ರೈತರಿಗೆ ಸಹಾಯವಾಗಿದ್ದ ಕೇಂದ್ರ ಸರ್ಕಾರದ ಯೋಜನೆಯನ್ನು ರದ್ದು ಮಾಡುವ ನಿರ್ಧಾರ ಮಾಡಿದ ಸಿಎಂ ಸಿದ್ದರಾಮಯ್ಯ!

ಕೇಂದ್ರ ಸರ್ಕಾರವು ದೇಶದ ಜನರಿಗೆ ಉಪಯೋಗ ಆಗುವಂಥ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಎಲ್ಲಾ ರೈತರಿಗೆ ಉಪಯೋಗವಾಗಿ ಸಹಾಯ ಮಾಡುತ್ತಿದ್ದ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (Kisan Samman Nidhi Yojane) ಆಗಿತ್ತು. ಈ ಯೋಜನೆಯ ಮೂಲಕ ಎಲ್ಲಾ ರೈತರಿಗೆ ವಾರ್ಷಿಕವಾಗಿ ₹6000 ರೂಪಾಯಿ ಧನ ಸಹಾಯ ಸಿಗುತ್ತಿತ್ತು.

ದೇಶದ ಕೋಟ್ಯಾಂತರ ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದರು. ಸಾಕಷ್ಟು ರೈತರಿಗೆ ಸಹಾಯವಾಗಿದ್ದ ಈ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ (Government of Karnataka) ನಿಲ್ಲಿಸುವ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಈಗ ಸಿಕ್ಕಿದೆ. ವಾರ್ಷಿಕವಾಗಿ 6000 ಕೊಡುತ್ತಿದ್ದ ಯೋಜನೆಯನ್ನು ತೆಗೆದುಹಾಕಿದೆ.

ಈಗ ರಾಜ್ಯ ಸರ್ಕಾರ ವಾರ್ಷಿಕಬಾಗಿ 4000 ಕೊಡುವ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಚರ್ಚೆ ಬಂದಿರುವುದು ವಿಧಾನಸಭಾ ಅಧಿವೇಶನದಲ್ಲಿ. ಮಂಗಳವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ (BJP) ಪಕ್ಷದ ಶಾಸಕರಾದ ಸುನಿಲ್ ಕುಮಾರ್ (Sunil Kumar) ಅವರು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ನಿಲ್ಲಿಸಿದ್ದೀರಾ ಇನ್ನು ಇದೆಯಾ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ಆಗ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಉತ್ತರ ಕೊಟ್ಟರು, ನಮ್ಮ ರಾಜ್ಯಾದ್ದೇ ಆಗಿರುವ ಕೃಷಿ ಭಾಗ್ಯ (Krishi Bhagya) ಯೋಜನೆ ಇದೆ, ನಾವು ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ..

ಸಿದ್ದರಾಮಯ್ಯ ಅವರ ಈ ಉತ್ತರ ಕೇಳಿಸಿಕೊಂಡ ಬಳಿಕ ಸುನೀಲ್ ಕುಮಾರ್ ಅವರು ಮರುಪ್ರಶ್ನೆ ಮಾಡಿದರು, ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಮಾತನಾಡಿ ಎಂದು ಸಿದ್ದರಾಮಯ್ಯ ಅವರನ್ನು ಕೇಳಿದ್ದಕ್ಕೆ, ಉತ್ತರ ಕೊಟ್ಟ ಸಿದ್ದರಾಮಯ್ಯ ಅವರು, ನಮ್ಮ ರಾಜ್ಯದಲ್ಲಿ 87 ಲಕ್ಷ ರೈತರಿದ್ದಾರೆ, ಅವರಲ್ಲಿ 51 ಲಕ್ಷ ರೈತರಿಗೆ ಮಾತ್ರ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯ ಸಿಗುತ್ತಿತ್ತು.

ಇನ್ನುಳಿದ ರೈತರಿಗೆ ಸಿಗುತ್ತಿರಲಿಲ್ಲ. ನಿಮ್ಮ ಪಕ್ಷದವರು ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನ ಎಲ್ಲಾ ರೈತರಿಗೂ ಕೊಟ್ಟಿರಲಿಲ್ಲ, ಅದಕ್ಕೆ ನಾವು ಬೇರೆ ಯೋಜನೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಟ್ಟಿದ್ದಾರೆ. ನಮ್ಮ ರಾಜ್ಯದ 51ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ 6 ಸಾವಿರ, ಹಾಗೆಯೇ ಸಿದ್ದರಾಮಯ್ಯ ಅವರು ಕೃಷಿ ಭಾಗ್ಯ ಯೋಜನೆಯಿಂದ ನಾಲ್ಕು ಸಾವಿರ.

Cm about kisan samman nidhi yojane

ಕರ್ನಾಟಕ ರಾಜ್ಯದ ರೈತರಿಗೆ ಒಟ್ಟಾರೆಯಾಗಿ 10 ಸಾವಿರ ಸಿಗುತ್ತಿತ್ತು.. ಆದರೆ ಈಗ ಸಿದ್ದರಾಮಯ್ಯ ಅವರು ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕರ್ನಾಟಕದಲ್ಲಿ ನಿಲ್ಲಿಸಬೇಕು ಎಂದು ಮಾಡಿರುವ ನಿರ್ಧಾರ ಬಹುತೇಕ ನಿಜವೇ ಆಗಿದ್ದು, ಒಂದು ವೇಳೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ನಿಂತರು ಕೂಡ ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಅವರ ಕೃಷಿ ಭಾಗ್ಯ ಯೋಜನೆಯಿಂದ ವಾರ್ಷಿಕವಾಗಿ 4000 ಸಿಗುವುದು ಗ್ಯಾರಂಟಿ ಆಗಿದೆ.

Cm about kisan samman nidhi yojane

TRENDING ARTICLES1 / 5
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories