ಡಿಸೆಂಬರ್ 31 ಡೆಡ್‌ಲೈನ್: ಈ ಕೆಲಸ ಮಾಡೋದು ಮಿಸ್ ಆದ್ರೆ ಭಾರೀ ನಷ್ಟ ಅನುಭವಿಸಬೇಕಾಗುತ್ತೆ!

ಹೊಸ ವರ್ಷಕ್ಕೆ ಮುನ್ನ ಡಿಸೆಂಬರ್ 31ರೊಳಗೆ ಮಾಡಬೇಕಾದ ಹಲವು ಮುಖ್ಯ ಕೆಲಸಗಳ ಗಡುವು ಮುಗಿಯುತ್ತಿದೆ. ಪಾನ್–ಆಧಾರ್ ಲಿಂಕ್, ರೇಷನ್ ಕಾರ್ಡ್ eKYC, ITR ಬಿಲೇಟೆಡ್ ಫೈಲಿಂಗ್ ಸೇರಿದಂತೆ ವಿಳಂಬವಾದರೆ ಆರ್ಥಿಕವಾಗಿ ನಷ್ಟ ಸಂಭವಿಸಬಹುದು.

ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದರೂ, ಸರ್ಕಾರ ನಿಗದಿ ಮಾಡಿದ ಗಡುವುಗಳು ನಿಮ್ಮ ಗಮನದಿಂದ ತಪ್ಪಬಾರದು. ಈ ಕೆಲಸಗಳನ್ನು ಮಾಡಿಕೊಂಡರೆ 2026ನ್ನು ಆರ್ಥಿಕ ಒತ್ತಡವಿಲ್ಲದೆ ಪ್ರಾರಂಭಿಸಬಹುದು. ನಿಧಾನ ಮಾಡಿದರೆ ಸೇವೆಗಳ ನಿರ್ಬಂಧ, ದಂಡ ಮತ್ತು ಅನಾನುಕೂಲ ಎದುರಾಗುವ ಸಾಧ್ಯತೆ ಹೆಚ್ಚು.

ITR ಹಾಗೂ ತೆರಿಗೆ ಸಂಬಂಧಿತ ಗಡುವುಗಳು

ಬಹಳ ಮಂದಿ ಇನ್ನೂ 2024-25ರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲ. ಇಂತಹವರಿಗೆ ಡಿಸೆಂಬರ್ 31ರೊಳಗೆ ‘Belated Return’ ಫೈಲ್ ಮಾಡುವ ಕೊನೆಯ ಅವಕಾಶ ದೊರೆಯಲಿದೆ. ಇದನ್ನು ಮಿಸ್ ಮಾಡಿದರೆ ನಂತರ ರಿಟರ್ನ್ ಸಲ್ಲಿಸುವ ಅವಕಾಶವೇ ಇರದು.

ಅದೇ ಅಲ್ಲ, ತೆರಿಗೆ (Advance Tax) ಮೂರನೇ ಕಂತು ಪಾವತಿಸಲು ಡಿಸೆಂಬರ್ 15 ಕೊನೆಯ ದಿನ. ಇದನ್ನು ತಪ್ಪಿಸಿದರೆ ಬಡ್ಡಿ ಮತ್ತು ದಂಡ ವಿಧಿಸುವ ಸಂಭವ ಇದೆ.

ಪಾನ್–ಆಧಾರ್ ಲಿಂಕ್ ಮಾಡಲು ಕೊನೆಯ ದಿನ

ಇನ್‌ಕಂ ಟ್ಯಾಕ್ಸ್ ಇಲಾಖೆ ಡಿಸೆಂಬರ್ 31ನ್ನು ಪಾನ್–ಆಧಾರ್ ಲಿಂಕ್ ಮಾಡಲು ಅಂತಿಮ ದಿನಾಂಕವಾಗಿ ನಿಗದಿ ಮಾಡಿದೆ. ಲಿಂಕ್ ಮಾಡದೆ ಬಿಟ್ಟರೆ ನಿಮ್ಮ ಪಾನ್ ಅಮಾನ್ಯ (Invalid) ಆಗುತ್ತದೆ. ಅದರ ಪರಿಣಾಮವಾಗಿ:

  • ಬ್ಯಾಂಕ್ ಟ್ರಾನ್ಸಾಕ್ಷನ್‌ಗಳ ಮೇಲೆ ನಿರ್ಬಂಧ
  • ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ತೊಂದರೆ
  • KYC ಸಂಬಂಧಿತ ಕಾರ್ಯಗಳು ಸ್ಥಗಿತವಾಗುವ ಸಾಧ್ಯತೆ

ರೇಷನ್ ಕಾರ್ಡ್ eKYC ಮಾಡದಿದ್ದರೆ ಹೆಸರು ತೆಗೆದುಹಾಕುವ ಸಾಧ್ಯತೆ

ಕೆಲವು ರಾಜ್ಯಗಳು ಡಿಸೆಂಬರ್ 31ರೊಳಗೆ ರೇಷನ್ ಕಾರ್ಡ್ eKYC ಮಾಡಬೇಕು ಎಂದು ಸ್ಪಷ್ಟ ಸೂಚನೆ ನೀಡಿವೆ. KYC ಮಾಡದಿದ್ದರೆ ನಿಮ್ಮ ಹೆಸರು ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆ ಇದೆ. ಇದರಿಂದ ಮುಂದಿನ ತಿಂಗಳುಗಳಿಂದ ರೇಷನ್ ಸರಕು ಪಡೆಯಲು ಅವಕಾಶ ತಪ್ಪಬಹುದು.

ಪಿಎಂ‌ ಅವಾಸ್ ಯೋಜನೆಗೆ (PMAY) ಅರ್ಜಿ ಹಾಕುವ ಗಡುವು

ಸ್ವಂತ ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರ ನೀಡಿರುವ ಪಿಎಂ‌ ಆವಾಸ್ ಯೋಜನೆಗೆ ಅರ್ಜಿ ಹಾಕಲು ಡಿಸೆಂಬರ್ 31 ಕೊನೆಯ ದಿನ. ಈ ಯೋಜನೆಯಡಿ ಅರ್ಜಿ ಅಂಗೀಕಾರವಾದರೆ ₹2.5 ಲಕ್ಷದ ಮನೆ ನಿರ್ಮಾಣ ಸಹಾಯ ಲಭ್ಯ. ಅರ್ಜಿ ಸಲ್ಲಿಸದೆ ಬಿಟ್ಟರೆ ಈ ಆರ್ಥಿಕ ನೆರವು ಕೈ ತಪ್ಪುವುದು ಖಚಿತ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories