ಫಸ್ಟ್ ಟೈಮ್ ಪರ್ಸನಲ್ ಲೋನ್ ಅಪ್ಲೈ ಮಾಡ್ತಾ ಇದ್ದೀರಾ? ಈ ತಪ್ಪುಗಳನ್ನು ತಪ್ಪಿಸಿ

ವೈಯಕ್ತಿಕ ಸಾಲ ಪಡೆದುಕೊಳ್ಳುವ ಮುನ್ನ ಕೆಲವು ಪ್ರಮುಖ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯ. ತಪ್ಪು ನಿರ್ಧಾರಗಳು ನಿಮ್ಮ ಆರ್ಥಿಕ ಪರಿಸ್ಥಿತಿಗೆ ತೊಂದರೆ ಉಂಟುಮಾಡಬಹುದು. ಈ ತಪ್ಪುಗಳನ್ನು ತಪ್ಪಿಸಿ.

  • ನಂಬಿಗಸ್ಥ ಬ್ಯಾಂಕ್ ಅಥವಾ NBFCನಿಂದಲೇ ಲೋನ್ ಪಡೆದುಕೊಳ್ಳಿ
  • ಹೆಚ್ಚು ಬಡ್ಡಿದರ ಅಥವಾ ಹಿಡೆನ್ ಶುಲ್ಕಗಳೊಂದಿಗೆ ಲೋನ್ ಬೇಡ
  • ಲೋನ್‌ಗಳ ಆಯ್ಕೆಗಳನ್ನು ಸರಿಹೊಂದಿಸಿ, ಸುಲಭ EMI ಆಯ್ಕೆಮಾಡಿ

Personal Loan : ಆರ್ಥಿಕ ತುರ್ತು ಪರಿಸ್ಥಿತಿಗಳಲ್ಲಿ ಪರ್ಸನಲ್ ಲೋನ್ (personal loan) ಒಂದು ವೇಗದ ಪರಿಹಾರ. ಆದರೆ ಮೊದಲ ಬಾರಿಗೆ ಲೋನ್ ಪಡೆಯುತ್ತಿರುವವರು ಕೆಲವೊಂದು ಮೂಲಭೂತ ವಿಷಯಗಳನ್ನು ಮರೆತರೆ, ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬಹುದು.

ಅದನ್ನು ತಪ್ಪಿಸಿಕೊಳ್ಳಲು ಈ ಕೆಳಗಿನ ವಿಷಯಗಳ ಬಗ್ಗೆ ಗಮನವಿರಲಿ.

ಮೊದಲನೆಯದು, ತಪ್ಪು ಸಾಲದಾತ (wrong lender) ಆಯ್ಕೆ ಮಾಡುವುದು ಬಹಳ ದೊಡ್ಡ ತಪ್ಪು. ಕೆಲವರು, ವಿಶ್ವಾಸವಲ್ಲದ ಲೋನ್ ಸಂಸ್ಥೆಗಳಿಂದ ಸಾಲ ಪಡೆಯುತ್ತಾರೆ. ಇದರಿಂದ ಮುಂದೆ EMI ಸಮಸ್ಯೆಗಳು, ಇತರ ಶುಲ್ಕಗಳ ತೊಂದರೆ ಎದುರಾಗಬಹುದು.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ 80-100% ಲೋನ್ ಸೌಲಭ್ಯ! ಮಿಸ್ ಮಾಡ್ಕೋಬೇಡಿ

ಯಾವಾಗಲೂ ನಂಬಿಕಸ್ಥ ಬ್ಯಾಂಕ್ ಅಥವಾ ಪಟ್ಟಿ ಮಾಡಿದ NBFC (non-banking finance company) ಇಂದಲೇ ಲೋನ್ ಪಡೆಯಬೇಕು.

ಇನ್ನು ಕೆಲವರು ಸಾಲ ಪಡೆಯುವಾಗ ಹೆಚ್ಚು ಬಡ್ಡಿದರ (high interest rate) ಬಗ್ಗೆ ಯೋಚಿಸದೆ ಒಪ್ಪಿಗೆ ನೀಡುತ್ತಾರೆ. ಪರ್ಸನಲ್ ಲೋನ್‌ಗಳು ಅನ್ ಸೆಕ್ಯೂರ್ಡ್ (unsecured loan) ಆಗಿರುವುದರಿಂದ ಬಡ್ಡಿ ಶೇಕಡಾವಾರು 10% ರಿಂದ 24% ವರೆಗೆ ಇರಬಹುದು. ಈ ರೀತಿ ಬಡ್ಡಿದರ ಹೆಚ್ಚು ಇರುವಾಗ, ಇತರ ಸಾಲಗಳೊಂದಿಗೆ ಹೋಲಿಕೆ ಮಾಡದೆ ತೀರ್ಮಾನ ತೆಗೆದುಕೊಳ್ಳುವುದು ತಪ್ಪು.

