ನಿಮಗಾಗಿ ಮೀಸಲು ಈ ಉಚಿತ ಪಿಂಚಣಿ ಯೋಜನೆ; ಪಡೆಯಿರಿ ಪ್ರತಿ ತಿಂಗಳು 3 ಸಾವಿರ ಪಿಂಚಣಿ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು (Central Government) ಸಮಾಜದಲ್ಲಿ ವಾಸಿಸುವ ಪ್ರತಿಯೊಂದು ವರ್ಗದವರಿಗೂ ಕೂಡ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತವೆ. ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೆ ಆರ್ಥಿಕವಾಗಿ ಸಹಾಯವಾಗುವಂತಹ ಸರ್ಕಾರದ ಸ್ಕಿಮ್ ಗಳು ಜಾರಿಯಲ್ಲಿ ಇದ್ದು, ಇಂತಹ ಹಲವು ಸ್ಕ್ರೀಮ್ (scheme) ಗಳ ಬಗ್ಗೆ ಜನರಿಗೆ ಅರಿವು ಇರುವುದಿಲ್ಲ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆಯಲ್ಲಿ ನೀವು ಸುಲಭವಾಗಿ ನಿಮ್ಮ ವೃದ್ಧಾಪ್ಯದಲ್ಲಿ ಪ್ರತಿ ತಿಂಗಳು ಪಿಂಚಣಿ (Pension) ಪಡೆಯಬಹುದಾಗಿದೆ. ಹಾಗಾದ್ರೆ ಆ ಯೋಜನೆ ಯಾವುದು ಯಾವ ರೀತಿ ಪ್ರಯೋಜನ ಪಡೆದುಕೊಳ್ಳುವುದು ನೋಡೋಣ.

ಈ ಎಲ್ಲಾ ಮಾರುತಿ ಕಾರುಗಳ ಮೇಲೆ ರೂ 40,000 ಡಿಸ್ಕೌಂಟ್! ಹಬ್ಬದ ಸೀಸನ್‌ಗೆ ಬಂಪರ್ ಆಫರ್

ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ: (PM Shrama Yogi Mandhan Scheme)

ವಯಸ್ಸಾದವರು 60 ವರ್ಷ ದಾಟಿದ ನಂತರ ಆರ್ಥಿಕವಾಗಿ ಯಾವುದೇ ಸಮಸ್ಯೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯನ್ನು ಬಹುತೇಕ ಉಚಿತ ಪಿಂಚಣಿ ಯೋಜನೆ ಎಂದೇ ಹೇಳಬಹುದು, ಯಾಕೆಂದರೆ ಇದರಲ್ಲಿ ನೀವು ಪಾವತಿಸಬೇಕಾಗಿರುವ ಮೊತ್ತ ಅತ್ಯಲ್ಪ. ಈ ಯೋಜನೆಯ ಅಡಿ ನೀವು ಕೇವಲ 55 ರೂಪಾಯಿಗಳನ್ನು ಖರ್ಚು ಮಾಡಿದರೆ ನಿಮಗೆ 60 ವರ್ಷದ ನಂತರ ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆದುಕೊಳ್ಳಬಹುದು.

ಬಹು ನಿರೀಕ್ಷಿತ ಸ್ಪೋರ್ಟ್ಸ್ ಬೈಕ್ TVS Apache RTR 310 ಬಿಡುಗಡೆ, ಕೇವಲ 3,100 ಕ್ಕೆ ಬುಕಿಂಗ್ ಮಾಡಿಕೊಳ್ಳಿ

