ಜಿಎಸ್‌ಟಿ ಕಡಿತ, ಎಸಿ ಮತ್ತು ಟಿವಿಗಳ ಮೇಲೆ ಭರ್ಜರಿ ಇಳಿಕೆ! ಗ್ರಾಹಕರಿಗೆ ಭಾರೀ ಲಾಭ
ಕೇಂದ್ರ ಸರ್ಕಾರ ಜಿಎಸ್‌ಟಿ ದರವನ್ನು 28% ನಿಂದ 18%ಕ್ಕೆ ಕಡಿತಗೊಳಿಸಿದ್ದು, ಎಸಿಗಳು, ದೊಡ್ಡ ಟಿವಿಗಳು ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. ಸೆಪ್ಟೆಂಬರ್ 22ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

Electronics Get Cheaper: ಹಬ್ಬದ ಸೀಸನ್ ಮುನ್ನ ಕೇಂದ್ರ ಸರ್ಕಾರ ಗ್ರಾಹಕರಿಗೆ ದೊಡ್ಡ ಉಡುಗೊರೆ ನೀಡಿದೆ. ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಜಿಎಸ್‌ಟಿ ದರ ಕಡಿತ ಮಾಡುವ ಮೂಲಕ ಬೆಲೆ ಇಳಿಕೆ ಸಾಧ್ಯವಾಗಲಿದೆ. ಸೆಪ್ಟೆಂಬರ್ 22ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.
ಇದರಿಂದ ಎಸಿಗಳು (Air Conditioner), ಟಿವಿಗಳು (Smart TV), ಡಿಶ್‌ವಾಷರ್‌ಗಳು (dishwasher), ಮಾನಿಟರ್‌ಗಳು (Laptop) ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. 28% ದಿಂದ 18%ಕ್ಕೆ ಜಿಎಸ್‌ಟಿ ಇಳಿಕೆಯ ನಿರ್ಧಾರದಿಂದ ಖರೀದಿದಾರರಿಗೆ ಉತ್ತಮ ಪ್ರಯೋಜನ ಸಿಗಲಿದೆ.
ಮಧ್ಯಮ ಮಟ್ಟದ ಎಸಿಗಳ ಬೆಲೆ ರೂ.1,500 ರಿಂದ ರೂ.2,500 ವರೆಗೆ ಇಳಿಯುವ ನಿರೀಕ್ಷೆ ಇದೆ. ಉದಾಹರಣೆಗೆ, ರೂ.35,000 ಮೌಲ್ಯದ ಏಸಿಯ ಮೇಲಿನ ತೆರಿಗೆ ಮೊದಲು ರೂ.6,800 ಇತ್ತು. ಈಗ ಅದು ರೂ.3,150ಕ್ಕೆ ಇಳಿಯಲಿದೆ. ಇದರಿಂದ ಗ್ರಾಹಕರಿಗೆ ಸುಮಾರು ರೂ.3,000 ಉಳಿತಾಯವಾಗುತ್ತದೆ.
ಅದೇ ರೀತಿ, 32 ಇಂಚುಗಳಿಗಿಂತ ದೊಡ್ಡ ಎಲ್‌ಇಡಿ, ಎಲ್‌ಸಿಡಿ ಟಿವಿಗಳ ಬೆಲೆ ರೂ.1,000 ರಿಂದ ರೂ.5,000 ವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ. ಉದಾಹರಣೆಗೆ, ರೂ.20,000 ಮೌಲ್ಯದ ಟಿವಿಯ ಮೇಲಿನ ತೆರಿಗೆ ಮೊದಲು ರೂ.5,600 ಆಗಿದ್ದರೆ, ಈಗ ಅದು ರೂ.3,600ಗೆ ಇಳಿಯಲಿದೆ. ಇದರಿಂದ ಗ್ರಾಹಕರಿಗೆ ಸುಮಾರು ರೂ.2,000 ಉಳಿತಾಯವಾಗಲಿದೆ.
ಜಿಎಸ್‌ಟಿ ಕಡಿತದಿಂದ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಖಚಿತವಾಗಿದ್ದು, ಮಾರಾಟ ಹೆಚ್ಚಾಗುವ ನಿರೀಕ್ಷೆಯಿದೆ. ಹೊಸ ಏಸಿ ಅಥವಾ ಟಿವಿ ಖರೀದಿಸಲು ಬಯಸುವವರು ಸೆಪ್ಟೆಂಬರ್ 22 ನಂತರ ಖರೀದಿಸುವುದೇ ಹೆಚ್ಚು ಲಾಭದಾಯಕ.
Festive Boost, GST Cut Brings Relief on Electronics