ಇದನ್ನೂ ಓದಿ: ಮಿಡ್ಲ್ ಕ್ಲಾಸ್ ಫ್ಯಾಮಿಲಿಗೆ ಕಮ್ಮಿ ಬೆಲೆಯಲ್ಲಿ ಸಿಗುವ ಟಾಪ್ 5 ಕಾರುಗಳು ಇವು

Personal Loan

ಮತ್ತೊಂದು ಸಾಮಾನ್ಯ ತಪ್ಪು ಎಂದರೆ ಹಿಡನ್ ಚಾರ್ಜ್‌ಗಳು (hidden charges) ಗಮನಿಸದಿರುವುದು. ಕೆಲವು ಕಂಪನಿಗಳು ಪ್ರಾಸೆಸಿಂಗ್ ಫೀ, ವಿಮಾ ಪಾವತಿ, ಮುಂಚಿತ ತೀರಿಸುವ ದಂಡ ಮೊದಲಾದ ರಹಸ್ಯ ಶುಲ್ಕಗಳನ್ನು ವಿಧಿಸುತ್ತವೆ.

ಈ ಶುಲ್ಕಗಳು ಪ್ರತ್ಯಕ್ಷವಾಗಿ ನಿಮಗೆ ಹೇಳಲಾಗುವುದಿಲ್ಲ. ಆದ್ದರಿಂದ ಒಪ್ಪಂದಕ್ಕೆ ಸಹಿ ಮಾಡುವ ಮೊದಲು ಎಲ್ಲಾ ಅಂಶಗಳನ್ನು ಓದಿ, ವಿವರವಾಗಿ ತಿಳಿದುಕೊಳ್ಳಿ.

ಇದನ್ನೂ ಓದಿ: ಫ್ರೀ ಕ್ರೆಡಿಟ್ ಕಾರ್ಡ್ ನೀಡೋ ಟಾಪ್ ಬ್ಯಾಂಕ್‌ಗಳು! ₹1 ರೂಪಾಯಿ ಕಟ್ಟಬೇಕಿಲ್ಲ

ವಿಭಿನ್ನ ಲೋನ್ ಆಯ್ಕೆಗಳನ್ನು ಆಲೋಚಿಸದೆ ತೆಗೆದುಕೊಳ್ಳುವುದು ಮತ್ತೊಂದು ದೊಡ್ಡ ತಪ್ಪು. EMI ಕ್ಯಾಲ್ಕುಲೇಟರ್ ಬಳಸಿ ಲೋನ್ ಆಯ್ಕೆಗಳನ್ನು ಹೋಲಿಸಿ, ನಿಮ್ಮ ಬಜೆಟ್‌ಗೆ ತಕ್ಕಂತದ್ದು ಆಯ್ಕೆಮಾಡಿ. ಕೆಲವೊಮ್ಮೆ ಕಡಿಮೆ EMIಗೆ ಹೆಚ್ಚು ಅವಧಿ ಇದ್ದರೂ ಅದು ಒಟ್ಟು ಪಾವತಿಗೆ ಜಾಸ್ತಿ ಬರುವ ಸಾಧ್ಯತೆ ಇದೆ.

ಅಂತಿಮವಾಗಿ, ನಿಜವಾದ ಅಗತ್ಯವಿಲ್ಲದೆ ಲೋನ್ ಪಡೆಯುವುದು ದೊಡ್ಡ ತಪ್ಪು. ಪರ್ಸನಲ್ ಲೋನ್ (Personal Loan) ಟೂರಿಂಗ್, ಶಾಪಿಂಗ್ ಅಥವಾ ಫ್ರೆಂಡ್ಸ್‌ಗೆ ಸಾಲ ನೀಡಲು ಬಳಸುವುದು ಆರ್ಥಿಕ ಹೊರೆ ಹೆಚ್ಚಿಸಬಹುದು. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಕೂಡ ಕೆಡಬಹುದು.

First Time Personal Loan, Avoid These Common Mistakes

About Author:

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್…🔸ಇನ್ನಷ್ಟು ಓದಿ »

Related Stories