ದುಬೈನಲ್ಲಿ 1BHK ಮನೆ ಬಾಡಿಗೆ ಎಷ್ಟು ಗೊತ್ತಾ? ಬೆಂಗಳೂರಲ್ಲಿ ಫ್ಲಾಟ್ ಖರೀದಿ ಮಾಡಬಹುದು!
ದುಬೈನಲ್ಲಿ ಒಂದು ಸಿಂಗಲ್ ಬೆಡ್ರೂಮ್ ಫ್ಲ್ಯಾಟ್ ಬಾಡಿಗೆಗೆ ಪಡೆದುಕೊಳ್ಳುವುದಕ್ಕೂ ಸಾಕಷ್ಟು ಕಷ್ಟ ಪಡಬೇಕು. ಇಲ್ಲಿ ಒಂದು ಫ್ಲಾಟ್ ಪ್ರತಿ ತಿಂಗಳ ಬಾಡಿಗೆ ಮೂರರಿಂದ ಹತ್ತು ಸಾವಿರ ದಿರ್ಹಮ್ ಗಳು.
- ದುಬೈನಲ್ಲಿ 1BHK ಫ್ಲ್ಯಾಟ್ ಬಾಡಿಗೆ ಎಷ್ಟು ಗೊತ್ತಾ
- ಎರಡು ಲಕ್ಷ ರೂಪಾಯಿ ಕೊಟ್ರು ಸಿಗಲ್ಲ ಬಾಡಿಗೆ ಮನೆ
- ದುಬೈನಲ್ಲಿ ಬಾಡಿಗೆ ಮನೆ ಬೆಂಗಳೂರಿನ ಸ್ವಂತ ಫ್ಲ್ಯಾಟ್ ಖರೀದಿಗೆ ಸಮ
Dubai House Rent : ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತನ್ನ ನೀವು ಕೇಳಿರಬಹುದು. ಎಷ್ಟೋ ಸಲ ನಿಜಕ್ಕೂ ಇದು ಅನುಭವಕ್ಕೆ ಬರುತ್ತದೆ. ಉದಾಹರಣೆಗೆ ದೂರದ ದುಬೈ ಎಷ್ಟು ಚಂದ ಎಂದು ಭಾವಿಸುತ್ತೇವೆ. ಅಲ್ಲಿಯೇ ಹೋಗಿ ಜೀವನ ಮಾಡಬೇಕು ಎಂದು ಹಲವರು ಕನಸು ಕಾಣುತ್ತಾರೆ.
ಆದರೆ ಇಂತಹ ವಿದೇಶದಲ್ಲಿ ವಾಸ ಮಾಡುವುದು ಎಷ್ಟು ಕಷ್ಟ ಗೊತ್ತಾ? ಒಂದೇ ಒಂದು ಬಾಡಿಗೆ ಮನೆ ಪಡೆದುಕೊಳ್ಳಬೇಕು ಅಂದ್ರು ನಮ್ಮ ರಾಜ್ಯದಲ್ಲಿ ಫ್ಲಾಟ್ ಕೊಂಡುಕೊಳ್ಳಲು ಬೇಕಾಗುವಷ್ಟು ಹಣವನ್ನು ಬಾಡಿಗೆ ಮನೆಯೊಂದಕ್ಕೆ ಸುರಿಯಬೇಕು.
ದುಬೈನಲ್ಲಿ ಒಂದು ಬಿ ಎಚ್ ಕೆ ಮನೆಗೆ ಅರವತ್ತು ಸಾವಿರ ಬಾಡಿಗೆ!
ಎಷ್ಟೋ ಜನ ಉದ್ಯೋಗವನ್ನು ಅರಸಿ ವಿದೇಶಕ್ಕೆ ಹೋಗುತ್ತಾರೆ, ಅಮೆರಿಕ, ಆಸ್ಟ್ರೇಲಿಯಾ ಕೆನಡಾಗಳಂತೆ ದುಬೈಗೆ ಕೂಡ ಹೋಗುತ್ತಾರೆ. ದುಬೈ ಒಂದು ದುಬಾರಿ ಸಿಟಿ.
ಇಲ್ಲಿ ವಾಸಿಸುವುದು ಅಷ್ಟು ಸುಲಭ ಅಲ್ಲ. ಒಂದೇ ಒಂದು ಬಾಡಿಗೆ ಮನೆಯನ್ನು ಪಡೆದುಕೊಳ್ಳಬೇಕು ಅಂದ್ರು ನೀವು ಸಿಕ್ಕಾಪಟ್ಟೆ ಹಣ ಖರ್ಚು ಮಾಡಬೇಕು. ಹಾಗಾದ್ರೆ ದುಬೈನಲ್ಲಿ ಒಂದು ಬಾಡಿಗೆ ಮನೆಗೆ ಎಷ್ಟು ವೆಚ್ಚವಾಗುತ್ತದೆ ನೋಡೋಣ.
