ಮತ್ತೆ ಬರಲಿದೆ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್! ಯಾವಾಗ ಗೊತ್ತಾ..?
Flipkart Big Billion Days: ಫ್ಲಿಪ್‌ಕಾರ್ಟ್ 2026ರ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 9ರಂದು ಆರಂಭವಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಪ್ಲಸ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಪ್ರವೇಶ ಸಿಗುವ ಸಾಧ್ಯತೆಯಿದೆ.

Flipkart Big Billion Days: ಆನ್‌ಲೈನ್ ಶಾಪಿಂಗ್ ಪ್ರಿಯರು ಕಾತರದಿಂದ ಕಾಯುತ್ತಿರುವ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ (Big Billion Days) ಮತ್ತೆ ಬರಲಿದೆ ಎಂಬ ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ವರ್ಷದ ಸೇಲ್ ಅಕ್ಟೋಬರ್ 9ರಂದು ಆರಂಭವಾಗುವ ಸಾಧ್ಯತೆಯಿದೆ.
ಫ್ಲಿಪ್‌ಕಾರ್ಟ್ ಆ್ಯಪ್‌ಗೆ (Flipkart App) ಸಂಬಂಧಿಸಿದೆ ಎನ್ನಲಾದ ಸ್ಕ್ರೀನ್‌ಶಾಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿ 2026ರ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 9ರಂದು ಆರಂಭವಾಗಲಿದೆ ಎಂಬ ಮಾಹಿತಿ ಕಂಡುಬಂದಿದೆ. ಆದರೆ ಈ ದಿನಾಂಕವನ್ನು ಫ್ಲಿಪ್‌ಕಾರ್ಟ್ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.
ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಸಾಮಾನ್ಯ ಗ್ರಾಹಕರಿಗಿಂತ ಒಂದು ದಿನ ಮುಂಚಿತವಾಗಿ ಸೇಲ್ ಪ್ರವೇಶ ಸಿಗಬಹುದು. ಅಂದರೆ ಅಕ್ಟೋಬರ್ 8ರಿಂದಲೇ ಆಯ್ದ ಆಫರ್‌ಗಳನ್ನು ಪಡೆಯುವ ಅವಕಾಶ ಇರುವ ಸಾಧ್ಯತೆಯಿದೆ.
ಈ ಬಾರಿಯ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಗಳು ಸಿಗುವ ನಿರೀಕ್ಷೆಯಿದೆ. ಹಬ್ಬದ ಸೀಸನ್ ಆರಂಭಕ್ಕೂ ಮುನ್ನ ಶಾಪಿಂಗ್ ಮಾಡಲು ಕಾಯುತ್ತಿರುವವರಿಗೆ ಇದು ಪ್ರಮುಖ ಸೇಲ್ ಆಗಲಿದೆ.
ಇನ್ನು ಅರ್ಹ ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಶೇ.10ರವರೆಗೆ ತ್ವರಿತ ರಿಯಾಯಿತಿ (Instant Discount) ಸಿಗಬಹುದು ಎಂಬ ಮಾಹಿತಿಯೂ ಸ್ಕ್ರೀನ್‌ಶಾಟ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಕನಿಷ್ಠ ಖರೀದಿ ಮೊತ್ತ, ಗರಿಷ್ಠ ರಿಯಾಯಿತಿ ಹಾಗೂ ಯಾವ ಕಾರ್ಡ್‌ಗಳಿಗೆ ಆಫರ್ ಅನ್ವಯಿಸುತ್ತದೆ ಎಂಬ ಸಂಪೂರ್ಣ ವಿವರ ಇನ್ನೂ ಹೊರಬಿದ್ದಿಲ್ಲ.
ಕಳೆದ ವರ್ಷದ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 23ರಂದು ಆರಂಭವಾಗಿತ್ತು. ಪ್ಲಸ್ ಮತ್ತು ಬ್ಲ್ಯಾಕ್ ಸದಸ್ಯರಿಗೆ 24 ಗಂಟೆಗಳ ಮುಂಗಡ ಪ್ರವೇಶ ನೀಡಲಾಗಿತ್ತು. ಆ ಸಂದರ್ಭದಲ್ಲಿ ಆಪಲ್, ಸ್ಯಾಮ್‌ಸಂಗ್, ಮೋಟೊರೊಲಾ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭರ್ಜರಿ ಡೀಲ್‌ಗಳನ್ನು ನೀಡಲಾಗಿತ್ತು.
ಕಳೆದ ವರ್ಷದಂತೆ ಈ ಬಾರಿಯೂ ಸೀಮಿತ ಅವಧಿಯ ಆಫರ್‌ಗಳು, ರಷ್ ಅವರ್ ಡೀಲ್‌ಗಳು ಹಾಗೂ ವಿಶೇಷ ಡಿಸ್ಕೌಂಟ್‌ಗಳು ಗ್ರಾಹಕರನ್ನು ಸೆಳೆಯುವ ಸಾಧ್ಯತೆಯಿದೆ. ಹೀಗಾಗಿ ಹೊಸ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ಯೋಚಿಸುತ್ತಿರುವವರು ಸೇಲ್‌ಗಾಗಿ ಕಾಯುತ್ತಿರುವುದು ಸಹಜ.
ಆದರೆ ಸದ್ಯ ಹರಿದಾಡುತ್ತಿರುವ ದಿನಾಂಕ ಮತ್ತು ಆಫರ್‌ಗಳ ಬಗ್ಗೆ ಗ್ರಾಹಕರು ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳಿತು. ಫ್ಲಿಪ್‌ಕಾರ್ಟ್ (Flipkart) ಅಧಿಕೃತವಾಗಿ ಸೇಲ್ ದಿನಾಂಕ, ಬ್ಯಾಂಕ್ ಆಫರ್‌ಗಳು ಮತ್ತು ಭಾಗವಹಿಸುವ ಬ್ರ್ಯಾಂಡ್‌ಗಳ ವಿವರಗಳನ್ನು ಪ್ರಕಟಿಸಿದ ಬಳಿಕವೇ ಅಂತಿಮ ಮಾಹಿತಿ ಸ್ಪಷ್ಟವಾಗಲಿದೆ.



