ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಬಂಗಾರದ ಬೆಲೆ ಎಷ್ಟಾಗಲಿದೆಯಂತೆ ಗೊತ್ತಾ? ತಜ್ಞರ ವರದಿ ಪ್ರಕಟ.
ಭಾರತೀಯರು ಚಿನ್ನವನ್ನು ಪ್ರೀತಿಸುವಷ್ಟು ಚಿನ್ನದ ಮೇಲೆ ಹೂಡಿಕೆ ಮಾಡುವಷ್ಟು ಬೇರೆ ಯಾವ ದೇಶದವರಿಗೂ ಆಸಕ್ತಿ ಇಲ್ಲವೇನೋ ಎಂದು ಅನ್ನಿಸುತ್ತೆ ಯಾಕೆಂದರೆ ನಮ್ಮ ದೇಶದಲ್ಲಿ ಈಗ ಚಿನ್ನದ ಬೆಲೆ(Gold Price) ದಿನದಿಂದ ದಿನಕ್ಕೆ ವ್ಯತ್ಯಾಸವಾಗುತ್ತಿದೆ ಹಾಗೂ ಬೆಲೆ ಏರಿಕೆ ಆಗುತ್ತಲೆ ಇದೆ. ಇಂದು ನಾಳೆ ಚಿನ್ನದ ಬೆಲೆ ಇಳಿಕೆ ಆಗಬಹುದು ಎಂದು ಕಾದು ಕುಳಿತವರಿಗೆ ಮತ್ತೆ ನಿರಾಸೆ ಆಗಿದೆ ಈ ವಾರಾಂತ್ಯದಲ್ಲಿಯೂ ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿತ್ತು. ಇದೇ ರೀತಿ ಚಿನ್ನದ ಬೆಲೆ ಮುಂದುವರೆದರೆ ವರ್ಷದ ಅಂತ್ಯದ ಸಮಯಕ್ಕೆ ಎಷ್ಟಾಗಬಹುದು ಎಂದು ತಜ್ಞರು ಅಂದಾಜು ಮಾಡುತ್ತಾರೆ.
ಚಿನ್ನದ ದರದ ಮುನ್ಸೂಚನೆ!
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರತದ ಅತ್ಯುತ್ತಮ ಸ್ಟಾಕ್ ಬ್ರೋಕರ್(Stock Broker) ನೀಡುವ ಮಾಹಿತಿ ನೋಡಿದರೆ ಮುಂದಿನ 30 ದಿನಗಳಲ್ಲಿ ಅಂದ್ರೆ ಬರುವ ಡಿಸೆಂಬರ್ ಹೊತ್ತಿಗೆ ಚಿನ್ನದ ಬೆಲೆಯಲ್ಲಿ ಇನ್ನಷ್ಟು ವ್ಯತ್ಯಾಸ ಆಗಬಹುದು.
ಇಂದಿನ ಬೆಲೆ ಎಷ್ಟು!
ಒಂದು ಗ್ರಾಂ ಚಿನ್ನಕ್ಕೆ 6291 ರೂಪಾಯಿ ದಾಖಲಾಗಿದೆ. 22 ಕ್ಯಾರೆಟ್ ಚಿನ್ನ ಒಂದು ಗ್ರಾಂ ಗೆ 5524 ರೂಪಾಯಿ ದಾಖಲಾಗಿದೆ. ಅಂದರೆ ಕಳೆದ ವಾರಕ್ಕೆ ಹೋಲಿಸಿದರೆ 0.063% ಹಾಗೂ 0.567% ಬದಲಾವಣೆ ಆಗಿದೆ. ಬೆಂಗಳೂರಿನಲ್ಲಿ ಇಂದು ಒಂದು ಹಾಕಲಾಗಿರುವ ಚಿನ್ನದ ದರವನ್ನು ನೋಡುವುದಾದರೆ 24 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 63,210 ರೂಪಾಯಿಗಳು. ಹಾಗೂ 22 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 57,940 ರೂಪಾಯಿಗಳಷ್ಟು ದಾಖಲಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ಗೆಸ್ಟ್ ಆಗಬಹುದು ಚಿನ್ನದ ಬೆಲೆ!
ಆಗಸ್ಟ್ ತಿಂಗಳಿನಲ್ಲಿ ಚಿನ್ನದ ಬೆಲೆ ನೋಡಿದರೆ ಅಕ್ಟೋಬರ್ ತಿಂಗಳ ಹೊತ್ತಿಗೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಅಗಸ್ಟ್ ತಿಂಗಳಿನಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಹತ್ತು ಗ್ರಾಂ ಗೆ 59,840ಗಳು ಇದ್ದವು. ಅದೇ ಅಕ್ಟೋಬರ್ ವೇಳೆಗೆ 61650 ರೂಪಾಯಿಗಳು, ಅದೇ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ದಾಖಲಾಗಿದೆ.
ಅಂದ್ರೆ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳ ಕಂಡು ಬಂದಿದೆ. ಇನ್ನು ಈ ಚಿನ್ನದ ಬೆಲೆ ನವೆಂಬರ್ ಹೊತ್ತಿಗೆ 62,800 ರೂ.ಆಗಬಹುದು ಹಾಗೂ ಡಿಸೆಂಬರ್ 2023ರ ವೇಳೆಗೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 63,420ಗಳು ಆಗಬಹುದು ಎಂದು ಉಳಿಸಲಾಗಿದೆ.
ಮಾರುಕಟ್ಟೆಯಲ್ಲಿ(Global Market) ಪ್ರಸ್ತುತ ಚಿನ್ನದ ಬೆಲೆ ಜಾಗತಿಕ ಆರ್ಥಿಕ ಅನಿಶ್ಚಿತತೆಯನ್ನು ಅವಲಂಬಿಸಿದೆ ಎನ್ನಬಹುದು ಹಾಗಾಗಿ ಈ ವರ್ಷ ಬಿಡಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೇವೆ.

ತಜ್ಞರು ಹೇಳುವ ಪ್ರಕಾರ ಆರ್ಥಿಕ ಚೇತರಿಕೆ ಹಾಗೂ ಸಂಭಾವ್ಯ ಬಡ್ಡಿದರ ಹೆಚ್ಚಳದಿಂದ ಚಿನ್ನದ ದರ ಭವಿಷ್ಯದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಲುಬಹುದು. ಹಣದುಬ್ಬರ ನಿಯಂತ್ರಣಕ್ಕೆ ಬಂದರೆ ಆಗಲು ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ (ಆರು ತಿಂಗಳ ಲೆಕ್ಕಾಚಾರ) 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಸರಾಸರಿ ಬೆಲೆ 60,450ಗಳು ಆಗಬಹುದು.
Do you know how much the price of gold will be at the end of December? Expert report published.







