Aadhaar Card Update: ಆಧಾರ್ ಕಾರ್ಡ್ ನವೀಕರಣಕ್ಕೆ ಜೂನ್ 14 ರವರೆಗೆ ಮಾತ್ರ ಗಡುವು, ಇಲ್ಲದಿದ್ದರೆ ಶುಲ್ಕ ಪಾವತಿಸಬೇಕು!
Aadhaar Card Update: ಅಲ್ಲದೆ, ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಮೂಲಕ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅದೇ ಸಮಯದಲ್ಲಿ ಅನೇಕ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಖಡ್ಡಾಯವಾಗಿದೆ.
Aadhaar Card Update: ಈಗ ಆಧಾರ್ ಕಾರ್ಡ್ ಮಹತ್ವ ಬಹಳಷ್ಟಿದೆ, ಸಾಮಾನ್ಯ ಗುರುತಿನ ಚೀಟಿಯಾಗಿ ಬಳಕೆಯಿಂದ ಹಿಡಿದು ಬ್ಯಾಂಕ್ (Bank Account), ಪ್ಯಾನ್ ಕಾರ್ಡ್ (Pan Card) ತನಕ ನಾನಾ ವಿಧದಲ್ಲಿ ಆಧಾರ್ ಕಾರ್ಡ್ ಬೇಕಾಗಿದೆ.
ಅಲ್ಲದೆ, ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ (Aadhaar Card Benefits) ಮೂಲಕ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅದೇ ಸಮಯದಲ್ಲಿ ಅನೇಕ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಖಡ್ಡಾಯವಾಗಿದೆ.
ಈ ನಡುವೆ ಆಧಾರ್ ಕಾರ್ಡ್ ಉಚಿತ ಅಪ್ ಡೇಟ್ (Aadhaar Free Update) ಮಾಡಿಕೊಳ್ಳಲು ಕೇಂದ್ರ ಜೂನ್ 14 ರ ತನಕ ಗಡುವು ಸೂಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ದಾಖಲೆಗಳ ಆನ್‌ಲೈನ್ ನವೀಕರಣವನ್ನು (Aadhar Online Update) 14 ಜೂನ್ 2023 ರವರೆಗೆ ಉಚಿತವಾಗಿ ಮಾಡಿಕೊಳ್ಳಬಹುದಾಗಿದೆ.
ಸಾಮಾನ್ಯವಾಗಿ ಆಧಾರ್ ವಿವರಗಳನ್ನು ನವೀಕರಿಸಲು ಸುಮಾರು ರೂ.50 ಅಥವಾ ರೂ.100 ಶುಲ್ಕವಿತ್ತು. ಈಗ ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ ವಿವರಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸುವುದು ಜೂನ್ 14 ರವರೆಗೆ ಉಚಿತವಾಗಿದೆ.
ಚಿನ್ನದ ಬೆಲೆ ಇನ್ನಷ್ಟು ಇಳಿಕೆಯಾಗಲಿದೆ, ಕಡುಬಡವರು ಖರೀದಿಸುವಂತಾಗಬೇಕು ಚಿನ್ನ ಮತ್ತು ಬೆಳ್ಳಿ! ಹೇಗಿದೆ ಇಂದಿನ ದರಗಳು
ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿದೆ. ಭೌತಿಕ ಆಧಾರ್ ಕೇಂದ್ರಗಳಲ್ಲಿ ರೂ 50 ಶುಲ್ಕ ಮುಂದುವರಿಯುತ್ತದೆ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
UIDAI ಮೂಲಕ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಸೂಚಿಸಲಾಗಿದೆ, ಆಗಿದ್ದಲ್ಲಿ ಮಾತ್ರ ಉಚಿತದ ಸೌಲಭ್ಯ ಪಡೆಯಬಹುದಾಗಿದೆ. ಜೊತೆಗೆ ನೀವು ಆಧಾರ್ ಕಾರ್ಡ್ ಪಡೆದು 10 ವರ್ಷಗಳು ಆಗಿದ್ದರೂ ಸಹ ಕಾರ್ಡ್‌ನಲ್ಲಿರುವ ವಿವರಗಳನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ.
ಆಧಾರ್ ಕಾರ್ಡ್ ಆನ್‌ಲೈನ್‌ನಲ್ಲಿ ನವೀಕರಿಸುವುದು ಹೇಗೆ?
ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ವೆಬ್‌ಸೈಟ್ (UIDAI Website) ಮೂಲಕ ಲಾಗಿನ್ ಮಾಡಿ .
‘ವಿಳಾಸವನ್ನು ನವೀಕರಿಸಲು ಮುಂದುವರಿಯಿರಿ’ ಆಯ್ಕೆಯನ್ನು ಆರಿಸಿ.
ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
ಇದರ ನಂತರ ನೀವು ‘ಡಾಕ್ಯುಮೆಂಟ್ ಅಪ್‌ಡೇಟ್’ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಇದರ ನಂತರ, ಏನನ್ನಾದರೂ ನವೀಕರಿಸಬಹುದಾಗಿದೆ
ಅಂತಿಮವಾಗಿ ‘ಸಲ್ಲಿಸು’ ಬಟನ್ ಆಯ್ಕೆಮಾಡಿ. Document ಪ್ರತಿಗಳನ್ನು Upload ಮಾಡಿ.
ಆಧಾರ್ ಅಪ್‌ಡೇಟ್ ವಿನಂತಿಯನ್ನು ಅನುಮೋದಿಸಲಾಗುತ್ತದೆ ಮತ್ತು 14-ಅಂಕಿಯ ಅಪ್‌ಡೇಟ್ ವಿನಂತಿ ಸಂಖ್ಯೆ (URN) ಅನ್ನು ರಚಿಸಲಾಗುತ್ತದೆ.
ನವೀಕರಣ ವಿನಂತಿ ಸಂಖ್ಯೆ (URN) ಬಳಸಿಕೊಂಡು ಆಧಾರ್ ವಿಳಾಸ ನವೀಕರಣ ಸ್ಥಿತಿಯನ್ನು ಪರಿಶೀಲಿಸಬಹುದು. ನವೀಕರಿಸಿದಾಗ, ನೀವು ನವೀಕರಿಸಿದ ಆವೃತ್ತಿಯನ್ನು Download ಮಾಡಬಹುದು, ಮುದ್ರಿತ ಆಧಾರ್ ಕಾರ್ಡ್ ಅನ್ನು ಪಡೆಯಬಹುದು.
ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ರೂ.70 ಲಕ್ಷದವರೆಗೆ ಗಳಿಸಿ! ಬಂಪರ್ ಆಫರ್ ಮಿಸ್ ಮಾಡ್ಕೋಬೇಡಿ
Free Update Aadhaar Card Before June 14 otherwise you have to pay