ಯಾರು ಅರ್ಜಿ ಸಲ್ಲಿಸಲು ಅರ್ಹರು

Pension Schemes• ಈ ಯೋಜನೆಗೆ 18 ರಿಂದ 40 ವರ್ಷ ವಯಸ್ಸಿನ ಒಳಗಿನವರು ಅರ್ಜಿ ಸಲ್ಲಿಸಬಹುದು.
• ಸಣ್ಣಪುಟ್ಟ ವ್ಯಾಪಾರ ಮಾಡುವ ಹೋಟೆಲ್ ಕೆಲಸಗಾರರು, ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡಿರುವವರು ಹೀಗೆ ತಮ್ಮದೇ ಆದ ವೃತ್ತಿಯಲ್ಲಿ ತೊಡಗಿಕೊಂಡಿರುವವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
• ಅತಿ ಕಡಿಮೆ ಆದಾಯ ಬರುವ ಅಂದರೆ ತಿಂಗಳಿಗೆ 15,000 ರೂ. ಗಳಿಗಿಂತ ಕಡಿಮೆ ಆದಾಯ ಇರುವವರು ಹಾಗೂ ನಿರುದ್ಯೋಗಿಗಳು ಕೂಡ ಈ ಯೋಜನೆಯ ಪ್ರಯೋಜನ ತೆಗೆದುಕೊಳ್ಳಬಹುದು.
ಬೇಕಾಗಿರುವ ದಾಖಲೆಗಳು:
ನೀವು ಈ ಯೋಜನೆಯನ್ನು ಆರಂಭಿಸುವುದಾದರೆ ಹತ್ತಿರದ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಶ್ರಮ ಯೋಗಿ ಮನ ಧನ್ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್ ಸ್ವಘೋಷಿತ ಪ್ರಮಾಣ ಪತ್ರ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಕೊಡಬೇಕು.

ಈ ಯೋಜನೆಯ ಅಡಿಯಲ್ಲಿ ನೀವು ಪ್ರತಿ ತಿಂಗಳು 55 ರೂಪಾಯಿಗಳಿಂದ ಗರಿಷ್ಠ 200 ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಹೀಗೆ ಮಾಡಿದರೆ ನಿಮಗೆ 60 ವರ್ಷಗಳ ನಂತರ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿಗಳ ಪಿಂಚಣಿ ಸಿಗುತ್ತದೆ. ಈ ಯೋಜನೆಯನ್ನು ಮಾಡಿಸಿರುವ ವ್ಯಕ್ತಿ ಮರಣ ಹೊಂದಿದರೆ ಆತನ ಪತ್ನಿಗೆ ಯೋಜನೆಯ ಹೂಡಿಕೆಯ ಹಣವನ್ನು ನೀಡಲಾಗುತ್ತದೆ.

ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

• ನೀವು ಆನ್ಲೈನ್ ಮೂಲಕವೇ ಅರ್ಜಿ (Application) ಸಲ್ಲಿಸಬಹುದು. ಇದಕ್ಕಾಗಿ ಮೊದಲು www.maandhan.in ಈ ಅಧಿಕೃತ ವೆಬ್ಸೈಟ್ ಅನ್ನು ತೆರೆಯಿರಿ.
• ಈ ಫೋಟೋ ತೆರೆದ ನಂತರ ಸ್ವಯಂ ನೋಂದಾಯಿಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
• ಈಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಬೇಕು. ಬಳಿಕ ಪ್ರೋಸೀಡ್ (proceed) ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
• ಇಲ್ಲಿ ನಿಮಗೆ ಒಂದು ಫಾರ್ಮ್ ಸಿಗುತ್ತದೆ.
• ಈ ಫಾರ್ಮ್ ಅಥವಾ ಅರ್ಜಿಯನ್ನು ಭರ್ತಿ ಮಾಡಿಕೊಂಡು, ಕಾರ್ಮಿಕರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕು.
ಈ ರೀತಿ ಮಾಡಿದರೆ ನಿಮ್ಮ ಉಳಿತಾಯ ಖಾತೆಯಿಂದಲೇ ಪ್ರತಿ ತಿಂಗಳು ನೀವು ಎಷ್ಟು ಮೊತ್ತವನ್ನು ನಿಗದಿಪಡಿಸಿಕೊಂಡಿರುತ್ತೀರೋ (55ರೂ.) ಅಷ್ಟು ಹಣ ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಪ್ರಧಾನಮಂತ್ರಿ ಶ್ರಮ ಯೋಗಿ ಸೇರುತ್ತದೆ. ಬಹಳ ಸಣ್ಣ ಮೊತ್ತವಾಗಿರುವುದರಿಂದ ನೀವು ಸುಲಭವಾಗಿ ಪ್ರತಿ ತಿಂಗಳು ಎಷ್ಟು ಹಣವನ್ನು ಪಾವತಿ ಮಾಡಿ 60 ವರ್ಷದ ನಂತರ ಉಚಿತವಾಗಿಯೇ ಪಿಂಚಣಿ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹತೆ ಇರುವವರು ತಕ್ಷಣವೇ ಅರ್ಜಿ ಸಲ್ಲಿಸಿ.

Free Pension Scheme by Government

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories