ಐಫೋನ್ಗಿಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್! ಫ್ಲಿಪ್ಕಾರ್ಟ್ ಬಂಪರ್ ಆಫರ್
ದಸರಾ ಫೆಸ್ಟಿವಲ್ಗಾಗಿ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಆಂಪಿಯರ್ ಮ್ಯಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ₹70,000ಕ್ಕೂ ಲಭ್ಯ. ಐಫೋನ್ ಬೆಲೆಗಿಂತ ಕಡಿಮೆ ಧರದಲ್ಲಿ ಸಿಗುತ್ತಿದೆ.

Electric Scooter: ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಈಗ ಸ್ಮಾರ್ಟ್ಫೋನ್ಗಳಷ್ಟೇ (Smartphone) ಅಲ್ಲದೆ, ಎಲೆಕ್ಟ್ರಿಕ್ ಸ್ಕೂಟರ್ಗಳಿಗೂ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಆಫರ್ನಲ್ಲಿ ಜನಪ್ರಿಯ EV ಕಂಪನಿ ಆಂಪಿಯರ್ನಿಂದ ಬಿಡುಗಡೆಯಾದ ಮ್ಯಾಗ್ನಸ್ ನಿಯೋ ಸ್ಕೂಟರ್ ಈಗ ಐಫೋನ್ ಬೆಲೆಗೆ ಹೋಲಿಸಿದರೆ ಕಡಿಮೆ ದರದಲ್ಲಿ ಸಿಗುತ್ತಿದೆ.
ಶೋ ರೂಮ್ ಬೆಲೆ ಸುಮಾರು ₹90,000 ಇದ್ದರೂ, ಫ್ಲಿಪ್ಕಾರ್ಟ್ ಸೇಲ್ನಲ್ಲಿ (Flipkart Sale) ಈ ಸ್ಕೂಟರ್ ಕೇವಲ ₹81,999 ಕ್ಕೆ ದೊರೆಯುತ್ತಿದೆ. ವಿಶೇಷ ಬ್ಯಾಂಕ್ ಆಫರ್ಗಳನ್ನು ಬಳಸಿದರೆ (ICICI ಅಥವಾ Axis Credit Card ಮೂಲಕ), ಇನ್ನೂ ₹11,000 ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಇದರಿಂದ ಸ್ಕೂಟರ್ ಕೇವಲ ₹70,000 ಕ್ಕೆ ಲಭ್ಯವಾಗುತ್ತದೆ. ಯುಪಿಐ ಪಾವತಿ ಮಾಡಿದರೂ ಕನಿಷ್ಠ ₹7,000 ರಿಯಾಯಿತಿ ಸಿಗುತ್ತದೆ.
ಹೊಸ ಸ್ಕೂಟರ್ ಖರೀದಿಸಲು ಯೋಚಿಸುತ್ತಿರುವವರು ದಸರಾ ಹಬ್ಬದ ಸಮಯದಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸಾಮಾನ್ಯವಾಗಿ ಸ್ಮಾರ್ಟ್ಫೋನ್ಗಳ ಬೆಲೆಗಿಂತ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ದುಬಾರಿಯಾಗಿರುತ್ತವೆ. ಆದರೆ ಈ ಬಾರಿ ಫ್ಲಿಪ್ಕಾರ್ಟ್ನಲ್ಲಿ ಐಫೋನ್, ಸ್ಯಾಮ್ಸಂಗ್, ವಿವೋ ಮುಂತಾದ ಪ್ರೀಮಿಯಂ ಫೋನ್ಗಳಿಗಿಂತ ಕಡಿಮೆ ದರದಲ್ಲಿ ಸ್ಕೂಟರ್ ದೊರೆಯುತ್ತಿದೆ.
ಮ್ಯಾಗ್ನಸ್ ನಿಯೋ (ampere magnus neo electric scooter) ವೈಶಿಷ್ಟ್ಯಗಳನ್ನು ನೋಡಿದರೆ, 2.5 ಕಿಲೋವಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 90 ಕಿಲೋಮೀಟರ್ಗಳಷ್ಟು ಪ್ರಯಾಣಿಸಬಹುದು. ಗರಿಷ್ಠ ವೇಗ ಗಂಟೆಗೆ 65 ಕಿಮೀ. ಫುಲ್ ಚಾರ್ಜ್ ಆಗಲು 5 ಗಂಟೆಗಳ ಕಾಲ ಹಿಡಿಯುತ್ತದೆ. 3.5 ಇಂಚಿನ ಡಿಜಿಟಲ್ ಕಾನ್ಸೋಲ್, IP67 ವಾಟರ್ಪ್ರೂಫ್ ರೇಟಿಂಗ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಎಲ್ಇಡಿ ಹೆಡ್ಲೈಟ್ಸ್, ಹಾಗೂ 22 ಲೀಟರ್ ಅಂಡರ್ಸೀಟ್ ಸ್ಟೊರೇಜ್ ಸೌಲಭ್ಯ ಇವೆ.
ಈ ಸ್ಕೂಟರ್ ಐದು ವರ್ಷ ಅಥವಾ 75,000 ಕಿಮೀ ವರೆಗಿನ ವಾರಂಟಿ ಹೊಂದಿದೆ. ಬ್ಯಾಟರಿಗಾಗಿ ಮೂರು ವರ್ಷ ಅಥವಾ 30,000 ಕಿಮೀ ವಾರಂಟಿ ನೀಡಲಾಗಿದೆ. ಹಬ್ಬದ ಕಾಲದಲ್ಲಿ EV ಖರೀದಿಸಲು ಬಯಸುವವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.
Flipkart Sale, Electric Scooter Cheaper Than iPhone



