಕುರಿತು ನೀಡಿದ ತೀರ್ಪಿನಲ್ಲಿ, “ಸಾಲಗಳನ್ನು ತೀರಿಸಿದರೆ ಸಾಕಾಗುವುದಿಲ್ಲ. (financial discipline) ಹಣಕಾಸು ಶಿಸ್ತಿನ ಇತಿಹಾಸವೂ ಮುಖ್ಯವಾಗಿದೆ” ಎಂದು ಹೇಳಿದರು. ಯಾವುದೇ ಕೆಲಸಕ್ಕೆ ಅರ್ಜಿ ಹಾಕುವ ಸಂದರ್ಭದಲ್ಲಿ ಪ್ರಕಟಣೆಯ ಎಲ್ಲ ನಿಯಮಗಳನ್ನು ಒಪ್ಪಿಕೊಂಡಿರುವಂಥದ್ದೆ, ಬಳಿಕ ಅದನ್ನು ಪ್ರಶ್ನಿಸಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
2021ರಲ್ಲಿ ಎಸ್ಬಿಐ ನೇಮಕಾತಿ ಪತ್ರ ನೀಡಿದ ನಂತರ, ಕೇವಲ ಒಂದು ತಿಂಗಳಲ್ಲಿ ಅದನ್ನು ರದ್ದುಗೊಳಿಸಿತ್ತು. ಆರ್ಥಿಕ ಅಶಿಸ್ತಿನ ಮಾಹಿತಿ ಅವರ [credit report] ನಲ್ಲಿ ಕಂಡುಬಂದಿತ್ತು ಎಂಬುದೇ ಕಾರಣ. ಇದನ್ನು ನ್ಯಾಯಾಲಯ ಸಮರ್ಥಿಸಿದೆ.
ಈ ಪ್ರಕರಣದಿಂದ ನಿರ್ಧಾರಗೊಂಡ ವಿಷಯವೇನೆಂದರೆ, ಬ್ಯಾಂಕಿಂಗ್ ಅಥವಾ ಹಣಕಾಸು ಸಂಸ್ಥೆಗಳ ಉದ್ಯೋಗಗಳಿಗೋಸ್ಕರ ಸಿಬಿಲ್ ಸ್ಕೋರ್ (CIBIL Score) ಮುಖ್ಯ ಅಂಶವಾಗಿದ್ದು, ಯಾವುದೇ ತಡವಾದ ಪಾವತಿಗಳು ಅಥವಾ ಸಾಲ (Loan) ಸಂಬಂಧಿತ ವಿಷಯಗಳು ಭವಿಷ್ಯದ ಉದ್ಯೋಗದ ದಿಕ್ಕನ್ನು ಬದಲಾಯಿಸಬಲ್ಲದು.
ಇದನ್ನೂ ಓದಿ: 1 ಲಕ್ಷದ ಸಹಾಯಧನ ಯೋಜನೆ! 50% ಕಟ್ಟಿದ್ರೆ ಸಾಕು, ಮಿಕ್ಕಿದ್ದು ಕಟ್ಟಬೇಕಿಲ್ಲ
ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕಾದರೆ ಏನು ಮಾಡಬೇಕು?
- ಕಷ್ಟಪಪಟ್ಟಾದರು ಎಲ್ಲ ಸಾಲಗಳು ಸಮಯಕ್ಕೆ ತೀರಿಸಬೇಕು
- Credit card bill ಅನ್ನು ಸಮಯಕ್ಕೆ ಪಾವತಿಸಬೇಕು
- ಮಿನಿಮಂ ಬಿಲ್ ಅಲ್ಲ, ಸಂಪೂರ್ಣ ಬಿಲ್ ಪಾವತಿ ಮಾಡಬೇಕು
- Credit utilization ಕಡಿಮೆ ಇರಬೇಕು
- ನಿಯಮಿತವಾಗಿ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸಬೇಕು
ಇದನ್ನೂ ಓದಿ: 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ₹2475! ಮೊದಲು ಪೋಸ್ಟ್ ಆಫೀಸ್ ಖಾತೆ ತೆರೆಯಿರಿ
ಇತ್ತೀಚೆಗೆ ಸರಕಾರೀ ಉದ್ಯೋಗಗಳು ಕ್ರೆಡಿಟ್ ಇತಿಹಾಸವನ್ನು ಪರಿಗಣಿಸುವುದರಿಂದ, ಆರ್ಥಿಕ ಶಿಸ್ತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇನ್ನು ಮುಂದೆ ಈ ದಿಕ್ಕಿನಲ್ಲಿ ಎಚ್ಚರದಿಂದಿರುವುದು ಬೇಕಾದ ಅಗತ್ಯವಾಗಿದೆ.
CIBIL Score Costs Government Job, Madras HC Verdict




