ಬರಿ 4500ಕ್ಕೆ ಸ್ಮಾರ್ಟ್ಫೋನ್ಗಳು! ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2025
Flipkart ಬಿಗ್ ಬಿಲಿಯನ್ ಡೇಸ್ ಸೇಲ್ 2025ನಲ್ಲಿ Ai+ ಕಂಪನಿಯ ಸ್ಮಾರ್ಟ್ಫೋನ್ಗಳು ಕಡಿಮೆ ದರದಲ್ಲಿ ಲಭ್ಯ, 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಗ್ರಾಹಕರಿಗೆ ಬಂಪರ್ ಅವಕಾಶ

Flipkart Big Billion Days Sale 2025 : ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2025 ಆರಂಭಕ್ಕೂ ಮುಂಚೆಯೇ Ai+ ಕಂಪನಿ ತಮ್ಮ ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ. Ai+ ಪಲ್ಸ್ 4G ಮತ್ತು Ai+ ನೊವಾ 5G ಸ್ಮಾರ್ಟ್ಫೋನ್ಗಳು ಶಕ್ತಿಯುತ ಫೀಚರ್ಗಳೊಂದಿಗೆ ಕಡಿಮೆ ದರದಲ್ಲಿ ಲಭ್ಯವಾಗಿವೆ.
Ai+ ಪಲ್ಸ್ 4G ಫೋನ್ ಮೂಲ ಬೆಲೆ 5,999 ರೂ. ಬದಲು 4,499 ರೂ.ಕ್ಕೆ ಲಭ್ಯವಿದ್ದು, Ai+ ನೊವಾ 5G 8,999 ರೂ.ನ ಬದಲು 6,999 ರೂ.ಕ್ಕೆ ಕಡಿತಗೊಂಡಿದೆ. ಎರಡೂ ಫೋನ್ಗಳು 6.7 ಇಂಚು HD ಡಿಸ್ಪ್ಲೆ, Ai+ ನೊವಾ 120Hz ರಿಫ್ರೆಶ್ ರೇಟ್, Ai+ ಪಲ್ಸ್ 90Hz ರಿಫ್ರೆಶ್ ರೇಟ್ ಮತ್ತು 50MP AI ಡ್ಯೂಯಲ್ ಕ್ಯಾಮೆರಾ ಹೊಂದಿವೆ.
ಇದನ್ನೂ ಓದಿ: ಸ್ಮಾರ್ಟ್ ಟಿವಿಗಳ ಮೇಲೆ 70% ರಿಯಾಯಿತಿ! ಅಮೆಜಾನ್ ನಲ್ಲಿ ಆಫರ್ಗಳ ಸುರಿಮಳೆ
5000mAh ಬ್ಯಾಟರಿ ದಿನದ ಸಂಪೂರ್ಣ ಬ್ಯಾಕಪ್ ನೀಡುತ್ತದೆ. ಸ್ಮಾರ್ಟ್ಫೋನ್ಗಳಲ್ಲಿ ಸೈಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು 1TB ವರೆಗೆ ಸ್ಟೋರೆಜ್ ವಿಸ್ತರಣೆ ಸಾಧ್ಯ. ದೇಶೀಯ NxtQuantum OS ಫೋನ್ಗಳಲ್ಲಿದೆ, ಇದು ಬಳಕೆದಾರರ ಪ್ರೈವೇಸಿ ಮತ್ತು ಭದ್ರತೆಗೆ ವಿಶೇಷ ಗಮನ ನೀಡುತ್ತದೆ.
ಫ್ಲಿಪ್ಕಾರ್ಟ್ನಲ್ಲಿ ಈ ಫೋನ್ಗಳನ್ನು ಬ್ಲಾಕ್ ಮತ್ತು ಪ್ಲಸ್ ಸದಸ್ಯರು 24 ಗಂಟೆ ಮುಂಚಿತವಾಗಿ ಸೆಪ್ಟೆಂಬರ್ 22 ರಿಂದ ಖರೀದಿಸಬಹುದು. ಸಾಮಾನ್ಯ ಗ್ರಾಹಕರು ಸೇಲ್ ಆರಂಭವಾದ ದಿನವೇ ಖರೀದಿಸಬಹುದು. ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯ: ಬ್ಲಾಕ್, ಬ್ಲೂ, ಗ್ರೀನ್, ಪಿಂಕ್ ಮತ್ತು ಪರ್ಪಲ್.
ಈ ಫೋನ್ಗಳು ಬಿಗ್ ಬಿಲಿಯನ್ ಡೇಸ್ ಸಮಯದಲ್ಲಿ ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿರುತ್ತವೆ. ಈ ಕೊಡುಗೆಗಳು ಫ್ಲಿಪ್ಕಾರ್ಟ್ ಪ್ಲಸ್ ಮತ್ತು ಬ್ಲಾಕ್ ಸದಸ್ಯರಿಗೆ ಸೆಪ್ಟೆಂಬರ್ 22 ರಿಂದ 24 ಗಂಟೆಗಳ ಮುಂಚಿತವಾಗಿ ಲಭ್ಯವಿರುತ್ತವೆ. ಸಾಮಾನ್ಯ ಮಾರಾಟವು ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುತ್ತದೆ.
Flipkart Big Billion Days Sale 2025 brings amazing deals



