ಸಿಹಿ ಸುದ್ದಿ, ಹಿರಿಯ ನಾಗರಿಕರ ಬ್ಯಾಂಕ್ ಅಕೌಂಟ್ ಹಣಕ್ಕೆ ಸಿಗುತ್ತೆ 8.8% ವರೆಗೆ ಬಡ್ಡಿ

Fixed Deposit : ಹಿರಿಯ ನಾಗರಿಕರಿಗೆ 3 ವರ್ಷ ಕಾಲದ ಫಿಕ್ಸೆಡ್ ಡೆಪಾಸಿಟ್ ಗೆ ಕೆಲ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು 8.8% ವರೆಗಿನ ಎಫ್ಡಿ ಬಡ್ಡಿದರ ನೀಡುತ್ತಿವೆ.

  • ಸೂರ್ಯೋದಯ ಬ್ಯಾಂಕ್ ಎಫ್ಡಿಗೆ 8.8% ಬಡ್ಡಿ ನೀಡುತ್ತಿದೆ
  • ಉತ್ಕರ್ಷ್ ಬ್ಯಾಂಕ್ 8.75% ಬಡ್ಡಿದರ ನೀಡುತ್ತಿದೆ
  • ಫಾರ್ಮ್ 15ಹೆಚ್ ಸಲ್ಲಿಸಿ ಟಿಡಿಎಸ್ ತಪ್ಪಿಸಬಹುದು

Fixed Deposit : ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರದಲ್ಲಿ ಏರಿಕೆ ಕಂಡುಬಂದಿದ್ದು, ಕೆಲ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು 3 ವರ್ಷ ಅವಧಿಯ (FD) ನಿಕ್ಷೇಪದ ಮೇಲೆ 8.8% ವರೆಗಿನ ಬಡ್ಡಿದರವನ್ನು ನೀಡುತ್ತಿವೆ. ಆದರೆ, ₹5 ಲಕ್ಷವರೆಗೆ ಮಾತ್ರ ಡಿಪಾಸಿಟ್ ಇನ್ಶುರೆನ್ಸ್ (DICGC) ಲಾಭ ನೀಡುತ್ತದೆ ಎಂಬುದನ್ನು ಮರೆಯಬಾರದು.

ಜೊತೆಗೆ ಹಣಕಾಸು ತಜ್ಞರ ಸೂಚನೆ ಪ್ರಕಾರ, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ, ಹೆಚ್ಚಿನ ಹಣವನ್ನು ಇಡುವ  ಮುನ್ನ ಚೆನ್ನಾಗಿ ಪರಿಶೀಲಿಸಬೇಕು. small finance banks ನ ಬಿಸಿನೆಸ್ ಮಾದರಿ ವಿಭಿನ್ನವಾಗಿರುವುದರಿಂದ, ಮಿತಿಯಲ್ಲಿ ಹಣವನ್ನು ಇಡುವುದು ಸೂಕ್ತ.

ಇದನ್ನೂಓದಿ : ತಡೀರಿ, ಬ್ಯಾಂಕ್ ಖಾತೆಗೆ ಹೆಚ್ಚಿನ ಹಣ ಜಮಾ ಮಾಡೋರಿಗೆ ಬಂತು ಹೊಸ ರೂಲ್ಸ್

ಹಿರಿಯರು (senior citizens) ತಮ್ಮ ಏಕವರ್ಷಿಕ ಬಡ್ಡಿದರಗಳು ₹1 ಲಕ್ಷ ಮೀರಿದರೆ, ಬ್ಯಾಂಕುಗಳು ಟಿಡಿಎಸ್ ಕಡಿತಗೊಳಿಸುತ್ತವೆ. ಆದರೆ, ಟಿಡಿಎಸ್ ಎಂದರೆ ಹೊಸ ತೆರಿಗೆ ಅಲ್ಲ. (TDS) ಕಟ್ ಆಗಿದ್ರೆ, ಅದನ್ನು ಇನ್ಕಂ ಟ್ಯಾಕ್ಸ್ ಫೈಲಿಂಗ್ (ITR) ವೇಳೆ ರಿಫಂಡ್ ಪಡೆಯಬಹುದಾಗಿದೆ.

ಹೆಚ್ಚಿನ ಹಣವನ್ನು ಎಫ್‌ಡಿಯಲ್ಲಿ ಇಡುವ ಮುನ್ನ Form 15H ಸಲ್ಲಿಸಿ, ಟಿಡಿಎಸ್ ತಪ್ಪಿಸಿಕೊಳ್ಳಬಹುದಾಗಿದೆ. ವಿಶೇಷವಾಗಿ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ₹12 ಲಕ್ಷದೊಳಗಿನ ಆದಾಯ ಇರುವವರು ಸೆಕ್ಷನ್ 87ಎ ರಿಯಾಯಿತಿಯ (Section 87A rebate) ಲಾಭ ಪಡೆಯಬಹುದು. ಆದರೂ, ಬ್ಯಾಂಕುಗಳು ಬಡ್ಡಿದರ ₹1 ಲಕ್ಷ ಮೀರಿದಾಗ ತಕ್ಷಣ ಟಿಡಿಎಸ್ ಕಟ್ ಮಾಡುತ್ತವೆ, ಏಕೆಂದರೆ ಅವರಿಗೂ ನಿಮ್ಮ ಒಟ್ಟು ಆದಾಯ ತಿಳಿಯದು.

ಇದನ್ನೂ ಓದಿ: ಸ್ಟೇಟ್ ಬ್ಯಾಂಕಿನಲ್ಲಿ ಹೊಸ ಮನೆಕಟ್ಟುವವರಿಗೆ ಬಂಪರ್ ಲೋನ್ ಸ್ಕೀಮ್ ಘೋಷಣೆ!

ಹಿರಿಯ ನಾಗರಿಕರಿಗೆ ಎಫ್ಡಿ ಬಡ್ಡಿದರ

Bank Name FD Rate
Suryoday Small Finance Bank 8.8%
Utkarsh Small Finance Bank 8.75%
Unity Small Finance Bank 8.5%
slice Small Finance Bank 8.25%
Jana Small Finance Bank 8.25%

 

FD Interest Up to 8.8 Percent for Senior Citizens

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories