ಕೇವಲ ₹11 ಲಕ್ಷಕ್ಕೆ ಫ್ಲಾಟ್‌! ಮನೆ ಖರೀದಿಗೆ ಬಂಪರ್ ಅವಕಾಶ, ನವೆಂಬರ್ 7 ರಿಂದ ಬುಕಿಂಗ್ ಆರಂಭ

DDA ಜನ್ ಸಾಧಾರಣ ಆವಾಸ್ ಯೋಜನೆ 2025 ಫೇಸ್‌–2 ಅಡಿಯಲ್ಲಿ ಕೇವಲ ₹11.8 ಲಕ್ಷದಿಂದ ಫ್ಲಾಟ್‌ಗಳ ಮಾರಾಟ ಶುರು. ನವೆಂಬರ್ 7ರಿಂದ ಬುಕ್ಕಿಂಗ್ ಪ್ರಾರಂಭವಾಗಲಿದೆ, ದೆಹಲಿ ನಿವಾಸಿಗಳಿಗೆ ಚಿನ್ನದ ಅವಕಾಶ.

Flats in Delhi : ರಾಜಧಾನಿ ದೆಹಲಿಯಲ್ಲೂ ಕಡಿಮೆ ಬೆಲೆಯಲ್ಲೇ ಮನೆ ಖರೀದಿ ಮಾಡುವ ಕನಸು ಸಾಕಾರವಾಗುವ ಸಮಯ ಬಂದಿದೆ. ದೆಹಲಿ ಡೆವಲಪ್‌ಮೆಂಟ್ ಅಥಾರಿಟಿ (DDA) “ಜನ್ ಸಾಧಾರಣ ಆವಾಸ್ ಯೋಜನೆ 2025 ಫೇಸ್‌–2” ಅಡಿಯಲ್ಲಿ ಹೊಸ ಹೌಸಿಂಗ್ ಯೋಜನೆಯನ್ನು ಘೋಷಿಸಿದೆ.

ಈ ಯೋಜನೆ ಮುಖ್ಯವಾಗಿ ಆರ್ಥಿಕವಾಗಿ ದುರ್ಬಲ ವರ್ಗ (EWS) ಮತ್ತು ಕಡಿಮೆ ಆದಾಯ ವರ್ಗದ (LIG) ಕುಟುಂಬಗಳಿಗೆ ಗುರಿಯಾಗಿಸಿದೆ.

ನವೆಂಬರ್ 7, 2025 ಮಧ್ಯಾಹ್ನ 12 ಗಂಟೆಯಿಂದ ಫ್ಲಾಟ್‌ಗಳ ಆನ್‌ಲೈನ್ ಬುಕ್ಕಿಂಗ್ ಪ್ರಾರಂಭವಾಗಲಿದೆ. ಅಧಿಕೃತ ವೆಬ್‌ಸೈಟ್ https://eservices.dda.org.in ಮೂಲಕ ಅರ್ಜಿ ಸಲ್ಲಿಸಬಹುದು.

ಈ ಯೋಜನೆ “ಫಸ್ಟ್ ಕಮ್, ಫಸ್ಟ್ ಸರ್ವ್” ಆಧಾರದ ಮೇಲೆ ಕಾರ್ಯಗತವಾಗಲಿದೆ. EWS ವರ್ಗದವರು ₹50,000 ಮತ್ತು LIG ವರ್ಗದವರು ₹1 ಲಕ್ಷ ಮೊತ್ತವನ್ನು ಬುಕ್ಕಿಂಗ್‌ಗಾಗಿ ಪಾವತಿಸಬೇಕು.

ನರೆಲಾ, ರೋಹಿಣಿ, ರಾಮಘರ್ ಕಾಲೋನಿ ಹಾಗೂ ಶಿವಾಜಿ ಮಾರ್ಗ್ ಪ್ರದೇಶಗಳಲ್ಲಿ ಈ ಹೊಸ ಫ್ಲಾಟ್‌ಗಳು ನಿರ್ಮಾಣಗೊಂಡಿವೆ. ನರೆಲಾದಲ್ಲಿ 1,120 ಫ್ಲಾಟ್‌ಗಳು ಇದ್ದು, ಅವುಗಳ ಗಾತ್ರ 34.8 ರಿಂದ 35.1 ಚ.ಮೀ. ವರೆಗೆ ಇದೆ. ಪ್ರಾಥಮಿಕ ಬೆಲೆ ₹13.7 ಲಕ್ಷದಿಂದ ₹13.8 ಲಕ್ಷ, ಆದರೆ 15% ರಿಯಾಯಿತಿಯ ಬಳಿಕ ಕೇವಲ ₹11.8 ಲಕ್ಷದಲ್ಲೂ ದೊರೆಯುತ್ತದೆ.

ರೋಹಿಣಿ ಸೆಕ್ಟರ್‌ 34 ಮತ್ತು 35 ಪ್ರದೇಶಗಳಲ್ಲಿ 308 LIG ಫ್ಲಾಟ್‌ಗಳು ಲಭ್ಯ. ಅವುಗಳ ಬೆಲೆ ₹14 ಲಕ್ಷದಿಂದ ₹14.2 ಲಕ್ಷದವರೆಗೆ ಇದ್ದು, ರಿಯಾಯಿತಿ ಇಲ್ಲ.

ರಾಮಘರ್ ಕಾಲೋನಿಯ ಫ್ಲಾಟ್‌ಗಳು 31.9 ರಿಂದ 35.3 ಚ.ಮೀ. ಗಾತ್ರದಲ್ಲಿದ್ದು ₹13.1 ಲಕ್ಷದಿಂದ ₹14.5 ಲಕ್ಷದವರೆಗೆ ಲಭ್ಯವಿದೆ. ಶಿವಾಜಿ ಮಾರ್ಗ್‌ನ 36 EWS ಫ್ಲಾಟ್‌ಗಳು 33.1 ರಿಂದ 45.1 ಚ.ಮೀ. ವರೆಗೆ ಗಾತ್ರ ಹೊಂದಿದ್ದು, ₹25.2 ಲಕ್ಷದಿಂದ ₹32.7 ಲಕ್ಷದವರೆಗೆ ಬೆಲೆ ನಿಗದಿಯಾಗಿದೆ.

ಮೊದಲ ಹಂತದ ಯಶಸ್ಸಿನ ಬಳಿಕ ಈ ಫೇಸ್‌–2 ಯೋಜನೆ ಆರಂಭಗೊಂಡಿದ್ದು, ಜನಸಾಮಾನ್ಯರಿಗೆ ತಮ್ಮದೇ ಮನೆ ಹೊಂದಲು ಹೊಸ ಬಾಗಿಲು ತೆರೆಯಲಿದೆ.

Flats in Delhi, DDA Phase-2 Bookings from Nov 7

Related Stories