ದುಬೈನಲ್ಲಿ ಒಂದು ಸಿಂಗಲ್ ಬೆಡ್ರೂಮ್ ಫ್ಲ್ಯಾಟ್ ಬಾಡಿಗೆಗೆ (Single Bed Room Rent) ಪಡೆದುಕೊಳ್ಳುವುದಕ್ಕೂ ಸಾಕಷ್ಟು ಕಷ್ಟ ಪಡಬೇಕು. ಇಲ್ಲಿ ಒಂದು ಫ್ಲಾಟ್ ಪ್ರತಿ ತಿಂಗಳ ಬಾಡಿಗೆ ಮೂರರಿಂದ ಹತ್ತು ಸಾವಿರ ದಿರ್ಹಮ್ ಗಳು.
ಅಂದರೆ ಭಾರತೀಯ ಕರೆನ್ಸಿಯಲ್ಲಿ 67,000 ಗಳಿಂದ 2,25,000ಗಳವರೆಗೆ. ನೀವು ಯಾವೆಲ್ಲ ಸೌಲಭ್ಯ ಇರುವ ಫ್ಲ್ಯಾಟ್ ಅನ್ನು ಬಾಡಿಗೆ ಪಡೆದುಕೊಳ್ಳುತ್ತೀರಿ ಎನ್ನುವ ಆಧಾರದ ಮೇಲೆ ಬಾಡಿಗೆ ನಿರ್ಧಾರವಾಗುತ್ತದೆ.
ದುಬೈ ಇಂಟರ್ನ್ಯಾಷನಲ್ ಸಿಟಿ!
ಸಾಮಾನ್ಯವಾಗಿ ಭಾರತೀಯ ಉದ್ಯೋಗಿಗಳು ದುಬೈನ ಇಂಟರ್ನ್ಯಾಷನಲ್ ಸಿಟಿಯಲ್ಲಿ ವಾಸಿಸುತ್ತಾರೆ. ಇದಕ್ಕೆ ಕಾರಣ ಇಲ್ಲಿ ಸುಮಾರು 56,000 ರೂಪಾಯಿಗಳಿಂದ 90,000 ರೂಪಾಯಿಗಳ ಅಂತರದಲ್ಲಿ ಒಂದು ಬೆಡ್ರೂಮ್ ಇರುವ ಮನೆಯನ್ನು ಬಾಡಿಗೆ ಪಡೆಯಬಹುದು. ಇದನ್ನು ದುಬೈನ ಅಗ್ರವಾದ ಪ್ಲೇಸ್ ಎನ್ನಬಹುದು.
ಇನ್ನು ದುಬೈನಲ್ಲಿ ಡಿಸ್ಕವರಿ ಗಾರ್ಡನ್, ಸಿಲಿಕಾನ್ ಓಯಸಿಸ್, ಅಲ್ ನಹಾ ಮತ್ತು ಜುಮೇರಾ ವಿಲೇಜ್ ಸರ್ಕಲ್ ಈ ಪ್ರದೇಶಗಳು ವಾಸ ಯೋಗ್ಯವಾಗಿದೆ ಅಂದರೆ ಸುಮಾರು 67 ಸಾವಿರ ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿಗಳವರೆಗೆ ಬಾಡಿಗೆ ಮನೆಯನ್ನು ಪಡೆಯಬಹುದು.
ಇಷ್ಟೊಂದು ದುಬಾರಿ ದುನಿಯಾದಲ್ಲಿ ಯಾಕೆ ಜೀವಿಸಬೇಕು ಅಂತ ನಿಮಗೂ ಯೋಚನೆ ಬರಬಹುದು. ಆದರೆ ದುಬೈನಲ್ಲಿ ಇರುವವರ ಸಂಬಳವೂ ಅಷ್ಟೇ ಜಾಸ್ತಿ ಇರುತ್ತದೆ ಹಾಗಾಗಿ ಇಲ್ಲಿ ಇಷ್ಟು ಹಣವನ್ನು ಬಾಡಿಗೆ ಕೊಡುವುದು ಅಲ್ಲಿನ ಉದ್ಯೋಗಿಗಳಿಗೆ ದೊಡ್ಡ ವಿಷಯವೇನು ಅಲ್ಲ.
Do you know the rent for a 1BHK house in Dubai